ಕಾಂಗ್ರೆಸ್ ಗೆ ಆತಂಕ ತಂದಿರುವ ಡಿಕೆಶಿ ಕೋರ್ಟ್ ಮ್ಯಾಟರ್!

ಡಿಜಿಟಲ್ ಕನ್ನಡ ಟೀಮ್:

ಇಂದನ ಸಚಿವ ಡಿಕೆ ಶಿವಕುಮಾರ್ ಸಿದ್ದಾರಮಯ್ಯ ಸಂಪುಟದ ಪವರ್ ಫುಲ್ ಮಿನಿಸ್ಟರ್. ತಂತ್ರಗಾರಿಗೆ ಹಾಗೂ ಅಖಾಡ ರಾಜಕೀಯದಲ್ಲಿ ನಿಪುಣರಾಗಿರುವ ಡಿಕೆ ಶಿವಕುಮಾರ್ ಹೈಕಮಾಂಡ್ ಗೂ ಕೂಡ ಹಾಟ್ ಫೇವರಿಟ್ ಲೀಡರ್. ಇದೀಗ ಡಿಕೆ ಶಿವಕುಮಾರ್ ವಿರುದ್ಧ ಕೋರ್ಟ್ ಜಾರಿ ಮಾಡಿರೋ ನೋಟಿಸ್ ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿದೆ. ಒಂದು ವೇಳೆ ಡಿಕೆ ಶಿವಕುಮಾರ್ ಗೆ ಜಾಮೀನು ಸಿಗದೆ ಹೋದರೆ ಪರಿಸ್ಥಿತಿ ಬಿಗಡಾಯಿಸುತ್ತದೆ. ಆಗ ಯಾವ ನಡೆ ಇಡಬೇಕು ಅನ್ನೋ ಬಗ್ಗೆ ಕಾಂಗ್ರೆಸ್ ತಲೆಕೆಡಿಸಿಕೊದೆ.

ಕಳೆದ ವರ್ಷ ರಾಜ್ಯಸಭಾ ಚುನಾವಣೆ ವೇಳೆ ಗುಜರಾತಿನ ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಸೆಳೆಯುತ್ತಿದೆ ಅನ್ನೊ ಕಾರಣಕ್ಕೆ ಎಲ್ಲಾ ಕೈ ಶಾಸಕರನ್ನು ಬೆಂಗಳೂರಿನ ಈಗಲ್ ಟನ್ ರೆಸಾರ್ಟ್ ನಲ್ಲಿ ಡಿಕೆಶಿ ಕಣ್ಗಾವಲಿನಲ್ಲಿ ಇರಿಸಲಾಗಿತ್ತು. ಈ ವೇಳೆ ಡಿಕೆಶಿ ಮನೆ ಮೇಲೆ ಊಟಿ ರೇಡ್ ಆಗಿತ್ತು. ಆ ಬಳಿಕ ಈಗಲ್ ಟನ್ ರೆಸಾರ್ಟ್ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ರು. ಅಧಿಕಾರಿಗಳನ್ನು ನೋಡಿದ್ದ ಡಿಕೆಶಿ ಕೈನಲ್ಲಿದ್ದ ಲೆಕ್ಕಪತ್ರದ ಪೇಪರ್ ಒಂದನ್ನು ಹರಿದು ಬಿಸಾಕಿದ್ರು ಅಂತ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ರು. ಆ ಬಳಿಕ ಶಿವಕುಮಾರ್ ವಿರುದ್ಧ ಕ್ರಿಮಿನಲ್ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಲಾಗಿತ್ತು.

ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿದ್ದ ಪ್ರಕರಣಕ್ಕೆ ಮರುಜೀವ ಬಂದಿದ್ದು, ಡಿಕೆಶಿ ವಿರುದ್ದ ಎರಡು ಜಾಮೀನು ರಹಿತ ಕೇಸ್ ದಾಖಲು ಮಾಡಲಾಗಿದೆ ಅನ್ನೋ ಮಾಹಿತಿ ಸಿಕ್ಕಿದೆ. ಡಿಕೆಶಿ ವಿರುದ್ದ ಎರಡು ಎಫ್ಐಆರ್ ದಾಖಲು ಮಾಡಲು ಸಿಬಿಐ ಆರ್ಥಿಕ ಅಪರಾಧಗಳ ನ್ಯಾಯಾಲಯದ ಜಡ್ಜ್ ಮೋಹನ್ ಶಾಂತಪ್ಪ ಆಳ್ವಾ ಅವರು ಅನುಮತಿ ನೀಡಿದ್ದಾರೆ ಎನ್ನಲಾಗಿದ್ದು, ಸದ್ಯ ಜಾಮೀನು ಪಡೆಯಲು ಡಿಕೆಶಿ ತೆರೆಮರೆ ಪ್ರಯತ್ನ ನಡೆಸಿದ್ದಾರೆ. ಜಾಮೀನು ಸಿಗದಿದ್ದರೆ ನ್ಯಾಯಾಂಗ ಬಂಧನಕ್ಕೆ ಒಳಗಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಜೈಲಿಗೆ ಹೋಗಿ ಬಂದವರನ್ನು ಜೊತೆಯಲ್ಲಿ ಕೂರಿಸಿಕೊಂಡು ಏನು ಮಾತನಾಡ್ತೀರಿ ಎಂದು ಬಿಜೆಪಿ ಮುಖಂಡರನ್ನು ಪ್ರಶ್ನೆ ಮಾಡ್ತಿದ್ದ ಸಿಎಂ ಸಿದ್ದರಾಮಯ್ಯ ಅವರನ್ನು ಎದುರಾಳಿಗಳನ್ನು ಹೆದರಿಸುವುದು ಹೇಗೆಂಬ ಪ್ರಶ್ನೆ ಕಾಡ್ತಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ‘ನನಗೆ ಯಾವುದೇ ನೋಟಿಸ್ ಬಂದಿಲ್ಲ. ನಾನು ಯಾವುದೇ ದಾಖಲೆ ಹರಿದು ಹಾಕಿಲ್ಲ. ನನ್ನ ಮೇಲೆ ಗೂಬೆ ಕೂರಿಸಲು ಕೆಲವರು ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂಬ ಸ್ಪಷ್ಟನೆ ನೀಡಿದ್ದಾರೆ. ಇನ್ನು ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಹೇಳೋದಿಷ್ಟು ‘ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರನ್ನು ಹೆದರಿಸಲು ಈ ರೀತಿಯ ಐಟಿ ದಾಳಿಯನ್ನು ಬಳಸಲಾಗುತ್ತಿದೆ. ಇದು ಕೇವಲ ಚುನಾವಣೆ ಗಿಮಿಕ್.’

Leave a Reply