ಕಾವೇರಿ ವಿಚಾರಣೆ: ಕೊನೆಗೂ ರಾಜ್ಯದ ಪಾಲಿಗೆ ಕಣ್ತೆರೆದ ನ್ಯಾಯ ದೇವತೆ

ಡಿಜಿಟಲ್ ಕನ್ನಡ ಟೀಮ್:

ಕಾವೇರಿ ಕರ್ನಾಟದ ಪಾಲಿಗೆ ಕೇವಲ ನದಿಯಲ್ಲ.. ತಾಯಿ! ಹೀಗಿರುವಾಗ ಪ್ರತಿ ಬಾರಿ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ನ್ಯಾಯಾಲಯದ ವಿಚಾರದಲ್ಲಿ ಕರ್ನಾಟಕಕ್ಕೆ ನಿರಂತರವಾಗಿ ಹಿನ್ನಡೆಯಾಗುತ್ತಲೇ ಬಂದಿತ್ತು. ಆದರೆ ಇಂದು ರಾಜ್ಯಕ್ಕೆ ನ್ಯಾಯಸಿಕ್ಕಿದೆ. ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠ ಕರ್ನಾಟಕ, ತಮಿಳುನಾಡು ಮತ್ತು ಕೇರಳದ ನಡುವೆ ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸಿದ್ದು, ಕರ್ನಾಟರಕ್ಕೆ ಹೆಚ್ಚುವರಿಯಾಗಿ 14.5 ಟಿಎಂಸಿ ನೀರು ನೀಡಿದೆ. ಅದರೊಂದಿಗೆ ಅನೇಕ ವರ್ಷಗಳ ಕಾನೂನು ಹೋರಾಟದಲ್ಲಿ ರಾಜ್ಯದ ಜನರಲ್ಲಿ ಮಂದಹಾಸ ಬೀರುವಂತೆ ಮಾಡಿದೆ. ಇಷ್ಟು ವರ್ಷ ರಾಜ್ಯದ ವಿರುದ್ಧ ತೀರ್ಪನ್ನು ಕೇಳಿ ಕೇಳಿ ಜನರಿಗೆ ಕಾವೇರಿ ವಿಚಾರದಲ್ಲಿ ನ್ಯಾಯಾಲಯದ ತೀರ್ಪಿನ ಮೇಲೆ ಬೇಸರ ವ್ಯಕ್ತವಾಗಿತ್ತು. ಆದರೆ ಇಂದು ಬಂದಿರುವ ಸಮತೋಲಿತ ತೀರ್ಪು ಸಮಾಧಾನ ತಂದಿದೆ.

ಶುಕ್ರವಾರ ನಡೆದ ಅಂತಿಮ ವಿಚಾರಣೆ ವೇಳೆ ಸುಪ್ರೀಂ ಕೋರ್ಟಿನಲ್ಲಿ ನಡೆದ ಪ್ರಮುಖ ಬೆಳವಣಿಗೆಗಳು ಹೀಗಿವೆ…

  • ಸಂವಿಧಾನದಡಿ ಕರ್ನಾಟಕಕ್ಕೆ ಚೌಕಾಶಿ ಮಾಡುವ ಅಧಿಕಾರ.
  • ಬ್ರಿಟಿಷ್ ಕಾಲದ ಒಪ್ಪಂದಗಳ ತೀರ್ಪಿನಲ್ಲಿ ಉಲ್ಲೇಖ. 50 ವರ್ಷಗಳ ಬಳಿಕ ಒಪ್ಪಂದ ರದ್ದಾಗುತ್ತವೆ ಎಂದು ಸ್ಪಷ್ಟನೆ.
  • ನ್ಯಾಯಾಧೀಕರಣ ಅನುಸರಿಸಿರುವ ಕ್ರಮ ಸರಿಯಾಗಿದೆ. ನದಿಗಳು ರಾಷ್ಟ್ರೀಯ ಸಂಪತ್ತು ಎಂದ ಕೋರ್ಟ್.
  • ಯಾವುದೇ ಒಂದು ರಾಜ್ಯ ಸಂಪೂರ್ಣ ಹಕ್ಕು ಸಾಧಿಸುವಂತಿಲ್ಲ. ಉಭಯ ರಾಜ್ಯಗಳು ಸಮಾನ ಹಂಚಿಕೆ ತತ್ವ ಪಾಳಿಸಬೇಕು.
  • ಕೇರಳ, ಪುದುಚೇರಿ ನೀಡಿರುವ ತಲಾ 30ಟಿಎಂಸಿ ಹಾಗೂ 7 ಟಿಎಂಸಿ ನೀರು ಹಂಚಿಕೆ ಸರಿಯಿದೆ. ಕರ್ನಾಟಕ, ತಮಿಳುನಾಡಿಗೆ 177 ಟಿಎಂಸಿ ನೀರು.
  • ಕರ್ನಾಟಕ ನೀರಾವರಿ ಪ್ರದೇಶವನ್ನು ಹೆಚ್ಚಳ ಮಾಡಿಕೊಳ್ಳಬಹುದು ಎಂದು ಹೇಳುವ ಮೂಲಕ ಕರ್ನಾಟಕದ ಮೇಲ್ಮನವಿಗೆ ಸುಪ್ರೀಂ ಭಾಗಶಃ ಒಪ್ಪಿಗೆ ನೀಡಿದ ಸಿಜೆಐ ನೇತೃತ್ವದ ಪೀಠ.
  • ಮುಂದಿನ 15 ವರ್ಷಕ್ಕೆ ಟ್ರಿಬ್ಯುನಲ್ ಅನ್ವಯ. 15 ವರ್ಷಗಳ ಬಳಿಕ ಸುಪ್ರೀಂ ಕೋರ್ಟಿನ ತೀರ್ಪನ್ನು ಮರಪರಿಶೀಲಿಸಬಹುದು.
  • 1892, 1924 ರ ಎರಡೂ ಒಪ್ಪಂದಗಳು ಸಿಂಧು. ಕಾವೇರಿ ನಿರ್ವಹಣಾ ಮಂಡಳಿ ರಚನೆ ಕೇಂದ್ರದ ಕೆಲಸ ಎಂದ ಸುಪ್ರೀಂ.

Leave a Reply