ಆಲ್ರೌಂಡ್ ಬಜೆಟ್ ಮಂಡಿಸಿದ ಸಿದ್ದು!

ಡಿಜಿಟಲ್ ಕನ್ನಡ ಟೀಮ್:

ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ 13ನೇ ಬಾರಿಗೆ ರಾಜ್ಯ ಬಜೆಟ್ ಮಂಡನೆ ಮಾಡಿದ್ದಾರೆ. ಚುನಾವಣೆ ಹೊಸ್ತಿಲ್ಲಲ್ಲಿರುವ ಸಂದರ್ಭದಲ್ಲಿ ಮಂಡನೆಯಾದ ಈ ಬಜೆಟ್ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ನಿರೀಕ್ಷೆಗೆ ತಕ್ಕಂತೆ ಸಿದ್ದರಾಮಯ್ಯ ಸತತ 4 ಗಂಟೆ 13 ನಿಮಿಷ ಘೋಷಣೆಗಳ ಸುರಿಮಳೆಗೈದರು.

ಕೃಷಿ, ನೀರಾವರಿ, ಶಿಕ್ಷಣ, ಮೂಲಭೂತ ಸೌಕರ್ಯ, ಶಿಕ್ಷಣ, ಆರೋಗ್ಯದಂತಹ ಪ್ರಮುಖ ಕ್ಷೇತ್ರಗಳಿಂದ ಹಿಡಿದು, ಬೆಂಗಳೂರು, ಉತ್ತರ ಕರ್ನಾಟಕ ಜಿಲ್ಲೆಗಳು ಒಳಗೊಂಡು, ಮಹಿಳೆ ಮಕ್ಕಳ ಕಲ್ಯಾಣ, ದಲಿತರ ಅಭಿವೃದ್ಧಿ, ಹಿಂದುಳಿದವರ ಏಳಿಗೆಗೆ ಸಮರ್ಪಕವಾಗಿ ಅನುದಾನ ಬಿಡುಗಡೆ ಮಾಡಿದ್ದಾರೆ. ಸಿದ್ದರಾಮಯ್ಯನವರ ಈ ಬಜೆಟ್ ನ ಪ್ರಮುಖ ಅಂಶಗಳು ಹೀಗಿವೆ…

 • ಬೆಳಗಾವಿ ಜಿಲ್ಲೆಯ ಸತ್ತಿಗೇರಿ ಏತ ನೀರಾವರಿ ಯೋಜನೆಗೆ ₹ 210 ಕೋಟಿ.
 • ಜಾನುವಾರುಗಳಿಗೆ ಮೇವು ಒದಗಿಸಲು ‘ರಾಜ್ಯ ಮೇವು ಭದ್ರತಾ ನೀತಿ’.
 • ಸ್ಥಗಿತಗೊಂಡಿರುವ 183 ಏತ ನೀರಾವರಿ ಯೋಜನೆಗಳ ಪುನಶ್ಚೇತನ.
 • ನೇತ್ರಾವತಿ ನದಿಗೆ ಉಪ್ಪುನೀರು ತಡೆಯಲು ಕಿಂಡಿ ಅಣೆಕಟ್ಟು ನಿರ್ಮಾಣ.
 • ಬೆಂಗಳೂರಿಗೆ 2,500 ಕೋಟಿ ಬಂಪರ್ ಅನುದಾನವೇತನ ಹೆಚ್ಚಳದಿಂದ 93 ಲಕ್ಷ ಸರಕಾರಿ ನೌಕರರು, 5.73 ಲಕ್ಷ ಪಿಂಚಣಿದಾರರಿಗೆ ಅನುಕೂಲ. ಏ.1ರಿಂದ ಆದೇಶ ಜಾರಿ.
 • ಕರ್ನಾಟಕ ಖಾದಿ ಮಂಡಳಿಯ ಬಿಪಿಎಲ್ ಕುಟುಂಬಗಳ ಮರುಪಾವತಿ ಬಾಕಿ ಸಾಲ ಮನ್ನಾ.
 • ವನ್ಯ ಜೀವಿ ದಾಳಿಯಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ 5 ವರ್ಷ 2 ಸಾವಿರಮಾಸಾಶನ.
 • ಆಡು ಮತ್ತು ಕುರಿ ಸಾಕಣೆ ಪ್ರೋತ್ಸಾಹಕ್ಕೆ 50 ಕೋಟಿ ಸಾಲ.
 • ಕುರಿ ಸಾಕಣೆದಾರರ ಸಹಕಾರಿ ಬ್ಯಾಂಕ್‌ನ 50,000 ಮಧ್ಯಮಾವಧಿ ಸಾಲ ಮನ್ನಾ.
 • ತುಂಗಭದ್ರಾ ನದಿಯಿಂದ ಜಗಳೂರು ತಾಲೂಕಿನ 46 ಕೆರೆಗಳಿಗೆ ನೀರು.
 • ಕೆ.ಆರ್ ಪುರಂ ಸಂಸ್ಕರಣಾ ಘಟಕದಿಂದ ಹೊಸಕೋಟೆ ತಾಲೂಕಿನ 30 ಕೆರೆಗಳಿಗೆ ನೀರು.
 • ಕಲಬುರಗಿಯಲ್ಲಿ ‘ಕಲಬುರಗಿ ಕಲಾವನ’ ನಿರ್ಮಾಣದ ಗುರಿ.
 • ಭೂ ಮಾಪನ ಇಲಾಖೆಯಿಂದ 5 ಮೊಬೈಲ್ ಆ್ಯಪ್ ಅಭಿವೃದ್ಧಿ.
 • ವೃತ್ತಿ ನಿರತ ಪತ್ರಕರ್ತರಿಗೆ ₹ 5 ಲಕ್ಷ ‘ಮಾಧ್ಯಮ ಸಂಜೀವಿನಿ’ ಜೀವವಿಮೆ.
 • ಸರಕಾರಿ ಕಾಲೇಜು ವಿದ್ಯಾರ್ಥಿನಿಯರಿಗೆ ಪೂರ್ಣ ಶುಲ್ಕ ವಿನಾಯಿತಿ.
 • ಕುರಿ ಮಾರುಕಟ್ಟೆಯ ಅಭಿವೃದ್ಧಿಗೆ ₹ 5 ಕೋಟಿ.
 • ನಗರ ಸ್ಥಳೀಯ ಸಂಸ್ಥೆಗಳಿಗೆ ಪೌರಕಾರ್ಮಿಕನನ್ನು ಸದಸ್ಯನಾಗಿ ನಾಮನಿರ್ದೇಶನ.
 • ಬೆಂಗಳೂರಿನಲ್ಲಿ 5 ಕೋಟಿ ರು. ವೆಚ್ಚದ ಪತ್ರಕರ್ತರ ಭವನ.
 • ಪ.ಜಾತಿ ಹುಡುಗ ಅನ್ಯಜಾತಿಯವಳನ್ನು ವಿವಾಹವಾದರೆ ₹ 3 ಲಕ್ಷ.
 • ದೇವದಾಸಿಯರ ಹೆಣ್ಣು ಮಕ್ಕಳ ಮದುವೆಗೆ ₹ 5 ಲಕ್ಷ ಗಂಡು ಮಕ್ಕಳಿಗೆ ₹ 3 ಲಕ್ಷ ಪ್ರೋತ್ಸಾಹ ಧನ
 • ಬೆಂಗಳೂರು-ಮೈಸೂರು ಕಾರಿಡಾರ್‌ನಲ್ಲಿ ರೇಷ್ಮೆ ಟೂರಿಸಂ ಅಭಿವೃದ್ಧಿ.
 • ಎಲ್ಲ ಸರಕಾರಿ  ಶಾಲೆಗಳಲ್ಲಿ ಸಿಸಿಟಿವಿ ಅಳವಡಿಕೆ.

Leave a Reply