ಕಾಂಗ್ರೆಸ್, ಬಿಜೆಪಿಗಿಂತ ಜೆಡಿಎಸ್ ಭಿನ್ನ ಹೇಗೆ?

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿಗೆ ಪರ್ಯಾಯವಾಗಿ ಅಧಿಕಾರ ರಚನೆ ಮಾಡುವ ಅಭಿಲಾಷೆ ಹೊಂದಿರುವ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿಗೆ ಮಾದರಿಯಾಗುವಂತೆ ನಡೆದುಕೊಂಡಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ನಡೆಯಲಿರುವ ಜೆ.ಡಿ.ಎಸ್ ಸಮಾವೇಶಕ್ಕೆ ಹತ್ತು ಲಕ್ಷ ಜನ ಕಾರ್ಯಕರ್ತರು ಭಾಗಿಯಾಗುವಂತೆ ಸಿದ್ಧತೆ ಮಾಡಿಕೊಂಡಿತ್ತು. ಇಂದಿನ ವಿಕಾಸ ಪರ್ವ ಸಮಾವೇಶದಲ್ಲಿ ಬಿ.ಎಸ್.ಪಿ ಮುಖ್ಯಸ್ಥೆ ಮಾಯಾವತಿ ಸೇರಿದಂತೆ ರಾಜ್ಯದ ಎಲ್ಲಾ ನಾಯಕರು ಭಾಗಿಯಾಗಿದ್ದರು.

ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಗಳೂರಿಗೆ ಕರೆತಂದು ಬೃಹತ್ ರ‌್ಯಾಲಿ ಮಾಡುವ ಮೂಲಕ ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭವನ್ನು ಅದ್ದೂರಿಯಾಗಿ ಮುಗಿಸಿತು. ಕಾಂಗ್ರೆಸ್ ಕೂಡ ರಾಹುಲ್ ಗಾಂಧಿ ನೇತೃತ್ವದಲ್ಲಿ ಬೃಹತ್ ಸಮಾವೇಶ ಮಾಡಿ ಚುನಾವಣೆಗೆ ಸಜ್ಜಾಗಿದ್ದೇನೆಂದು ಸಾರಿ ಹೇಳಿತು. ಜೆಡಿಎಸ್ ಕೂಡ ಅದನ್ನೇ ಮಾಡುತ್ತಿದೆ. ಆದರೆ ನಗರದಿಂದ ಹೊರಭಾಗದಲ್ಲಿ ಕಾರ್ಯಕ್ರಮ ನಡೆಸಿದ ಕಾರಣ ನಗರ ವಾಸಿಗಳಿಗೆ ಯಾವುದೇ ಸಮಸ್ಯೆ ಇಲ್ಲ. ಬಿಜೆಪಿ ಅರಮನೆ ಮೈದಾನದಲ್ಲಿ ಸಮಾರೋಪ ಸಮಾರಂಭ ಮಾಡಿದ್ರಿಂದ ಜನರು ಪರದಾಡುವಂತಾಯ್ತು, ಟ್ರಾಫಿಕ್ ನಲ್ಲಿ ಸಿಲುಕಿದ ಜನರು ಗಂಟೆಗಟ್ಟಲೆ ಬಿಲಿನಲ್ಲಿ ಒಣಗುವಂತಾಯ್ತು. ಕಾಂಗ್ರೆಸ್ ಕೂಡ ಬಳ್ಳಾರಿಯಲ್ಲಿ ಕಾರ್ಯಕ್ರಮ ನಡೆಸಿದ್ರಿಂದ ಸಮಸ್ಯೆ ಕಾಣಲಿಲ್ಲ. ಆದರೆ ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಸಿದ್ರೆ ಅರಮನೆ ಮೈದಾನವನ್ನೇ ಕಾಂಗ್ರೆಸ್ ಆಯ್ಕೆ ಮಾಡಿಕೊಳ್ಳುತ್ತಿತ್ತು. ಈಗಾಗಲೇ ಕಾಂಗ್ರೆಸ್ ಅರಮನೆ ಮೈದಾನದಲ್ಲಿ ಸಾಕಷ್ಟು ಸಮಾರಂಭಗಳನ್ನು ಮಾಡಿದೆ. ಆದರೆ ಜೆಡಿಎಸ್ ನಗರದ ಹೊರಗೆ ಕಾರ್ಯಕ್ರಮ ನಡೆಸುತ್ತಿದ್ದು, ಸಮಾವೇಶದ ಬಿಸಿ ಸಾಮಾನ್ಯ ಜನರಿಗೆ ತಟ್ಟದಂತೆ ನೋಡಿಕೊಂಡಿದೆ. ಇನ್ನಾದರೂ ಜೆಡಿಎಸ್ ಮಾಡುತ್ತಿರುವ ಹಾಗೆ ನಗರದ ಹೊರಗೆ ಸಭೆ ಸಮಾರಂಭಗಳು ಶಿಫ್ಟ್ ಆಗಬೇಕಿದೆ.

Leave a Reply