ಚುನಾವಣಾ ಸಮರಕ್ಕೆ ಜೆಡಿಎಸ್ ಮೊದಲ ಪಡೆ ಅಂತಿಮ

ಡಿಜಿಟಲ್ ಕನ್ನಡ ಟೀಮ್:

ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಮೊದಲ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ ಹಾಗೂ ಬಿಜೆಪಿಗೆ ತೊಡೆ ತಟ್ಟಿದೆ. ಯಲಹಂಕದಲ್ಲಿ ಶನಿವಾರ ನಡೆದ ವಿಕಾಸ ಪರ್ವ ಸಮಾವೇಶದಲ್ಲಿ ಲಕ್ಷಾಂತರ ಜನರ ಮುಂದೆ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡುವ ಮೂಲಕ ರಾಜ್ಯ ಚುನಾವಣೆಗೆ ತಾನು ಸಿದ್ಧಗೊಂಡಿದ್ದೇನೆ ಎಂಬ ಸಂದೇಶ ರವಾನಿಸಿದೆ.

ಸಮಾವೇಶದಲ್ಲಿ ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಜತೆಗೆ ವೇದಿಕೆ ಹಂಚಿಕೊಳ್ಳುವ ಮೂಲಕ ಮಾಜಿ ಪ್ರಧಾನಿ ದೇವೇಗೌಡರು ಮುಂಬರುವ ವಿಧಾನ ಸಭೆ ಚುನಾವಣೆಯ ಮೈತ್ರಿ ಸಾರಿದ್ದಾರೆ. ಜೆಡಿಎಸ್ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ 126 ಅಭ್ಯರ್ಥಿಗಳ ಹೆಸರಿದ್ದು, ಇವುಗಳಲ್ಲಿ ಬಹುತೇಕ ನಿರೀಕ್ಷೆಯ ಹೆಸರುಗಳೇ ಕೇಳಿ ಬಂದಿವೆ. ಭದ್ರಾವತಿಯಲ್ಲಿ ಅಪ್ಪಾಜಿಗೌಡ, ಸೊರಬದಲ್ಲಿ ಮಧು ಬಂಗಾರಪ್ಪ, ಕಡೂರಿನಲ್ಲಿ ವೈಎಸ್ ವಿ ದತ್ತಾ, ಬಸವನಗುಡಿಯಲ್ಲಿ ಬಾಗೇಗೌಡ, ಮಹಾಲಕ್ಷ್ಮಿ ಲೇಔಟ್ ನಿಂದ ಗೋಪಾಲಯ್ಯ, ಹೆಬ್ಬಾಳದಲ್ಲಿ ಹನುಮಂತೇಗೌಡ, ರಾಮನಗರದಿಂದ ಹೆಚ್.ಡಿ ಕುಮಾರಸ್ವಾಮಿ, ಹೊಳೆನರಸಿಪುರದಿಂದ ಹೆಚ್.ಡಿ ರೇವಣ್ಣ ನಿರೀಕ್ಷೆಯಂತೆ ಗೆಲ್ಲುವ ಅಭ್ಯರ್ಥಿಗಳ ಹೆಸರು ರಾರಾಜಿಸುತ್ತಿವೆ.

ಇನ್ನು ಬಂಡಾಯ ಶಾಸಕರ ಕ್ಷೇತ್ರಗಳಲ್ಲಿ ಬದಲಿಯಾಗಿ ನಾಗಮಂಗಲದಲ್ಲಿ ಸುರೇಶ್ ಗೌಡ, ಮಾಗಡಿಯಲ್ಲಿ ಮಂಜು ಹೆಸರು ಪ್ರಕಟವಾಗಿದ್ದರೂ ಚಾಮರಾಜಪೇಟೆಯ ಅಭ್ಯರ್ಥಿ ಹೆಸರು ಅಂತಿಮವಾಗಿಲ್ಲ. ಇನ್ನು ಸಾಕಷ್ಟು ಚರ್ಚೆಗೆ ಕಾರಣವಾಗಿರುವ ರಾಜರಾಜೇಶ್ವರಿ ನಗರ ಹಾಗೂ ಚನ್ನಪಟ್ಟಣದ ಅಭ್ಯರ್ಥಿಗಳು ಪ್ರಕಟವಾಗಿಲ್ಲ. ಈ ಎರಡು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರು ಅಂತಿಮವಾಗದಿರುವುದು ಅನಿತಾ ಕುಮಾರಸ್ವಾಾಮಿ ಹಾಗೂ ಪ್ರಜ್ವಲ್ ರೇವಣ್ಣ ಅವರ ಸ್ಪರ್ಧೆ ಸಾಧ್ಯತೆಯನ್ನು ತೋರುತ್ತಿದೆ. ಒಟ್ಟಿನಲ್ಲಿ ಜೆಡಿಎಸ್ ಎಲ್ಲೆಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಗೆ ತೊಡೆ ತಟ್ಟಿ ಸ್ಪರ್ಧಿಸಲಿದೆಯೋ ಅವುಗಳ ಪಟ್ಟಿ ಬಿಡುಗಡೆಯಾಗಿದೆ. ರಾಜರಾಜೇಶ್ವರಿ ನಗರ ಮತ್ತು ಚೆನ್ನಪಟ್ಟಣ ಅಭ್ಯರ್ಥಿಗಳ ಹೆಸರು ಸಿನಿಮೀಯ ರೀತಿಯ ಕುತೂಹಲ ಉಳಿಸಿಕೊಳ್ಳಲು ಬಿಡುಗಡೆ ಮಾಡಿಲ್ಲ. ಒಟ್ಟಿನಲ್ಲಿ ಈ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಿಎಸ್ಪಿ, ಎನ್ ಸಿಪಿ ಪಕ್ಷಗಳ ಮೈತ್ರಿ ಹೊಂದುತ್ತಿರುವ ಜೆಡಿಎಸ್ ಮುಂದಿನ ದಿನಗಳಲ್ಲಿ ಯಾವ ರೀತಿ ಹೆಜ್ಜೆ ಇಡಲಿದೆ ಎಂಬುದರ ಬಗ್ಗೆ ಇನ್ನಷ್ಟು ಕುತೂಹಲ ಹುಟ್ಟುವಂತೆ ಮಾಡಿದೆ. ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಹೀಗಿದೆ…

Leave a Reply