ಮೋದಿ- ರುಹಾನಿ ಭೇಟಿ, ಭಾರತಕ್ಕಾಗುವ ಲಾಭಗಳೇನು?

ಡಿಜಿಟಲ್ ಕನ್ನಡ ಟೀಮ್:

ಇರಾನ್ ಅಧ್ಯಕ್ಷ ಹಸನ್ ರುಹಾನಿ ಮೂರು ದಿನಗಳ ಭಾರತ ಪ್ರವಾಸದಲ್ಲಿದ್ದು, ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯಲ್ಲಿ ಉಭಯ ದೇಶಗಳ ನಡುವೆ ಮಹತ್ವದ ಒಪ್ಪಂದಗಳು ನಡೆಯಲಿದ್ದು, ಭಾರತಕ್ಕೆ ದೊಡ್ಡ ಅನುಕೂಲವಾಗಲಿದೆ. ಹಾಗಾದರೆ ಈ ಭೇಟಿಗೆ ಸಂಬಂಧಿಸಿದ ಪ್ರಮುಖ ಅಂಶಗಳೇನು ನೋಡೋಣ ಬನ್ನಿ…

  • ಇಂದು ಪ್ರಧಾನಿ ಮೋದಿ ಜತೆ ರುಹಾನಿ ಚರ್ಚೆ. ನಂತರ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರೊಂದಿಗೆ ಮಾತುಕತೆ.
  • ಈ ಮಾತುಕತೆಯಲ್ಲಿ ವ್ಯಾಪಾರ, ಭದ್ರತೆ, ಸಂಪರ್ಕ ಹಾಗೂ ಚೀನಾ ಹಾಗೂ ಪಾಕಿಸ್ತಾನದ ರಾಜತಾಂತ್ರಿಕ ಕುತಂತ್ರಕ್ಕೆ ಪ್ರತಿ ತಂತ್ರವಾಗಿರುವ ಚಬಹರ್ ಬಂದರಿನ ಪ್ರಾಮುಖ್ಯತೆ ಬಗ್ಗೆ ಚರ್ಚೆ.
  • ಇರಾನ್ ಜತೆಗಿನ ಒಪ್ಪಂದದ ಪ್ರಕಾರ ಚಬಹರ್ ಬಂದರನ್ನು ಸುಸಜ್ಜಿತಗೊಳಿಸಲು ಭಾರತದಿಂದ 85 ಮಿಲಿಯನ್ ಡಾಲರ್ ಬಂಡವಾಳ ಹೂಡಿಕೆ. ಈ ಬಂದರಿನ ಮೂಲಕ ಇರಾನ್, ಅಫ್ಘಾನಿಸ್ತಾನ ಜತೆಗೆ ಮಧ್ಯಪ್ರಾಚ್ಯ ರಾಷ್ಟ್ರಗಳು ಹಾಗೂ ಯುರೋಪ್ ರಾಷ್ಟ್ರಗಳಿಗೆ ಸಂಪರ್ಕ ಸಾಧಿಸಬಹುದು.
  • ಇರಾನ್ ನೈಸರ್ಗಿಕ ಅನಿಲ ಹಾಗೂ ಕಚ್ಚಾ ತೈಲ ಸಂಪನ್ಮೂಲ ಹೆಚ್ಚಾಗಿ ಹೊಂದಿರುವುದರಿಂದ ಭಾರತ ಇರಾನಿಗೆ ಎರಡನೇ ಅತಿ ದೊಡ್ಡ ಆಮದು ರಾಷ್ಟ್ರವಾಗುವ ಉದ್ದೇಶ. ಅದರೊಂದಿಗೆ ತೈಲ ಸಂಪನ್ಮೂಲ ಬಳಕೆಗೆ ಅವಕಾಶ.
  • ಫರ್ಜಾದ್ ಬಿ ಅನಿಲ ಕೇಂದ್ರದಿಂದ ನೈಸರ್ಗಿಕ ಅನಿಲ ಪಡೆಯುವ ಕುರಿತು ಮಾತುಕತೆ.
  • ಎರಡು ದೇಶಗಳ ಜನರ ಪ್ರಯಾಣಕ್ಕೆ ವಿಸಾ ನೀತಿಯಲ್ಲಿ ಅನುಕೂಲ ಮಾಡಿಕೊಳ್ಳುವುದು.
  • ಇರಾನಿನಲ್ಲಿ ಭಾರತೀಯ ಉದ್ಯಮಗಳು ಹೆಚ್ಚುವುದಕ್ಕೆ ಭಾರತೀಯ ರುಪಾಯಿಯಲ್ಲಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಲಾಗುವುದು. ಇದರಿಂದ ಉಭಯ ದೇಶಗಳ ವ್ಯಾಪಾರಕ್ಕೆ ದೊಡ್ಡ ಉತ್ತೇಜನ.

Leave a Reply