ಕನ್ನಡಿಗರ ಭಾವನೆಗೆ ಭಗನಿಗೂಟ ಇಟ್ಟ ರಜನಿ!

ಡಿಜಿಟಲ್ ಕನ್ನಡ ಟೀಮ್:

ರಜನಿಕಾಂತ್ ಎನ್ನುತ್ತಿದ್ದ ಹಾಗೆ ಕರ್ನಾಟಕದ ಸುಪುತ್ರ ಅನ್ನೋ ಹೆಮ್ಮೆ ಕನ್ನಡಿಗರದ್ದು. ಆದ್ರೆ ರಜನಿಕಾಂತ್ ನಡೆದುಕೊಳ್ಳುತ್ತಿರೋದನ್ನು ನೋಡಿದ್ರೆ ಕರ್ನಾಟಕ ಕಂದನಲ್ಲ, ಬದಲಿಗೆ ಸೆರಗಿನ ಕೆಂಡ ಅನ್ನೋ ರೀತಿ ನಡ್ಕೋತ್ತಿದ್ದಾರೆ. ಇದರಿಂದಾಗಿ ಕರ್ನಾಟಕದ ಒಳಕ್ಕೆ ರಜನಿಕಾಂತ್ ಬರೋದನ್ನೇ ತಡೆಯಬೇಕು ಎಂದು ಸ್ವಾಭಿಮಾನಿ ಕನ್ನಡಿಗರ ಮನಸು ತುಡಿಯುತ್ತಿದರೆ ಅದರಲ್ಲಿ ತಪ್ಪೇನೂ ಇಲ್ಲ.

ಯಾಕಂದ್ರೆ ರಜನಿಕಾಂತ್ ಕನ್ನಡಿಗರು ದ್ವೇಷಿಸುವ ಕೆಲಸ ಮಾಡ್ತಿದ್ದಾರೆ. ಕಾವೇರಿ ವಿಷಯದಲ್ಲಿ ಕನ್ನಡಿಗರು ಸಂಭ್ರಮಲ್ಲಿ ಇರುವಾಗ ಅದಕ್ಕೆ ಹುಳಿ ಹಿಂಡುವ ಕೆಲಸವನ್ನು ಸ್ವಹಿತಾಸಕ್ತಿಗಾಗಿ ಮಾಡುತ್ತಿದ್ದಾರೆ ಸೂಪರ್ ಸ್ಟಾರ್ ರಜನಿಕಾಂತ್.

ಕಾವೇರಿ ತೀರ್ಪನ್ನು ಇಡೀ ಕರ್ನಾಟವೇ ಒಪ್ಪಿದೆ. ಸುಪ್ರೀಂಕೋರ್ಟ್ ಈಗ ಕೊಟ್ಟಿರುವ ಆದೇಶವನ್ನು ಪಾಲಿಸೋದು ಕಷ್ಟ ಎಂದು ಗೊತ್ತಿದ್ದರೂ ದಾಯಾದಿ ತಮಿಳುನಾಡಿನ ಜೊತೆ ಕಿತ್ತಾಟ ಬೇಡ ಅನ್ನೋ ಕಾರಣಕ್ಕೆ ತೀರ್ಪು ಸ್ವಾಗತ ಮಾಡಿದ್ದಾರೆ. ಅದೇ ಕಾರಣಕ್ಕೆ ತಮಿಳುನಾಡಿನ ರೈತರೂ ಕೂಡ ಸ್ವಾಗತ ಮಾಡುತ್ತೇವೆ ಎಂದಿದ್ದಾರೆ. ಆದ್ರೆ ನಮ್ಮ ಮನೆಯ ಮಗ, ಕನ್ನಡಿಗರ ಹೆಮ್ಮೆ ರಜನಿಕಾಂತ್ ಕಾವೇರಿ ತೀರ್ಪನ್ನು ಖಂಡಿಸುತ್ತೇನೆ. ತಮಿಳುನಾಡು ಸರ್ಕಾರ ಕೂಡಲೇ ಮೇಲ್ಮನವಿ ಸಲ್ಲಿಸಬೇಕು ಎಂದಿದ್ದಾರೆ.

ರಜನಿಕಾಂತ್ ತಮಿಳುನಾಡು ರಾಜಕೀಯಕ್ಕೆ ಪ್ರವೇಶ ಮಾಡಿದ್ದು, ಮುಂದಿನ ಚುನಾವಣೆಯಲ್ಲಿ ಉಮೇದುವಾರಿಕೆ ಮೂಲಕ ಸಿಎಂ ಪಟ್ಟಕ್ಕೆ ಏರುವ ಕನಸು ಕಾಣ್ತಿದ್ದಾರೆ. ಒಂದು ವೇಳೆ ರಜಿನಿಕಾಂತ್ ಸಿಎಂ ಪಟ್ಟ ಅಲಂಕರಿಸಿದರೆ ಕರ್ನಾಟಕದ ಪಾಲಿಕೆ ಮತ್ತೊಬ್ಬಳು ಜಯಲಲಿತಾ ಜನನವಾಯಿತು ಎಂದೇ ಅರ್ಥ. ಯಾಕಂದ್ರೆ ತಮಿಳುನಾಡಿನ ಜನರನ್ನು ಓಲೈಸುವ ಉದ್ದೇಶದಿಂದ ಹುಟ್ಟೂರಿನ ಜನರಿಗೆ ಮಣ್ಣು ತಿನ್ನಿಸಲು ಹಿಂಜರಿಕೆ ಇಲ್ಲದ ವ್ಯಕ್ತಿತ್ವ ಇವರದ್ದು. ಜಯಲಲಿತಾ ಕೂಡ ತವರಿಗೆ ಸಹಾಯ ಮಾಡಿದ್ರು ಅನ್ನೋ ಆರೋಪದಿಂದ ತಪ್ಪಿಸಿಕೊಳ್ಳಲು ಕಾವೇರಿ ನದಿ ವಿಚಾರವಾಗಿ ಸದಾ ಕಾಲು ಕೆರೆದು ಜಗಳಕ್ಕೆ ಬರುತ್ತಿದ್ರು. ರಜನಿಕಾಂತ್ ಕೂಡ ಅದೇ ಹಾದಿಯಲ್ಲಿ ಸಾಗ್ತಿದ್ದು, ಸಿಎಂ ಆಗಿ ಬಿಟ್ಟರೆ, ಕರ್ನಾಟಕದ ಪಾಲಿಗೆ ಮರಣ ಶಾಸನ ಅನ್ನೋದು ಶತಸಿದ್ಧ. ರಜನಿಕಾಂತ್ ಅವರ ಹೇಳಿಕೆಗಳನ್ನು ನೋಡುತ್ತಿದ್ದರೆ ಸಹಬಾಳ್ವೆ, ಅನುಸರಿಸಿಕೊಳ್ಳು ಜಾಯಮಾನ ಇಲ್ಲ ಎನಿಸುವಂತಿದೆ.

ಈಗಾಗಲೇ ರಾಮನಗರ ಚನ್ನಪಟ್ಟಣ ಸೇರಿ ಹಲವು ಕಡೆ ರಜನಿಕಾಂತ್ ಹೇಳಿಕೆ ವಿರೋಧಿಸಿ ಪ್ರತಿಭಟನೆ ನಡೆದಿವೆ. ರಜನಿ ಸಿಎಂ ಆಗದೇ ಇದ್ದರೆ ಕರ್ನಾಟಕದ ಪಾಲಿಗೆ ನೆಮ್ಮದಿ ಸಿಗಬಹುದು ಎನ್ನುತ್ತಿದ್ದಾರೆ ಜನ.

Leave a Reply