ಕಾಂಗ್ರೆಸ್ ವಿರುದ್ಧ ಮತ್ತೆ ಕಮಿಷನ್ ಅಸ್ತ್ರ ಪ್ರಯೋಗಿಸಿದ ಮೋದಿ!

ಡಿಜಿಟಲ್ ಕನ್ನಡ ಟೀಮ್:

‘ನಿಮಗೆ ಕಮಿಷನ್ ಸರ್ಕಾರ ಬೇಕೋ? ಅಥವಾ ಮಿಷನ್ ಸರ್ಕಾರ ಬೇಕೋ?’ ಇದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ‘ನವಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ- ಈ ಬಾರಿ ಬಿಜೆಪಿ’ ಬೃಹತ್ ಸಮಾವೇಶದಲ್ಲಿ ಪ್ರಧಾನಿ ಮೋದಿ ಜನರಿಗೆ ಪ್ರಶ್ನಿಸುತ್ತಲೇ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ ಪರಿ.

ಇದೇ ತಿಂಗಳು ಮೊದಲವಾರದಲ್ಲಿ ಬೆಂಗಳೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರವನ್ನು ಶೇ. 10 ಕಮಿಷನ್ ಸರಕಾರವೆಂದು ಜರಿದಿದ್ದ ಮೋದಿ,ಈ ಬಾರಿ ಸಿಎಂ ಸಿದ್ದರಾಮಯ್ಯ ಅವರ ತವರು ನೆಲದಲ್ಲೇ ನಿಂತು ಟೀಕಿಸಿದರು. ಮೋದಿ ಅವರ ಭಾಷಣದ ಮುಖ್ಯಾಂಶಗಳು ಹೀಗಿವೆ…

  • ರಾಜ್ಯದಲ್ಲಿ ಭ್ರಷ್ಟಾಚಾರದ ಎಲ್ಲೆ ಮೀರಿದ್ದು, ಇಂತಹ ಕಮಿಷನ್ ಸರಕಾರವನ್ನು ಕಿತ್ತೊಗೆದು ಅಭಿವೃದ್ಧಿಗಾಗಿ ಮಿಷನ್ ಸರಕಾರವನ್ನು ಅಧಿಕಾರಕ್ಕೆ ತನ್ನಿ.
  • ರಾಜ್ಯದಲ್ಲಿ 10 ಪರ್ಸೆಂಟ್ ಸರಕಾರ ಇದೆ ಅಂತ ನಾನು ಹೇಳಿದ್ದೆ. ಆದರೆ, ತುಂಬಾ ಜನ ದೂರವಾಣಿ ಮಾಡಿ, ಮೆಸೇಜ್ ಕಳಿಸಿದ್ದರು. ಅನೇಕ ಮಂದಿ ಬೇಜಾರು ಮಾಡಿಕೊಂಡಿದ್ದರು. ಕಾರಣ ನಿಮಗೆ ಸರಿಯಾಗಿ ಇಲ್ಲಿನ ವಿದ್ಯಮಾನ ಗೊತ್ತಿಲ್ಲ. ರಾಜ್ಯದಲ್ಲಿ ಕೇವಲ ಹತ್ತಲ್ಲ ಅದಕ್ಕೂ ಹೆಚ್ಚಿದೆ ಎಂದರು. ಈಗ ಹೇಳಿ ನಿಮಗೆ ಕಮಿಷನ್ ಸರಕಾರ ಬೇಕಾ, ಅಥವಾ ಮಿಷನ್ ಸರಕಾರ ಬೇಕಾ?
  • ಕರ್ನಾಟಕದಲ್ಲಿ ಎಷ್ಟು ದಿನ ಕಾಂಗ್ರೆಸ್ ಸರಕಾರ ಇರುತ್ತೋ ಅಷ್ಟು ದಿನ ರಾಜ್ಯ ಬರಬಾದ್ ಅಗಿರುತ್ತೆ.
  • ನಮ್ಮ ಕನಸು ಯುವಜನರನ್ನು ಸ್ವಂತ ಬಲದಲ್ಲಿ ನಿಲ್ಲುವಂತೆ ಮಾಡುವುದು. ಉದ್ಯೋಗಕ್ಕೆ ಅಲೆಯುವುದನ್ನು ತಪ್ಪಿಸುವುದು.
  • ಬಡವರಿಗಾಗಿ ಕೇಂದ್ರದಿಂದ ಹಣ ನೀಡಲಾಗುತ್ತಿದೆ. ಇದನ್ನು ಸರಿಯಾಗಿ ಬಳಸುತ್ತಿಲ್ಲ.
  • ಪ್ರವಾಸೋದ್ಯಮಕ್ಕೆ ವಿಶೇಷ ಗಮನ: ರೈಲ್ವೆ ಬಜೆಟ್‌ಗಳಲ್ಲಿ ಈ ಹಿಂದೆ ಸಾವಿರಾರು ರೈಲುಗಳ ಘೋಷಣೆ ಆಗಿತ್ತು. ಅದರೆ, ಯಾವುದೂ ಸರಿಯಾಗಿ ಕಾರ್ಯಗತವಾಗಿರಲಿಲ್ಲ. ಹೊಸ ರೈಲುಗಳು ಕಣ್ಣಿಗೆ ಕಂಡಿಲ್ಲ.
  • 2022ಕ್ಕೆ ಎಲ್ಲರಿಗೂ ಸೂರು: 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ವೇಳೆ ದೇಶದಲ್ಲಿ ಸ್ವಂತ ಸೂರು ಇಲ್ಲದ 25 ಕೋಟಿ ಕುಟುಂಬಗಳಿಗೆ ಸೂರು ನೀಡಲಾಗುವುದು.
  • ಪುಟ್ಟಣ್ಣಯ್ಯ ಅವರ ಅಗಲಿಕೆ ನೋವು ತಂದಿದೆ. ಅವರ ಅತ್ಮಕ್ಕೆ ಶಾಂತಿ ದೊರೆಯಲಿ. ಪುಟ್ಟಣ್ಣಯ್ಯ ಅವರ ಆಶಯಗಳನ್ನು ಜಾರಿಗೆ ತರುವ ಮೂಲಕ ಅವರಿಗೆ ಗೌರವ ಸಲ್ಲಿಸೋಣ.

Leave a Reply