ಕೊನೆಗೂ ಶರಣಾದ ರೌಡಿ ನಲಪಾಡ್

ಡಿಜಿಟಲ್ ಕನ್ನಡ ಟೀಮ್:

ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ಮಾಡಿ ತಲೆಮರೆಸಿಕೊಂಡಿದ್ದ ಶಾಂತಿ ನಗರ ಶಾಸಕ ಹ್ಯಾರಿಸ್‌ನ ಪುತ್ರ ರೌಡಿ ಮಹಮ್ಮದ್ ನಲಪಾಡ್ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರಿಗೆ ಶರಣಾಗಿದ್ದಾನೆ. ಸೋಮವಾರ ಮಧ್ಯಾಹ್ನ ಶರಣಾದ ನಂತರ ಈತನನ್ನು 8ನೇ ಎಸಿಎಂಎ ನ್ಯಾಯಾಲಯದ ಮುಂದೆಹಾಜರು ಪಡಿಸಲಾಯಿತು. ಕೋರ್ಟ್ ಈತನನ್ನು 3 ದಿನ ಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಿದೆ.

ತಲೆ ಮರೆಸಿಕೊಂಡಿದ್ದ ನಲಪಾಡ್ ಬಂಧನಕ್ಕೆ ಸಿಸಿಬಿ ಪೊಲೀಸರು ಹಿಂದೇಟು ಹಾಕಿ, ಶಾಸಕರ ಮನೆಯಲ್ಲಿ ಶೋಧ ಕಾರ್ಯದ ಪ್ರಹಸನ ನಡೆಸುವಾಗಲೇ ಮಹಮ್ಮದ್ ನಲಪಾಡ್ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಗೆ ತಾನೇ ಬಂದು ಶರಣಾದ.

ನಲಪಾಡ್ ಶರಣಾಗುತ್ತಿದ್ದಂತೆ ಠಾಣೆ ಮುಂದೆ ಜಮಾಯಿಸಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು. ನಲಪಾಡ್ ಶರಣಾಗುತ್ತಿದ್ದಂತೆ ಆತನ ಬೆಂಬಲಿಗರು ಹಾಗೂ ಬೌನ್ಸರ್‌ಗಳ ಅಬ್ಬರ ಮುಂದುವರಿದಿತ್ತು.ಮಾಧ್ಯಮದವರ ಮೇಲೆ ಹಲ್ಲೆ ಮಾಡಿ ದರ್ಪ ಪ್ರದರ್ಶಿಸಿದರು.

Leave a Reply