ಚೀನಾಗೆ ಪ್ರಾಬಲ್ಯಕ್ಕೆ ಬ್ರೇಕ್ ಹಾಕಲು ಒಂದಾಗುತ್ತಿವೆ ಭಾರತ, ಅಮೆರಿಕ, ಜಪಾನ್, ಆಸ್ಟ್ರೇಲಿಯಾ

ಡಿಜಿಟಲ್ ಕನ್ನಡ ಟೀಮ್:

ಏಷ್ಯಾದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಚೀನಾ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಮುಂದಾಗಿದೆ. ಇದಕ್ಕೆ ಪರ್ಯಾಯವಾಗಿ ಮತ್ತೊಂದು ಮಹತ್ವದ ಸಂಪರ್ಕ ಮಾರ್ಗವನ್ನು ನಿರ್ಮಿಸಿಕೊಳ್ಳಲು ಭಾರತ, ಅಮೆರಿಕ, ಜಪಾನ್ ಹಾಗೂ ಆಸ್ಟ್ರೇಲಿಯಾ ಮಾತುಕತೆಗೆ ಮುಂದಾಗಿವೆ.

ಈ ಯೋಜನೆ ಕುರಿತು ಆಸ್ಟ್ರೇಲಿಯಾ ವಿದೇಶಾಂಗ ಸಚಿವಾಲಯದ ಸದಸ್ಯರು ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಈ ಪ್ರಸ್ತಾಪ ಇನ್ನು ಮಾತುಕತೆಯ ಹಂತದಲ್ಲಿದ್ದು, ಇನ್ನಷ್ಟೇ ಸರಿಯಾದ ಸ್ವರೂಪ ಪಡೆಯಬೇಕಿದೆ. ಹೀಗಾಗಿ ಮುಂದಿನ ವಾರ ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕೊಮ್ ಟರ್ನ್ ಬುಲ್ ಅವರು ಅಮೆರಿಕ ಪ್ರವಾಸ ಮಾಡಲಿದ್ದು,ಈ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಕಡಿಮೆ ಇದೆ. ಈ ವಿಚಾರವಾಗಿ ಆಸ್ಟ್ರೇಲಿಯಾದ ವಿದೇಶಾಂಗ ಸಚಿವಾಲಯದ ಅಧಿಕಾರಿ ಹೇಳಿರುವುದಿಷ್ಟು…

‘ಚೀನಾ ಬೆಲ್ಟ್ ರಸ್ತೆ ನಿರ್ಮಾಣ ಮಾಡಬಾರದು ಎಂದು ಯಾರೂ ಹೇಳಲು ಸಿದ್ಧರಿಲ್ಲ. ಚೀನಾದ ಬೆಲ್ಟ್ ರಸ್ತೆಗೆ ಪರ್ಯಾಯವಾಗಿ ನಾವು ಬಂದರುಗಳಿಗೆ ಸಂಪರ್ಕ ಸಾಧಿಸುವಂತೆ ರಸ್ತೆ ಅಥಾ ರೈಲು ಮಾರ್ಗ ನಿರ್ಮಾಣ ಮಾಡಿಕೊಂಡರೆ ಆರ್ಥಿಕವಾಗಿ ಹೆಚ್ಚಿನ ಹೊರೆಯಾಗುವುದಿಲ್ಲ. ಈ ವಿಚಾರವಾಗಿ ಭಾರತ, ಆಸ್ಚ್ರೇಲಿಯಾ, ಅಮೆರಿಕ ಹಾಗೂ ಜಪಾನ್ ನಿರಂತರವಾಗಿ ಸಂಪರ್ಕದಲ್ಲಿದ್ದು ಚರ್ಚೆ ನಡೆಸುತ್ತಿವೆ. ಇದು ಚೀನಾದ ಬೆಲ್ಟ್ ರೋಡಿಗೆ ಪರ್ಯಾಯ ಮಾರ್ಗವೇ ಹೊರತು, ಸ್ಪರ್ಧೆಗಾಗಿ ನಿರ್ಮಿಸಲಾಗುತ್ತಿಲ್ಲ.’

Leave a Reply