ಕಾಂಗ್ರೆಸ್ ತಂತ್ರಕ್ಕೆ ಬಿಜೆಪಿ ಪ್ರತಿತಂತ್ರ ಏನು?

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ತಂತ್ರಗಾರಿಕೆ ಮಾಡುತ್ತಿದ್ರೆ ಬಿಜೆಪಿ ಕಾಂಗ್ರೆಸ್ ತಂತ್ರಗಾರಿಕೆ ವಿಫಲ ಮಾಡಲು ರಣತಂತ್ರ ರೂಪಿಸುತ್ತಿದೆ. ಇಂದಿನಿಂದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸ ಮಾಡ್ತಿದ್ದಾರೆ. ಇಂದು ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ‌ಬೃಹತ್ ಸಮಾವೇಶ‌‌ ಹಮ್ಮಿಕೊಂಡಿದೆ. ಜೊತೆಗೆ ವಿಜಯಪುರದ ತಿಕೋಟದಲ್ಲಿ ಎಂ ಬಿ ಪಾಟೀಲ್ ನೇತೃತ್ವದಲ್ಲಿ ಬೃಹತ್ ಸ್ತ್ರೀ ಶಕ್ತಿ ಸಮಾವೇಶ ನಡೆಸುತ್ತಿದ್ದಾರೆ. ಎರಡನೇ ಹಂತದ ಜನಾಶೀರ್ವಾದ ಯಾತ್ರೆ ಪೂರ್ತಿ ಬಸ್‌ನಲ್ಲೇ ಸಂಚರಿಸಲಿರುವ ರಾಹುಲ್ ಗಾಂಧಿ ರೋಡ್ ಶೋ ಕೂಡ ನಡೆಸಲಿದ್ದಾರೆ. ವಿಜಯಪುರ ಹಾಗು ಚಿಕ್ಕೋಡಿಯ ಡಿಸಿಸಿ ಬ್ಲಾಕ್ ಅಧ್ಯಕ್ಷರುಗಳು ಹಾಗೂ ‌ಹಿರಿಯ ನಾಯಕರುಗಳ ಜೊತೆಗೆ ಸಭೆ ನಡೆಸಿ ಎಲೆಕ್ಷನ್ ಗೆಲ್ಲುವ ತಂತ್ರಗಾರಿಕೆ ರೂಪಿಸಲಿದ್ದಾರೆ. ಈ ಬಾರಿಯ ಪ್ರವಾಸದಲ್ಲಿ ಮುಂಬೈ ಕರ್ನಾಟಕದ ಬಹುತೇಕ ಭಾಗದಲ್ಲಿ ಪ್ರವಾಸ ಮಾಡಿ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸೋದು ರಾಹುಲ್ ಗಾಂಧಿ ಪ್ರವಾಸದ ಹಿಂದಿನ ತಂತ್ರಗಾರಿಕೆ ಆಗಿದೆ.

ಈ ಕಾಂಗ್ರೆಸ್ ತಂತ್ರಗಾರಿಕೆಯನ್ನೇ ವಿಫಲಗೊಳಿಸಲು ಮುಂದಾಗಿರುವ ಅಮಿತ್ ಶಾ ನೇತೃತ್ವದ ಬಿಜೆಪಿ, ರಾಹುಲ್ ಕಾರ್ನಾಟಕಕ್ಕೆ ಬಂದ ದಿನವೇ ಅಮಿತ್ ಶಾ ಕೂಡ ಕರ್ನಾಟಕಕ್ಕೆ ಆಗಮಿಸುತ್ತಿದ್ದು, ಹೆಚ್ಚು ಕಡಿಮೆ ರಾಹುಲ್ ಗಾಂಧಿ ಪ್ರವಾಸ ನಡೆಸುವ ಭಾಗಗಳಲ್ಲಿಯೇ ಅಮಿತ್ ಶಾ ಕೂಡ ಚುನಾವಣಾ ಪ್ರಚಾರ ಮಾಡ್ತಿದ್ದಾರೆ. ಕಳೆದ ಬಾರಿ ರಾಹುಲ್ ಗಾಂಧಿ ಭೇಟಿ ಕೊಟ್ಟಿದ್ದ ಬಸವ ಕಲ್ಯಾಣದ ಅನುಭವ ಮಂಟಪಕ್ಕೂ ಭೇಟಿ ನೀಡಲಿದ್ದಾರೆ. ಇದರ ಜೊತೆಗೆ ನರಸಿಂಹರಾಜ ದೇವಸ್ಥಾನಕ್ಕೆ ಭೇಟಿ, ಹುಮ್ನಾಬಾದ್ ನಲ್ಲಿ ಕಬ್ಬು ಬೆಳೆಗಾರರೊಂದಿಗೆ ಸಂವಾದ, ಮಲ್ಲಿಕಾರ್ಜುನ ಖರ್ಗೆ ಕ್ಷೇತ್ರವಾದ ಕಲ್ಬುರ್ಗಿಯಲ್ಲಿ ದಲಿತ ಸಮಾವೇಶ, ಸುರಪುರದಲ್ಲಿ ನವಶಕ್ತಿ ಸಮಾವೇಶ, ಮಾತೆ ಮಾಣಿಕೇಶ್ವರಿ ದೇವಸ್ಥಾನಕ್ಕೆ ಭೇಟಿ, ಶರಣಬಸವೇಶ್ವರ ದೇವಸ್ಥಾನ, ಮಳ್ಕೇಡ್ ಉತ್ತರಾದಿ ಮಠಕ್ಕೆ ಭೇಟಿ, ಕಲಬುರ್ಗಿ ಸೇಡಂನಲ್ಲಿ ನವಶಕ್ತಿ ಸಮಾವೇಶ ನಡೆಸಿ ಕೊನೆಯದಾಗಿ ಮರಾಠಾ ಸಮುದಾಯದ ಮುಖಂಡರ ಜೊತೆ ಸಂವಾದ ನಡೆಸಿ ದೆಹಲಿಗೆ ತೆರಳಲಿದ್ದಾರೆ.

ಕಳೆದ ಬಾರಿ ಹೈದ್ರಾಬಾದ್ ಕರ್ನಾಟಕದಲ್ಲಿ ಜನಾಶೀರ್ವಾದ ಯಾತ್ರೆ ನಡೆಸಿದ ರಾಹುಲ್ ಗಾಂಧಿಗೆ ಭಾರೀ ಜನ ಬೆಂಬಲ ಸಿಕ್ಕಿತ್ತು. ಇದರಿಂದ ಕಂಗಾಲಾದಂತೆ ಕಂಡುಬಂದ ಬಿಜೆಪಿ ಯಾತ್ರೆಗೆ ಸಾಕಷ್ಟು ಮಟ್ಟದಲ್ಲಿ ಪ್ರಚಾರ ಸಿಗದಂತೆ ಮಾಡಬೇಕು ಎನ್ನುವ ರಣತಂತ್ರ ರೂಪಿಸಿದೆ.. ಜನಬೆಂಬಲ ಸಿಗದಂತೆ ಮಾಡುವ ಉದ್ದೇಶದಿಂದ ರಾಹುಲ್ ಪ್ರವಾಸದ ದಿನದಂದೇ ಅಮಿತ್ ಶಾ ಪ್ರವಾಸ ಕೈಗೊಂಡಿದ್ದಾರೆ‌ ಎನ್ನಲಾಗ್ತಿದೆ. ಜೊತೆಗೆ ಅದೇ ಭಾಗದಲ್ಲಿ ಪ್ರವಾಸ ಮಾಡೋದ್ರಿಂದ ಜನರನ್ನು ಇಬ್ಭಾಗ ಮಾಡಿದಂತಾಗುತ್ತೆ, ಜನರು ಸಾಕಷ್ಟು ಪ್ರಮಾಣದಲ್ಲಿ ಸೇರದಂತೆ ಮಾಡಬಹುದು ಅನ್ನೋದು ಮತ್ತೊಂದು ರಣತಂತ್ರ. ಮೂರನೆಯ ತಂತ್ರ ಎಂದರೆ ಮಾಧ್ಯಮಗಳಲ್ಲೂ ಕಳೆದ ಬಾರಿ ರಾಹುಲ್ ಪ್ರವಾಸಕ್ಕೆ ಭಾರೀ ಬೆಂಬಲ ಸಿಕ್ಕಿತ್ತು. ಅಲ್ಲಿನ ಜನಸಾಗರದ ಬಗ್ಗೆ ಮಾಧ್ಯಮಗಳು ಎಳೆ ಎಳೆಯಾಗಿ ತೋರಿಸಿದ್ದವು. ಇದರಿಂದ ಕಾಂಗ್ರೆಸ್ ಪರವಾದ ಅಲೆ ಸೃಷ್ಟಿಯಾಗಿದೆ ಅನ್ನೋ ರೀತಿ ಬಿಂಬಿತವಾಗುತ್ತೆ ಅನ್ನೋ ಕಾರಣಕ್ಕೆ ಸೇಮ್ ಟೈಂ ಸೇಮ್ ಪ್ಲೇಸ್.. ಸೇಮ್ ಪ್ರೋಗ್ರಾಂ ಅನ್ನೋ ರಣತಂತ್ರ ರೂಪಿಸಿದೆ ಅನ್ನೊ ಮಾತುಗಳು ಕೇಳಿಬಂದಿವೆ.

Leave a Reply