ಅಭಿನೇತ್ರಿ ಶ್ರೀದೇವಿ ಇನ್ನಿಲ್ಲ

ಬಹುಭಾಷಾ ನಟಿ ಮೋಹಕ ತಾರೆ ಶ್ರೀದೇವಿ ಇನ್ನಿಲ್ಲ.. ದುಬೈನಲ್ಲಿ ಶ್ರೀದೇವಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ, ತಡರಾತ್ರಿ 11.30ರ ವೇಳೆ ಶ್ರೀದೇವಿಗೆ ಹೃದಯಾಘಾತ ಸಂಭವಿಸಿದ್ದು ಚಿಕಿತ್ಸೆ ಫಲಿಸದೆ ವಿಧಿವಶರಾಗಿದ್ದಾರೆ.. ನಟ ಮೋಹಿತ್​ ಮಾರ್ವ ಮದುವೆಗಾಗಿ ಶ್ರೀದೇವಿ ಪತಿ ಬೋನಿ ಕಪೂರ್​ ಹಾಗೂ ಪುತ್ರಿ ಖುಷಿ ಜೊತೆ ದುಬೈಗೆ ತೆರಳಿದ್ರು.. ಈ ವೇಳೆ ಹೃದಯಾಘಾತವಾಗಿದೆ.. ನಟಿ ಶ್ರೀದೇವಿ ಇಬ್ಬರು ಪುತ್ರಿಯರು ಹಾಗೂ ಪತಿಯನ್ನ ಅಗಲಿದ್ದಾರೆ.

54 ವರ್ಷದ ಶ್ರೀದೇವಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ, ಶ್ರೀದೇವಿ ನಿಧನಕ್ಕೆ ಬಾಲಿವುಡ್​​ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದಾರೆ.. ಶ್ರೀ ದೇವಿ ಕನ್ನಡ ಸೇರಿದಂತೆ ಹಿಂದಿ, ತೆಲುಗು, ಮಲೆಯಾಳಂ ಚಿತ್ರಗಳಲ್ಲೂ ನಟಿಸಿದ್ದಾರೆ.. ಕನ್ನಡದಲ್ಲಿ   ಭಕ್ತ ಕುಂಬಾರ,ಬಾಲ ಭಾರತದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದರು. ಹೆಣ್ಣು ಸಂಸಾರದ ಕಣ್ಣು, ಸಂಪೂರ್ಣ ರಾಮಾಯಣ ಚಿತ್ರದಲ್ಲು ನಟಿಸಿದ್ದರು .ರೆಬೆಲ್​ಸ್ಟಾರ್ ​ಅಂಬರೀಷ್​ ಅಭಿನಯದ ಪ್ರಿಯಾ ಚಿತ್ರದಲ್ಲಿ ಬಣ್ಣಹಚ್ಚಿದ್ರು..

1975ರಲ್ಲಿ ತೆರೆಕಂಡ ಚಾಂದಿನಿ ಚಿತ್ರದಲ್ಲಿ ಬಾಲನಟಿಯಾಗಿ ಶ್ರೀದೇವಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ರು.. ಜೂಲಿ ಚಿತ್ರದಲ್ಲಿ ಶ್ರೀದೇವಿ ಕಮಾಲ್​ ಮಾಡಿದ್ರು.. 1997ರಲ್ಲಿ ಬಣ್ಣದ ಲೋಕಕ್ಕೆ ಗುಡ್​ಬೈ ಹೇಳಿದ್ದ ಶ್ರೀದೇವಿ, 15 ವರ್ಷಗಳ ಬಳಿಕ 2012ರಲ್ಲಿ ಬಿಡುಗಡೆಯಾದ ಇಂಗ್ಲಿಷ್​ ವಿಂಗ್ಲಿಷ್​ ಚಿತ್ರದ ಮೂಲಕ ಕಮ್​ ಬ್ಯಾಕ್​ ಮಾಡಿದ್ರು.. 2013ರಲ್ಲಿ ಶ್ರೀದೇವಿಗೆ ಪದ್ಮಶ್ರೀ ಪ್ರಶಸ್ತಿ ಕೂಡ ಲಭಿಸಿತ್ತು.

Leave a Reply