ಚಂದ್ರನ ಮೇಲೂ 4ಜಿ ಮೊಬೈಲ್ ಸಿಗ್ನಲ್!

ಡಿಜಿಟಲ್ ಕನ್ನಡ ಟೀಮ್:

ಭೂಮಿಯ ಮೇಲೆ ಈಗ ಎಲ್ಲೆಲ್ಲೂ ಮೊಬೈಲ್ ಗಳದ್ದೇ ದರ್ಬಾರು. ಭೂಮಿಯ ಮೇಲೆ ಮಾತ್ರವಲ್ಲದೇ ಮೊಬೈಲ್ ಗಳ ದರ್ಬಾರು ಈಗ ಚಂದ್ರನ ಮೇಲೂ ವಿಸ್ತರಿಕೆಯಾಗಲು ಸಕಲ ಸಿದ್ಧತೆಗಳು ನಡೆಯುತ್ತಿವೆ.

ಹೌದು, ಮೊಬೈಲ್ ಕಂಪನಿ, ಟೆಲಿಕಾಂ ಕಂಪನಿಗಳ ಸಹಯೋಗದಲ್ಲಿ ವಿಜ್ಞಾನಿಗಳ ಸಂಶೋಧನೆಗೆ ಸಹಕಾರಿಯಾಗಲು ಚಂದ್ರನ ಮೇಲೆ ಪ್ರತ್ಯೇಕ ಮೊಬೈಲ್ ಸಿಗ್ನಲ್ ವ್ಯವಸ್ಥೆ ಅಳವಡಿಸಲು ನಿರ್ಧರಿಸಲಾಗಿದೆ. ವೊಡಾಫೋನ್ ಹಾಗೂ ನೋಕಿಯಾ ಕೈ ಜೋಡಿಸಿದ್ದು, 2019ರಲ್ಲಿ ಚಂದ್ರನ ಮೇಲೆ ಮೊಬೈಲ್ ಸಿಗ್ನಲ್ ತಲುಪಲಿವೆ. ಅದರೊಂದಿಗೆ ಬರ್ಲಿನ್ ಮೂಲದ ಖಾಸಗಿ ವಿಜ್ಞಾನಿಗಳ ಲೂನಾರ್ ರೋವರ್ ಸಂಶೋಧನೆಗೆ ದೊಡ್ಡ ಮಟ್ಟದ ನೆರವಾಗಲಿದೆ.

ಫೆ.27ರಂದು ವೊಡಾಫೋನ್ ಕಂಪನಿ ಚಂದ್ರನ ಮೇಲೆ 4ಜಿ ತರಂಗಾಂತರದ ಸಂಪರ್ಕವನ್ನು ಕಲ್ಪಿಸುವ ನಿರ್ಧಾರ ಪ್ರಕಟಿಸಿದ್ದು, ಈ ಸಂಪರ್ಕ ಪಾರ್ಟ್ ಟೈಮ್ ಸೈಂಟಿಸ್ಟ್ಸ್ ಎಂಬ ವಿಜ್ಞಾನಿಗಳ ತಂಡದ ಸಂಶೋಧನೆಗೆ ನೆರವಾಗಲಿದೆ. ಈ ತಂಡ ‘ಮಿಷನ್ ಟು ದ ಮೂನ್’ ಎಂಬ ಸಂಶೋಧನೆ ಆರಂಭಿಸಿದ್ದು, ಇದೇ ಪರಿಕಲ್ಪನೆಯೊಂದಿಗೆ ಗೂಗಲ್ ಲೂನಾರ್ ಎಕ್ಸ್ ಪ್ರೈಸ್ ಸ್ಪರ್ಧೆಯಲ್ಲಿ ಭಾಗವಹಿಸಿತ್ತು. ಇನ್ನು ಅನೇಕ ವಿಜ್ಞಾನಿಗಳ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರೂ, ಈ ಬಾರಿಯ ಸ್ಪರ್ಧೆಯಲ್ಲಿ ಯಾರೂ ವಿಜೇತರಾಗಿಲ್ಲ. ಈಗ ಈ ಸ್ಪರ್ಧೆ ಮುಗಿದರೂ ಈ ವಿಜ್ಞಾನಿಗಳ ತಂಡದ ಸಂಶೋಧನೆ ಮುಂದುವರಿದಿದೆ.

ಚಂದ್ರನ ಮೇಲೆ ಮೊದಲ ಬಾರಿಗೆ ಮಾನವನನ್ನು ಕಳುಹಿಸಿದ ಅಪೊಲೊ 11 ಮಿಷನ್ ಗೆ 50 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಫ್ಲೋರಿಡಾದ ಸ್ಪೇಸ್ ಎಕ್ಸ್ ಫ್ಲಾಕೋನ್ ನಿಂದ 9 ರಾಕೆಟ್ ಉಡಾವಣೆ ಮಾಡಲಾಗುತ್ತಿದ್ದು, ಅದರಲ್ಲಿ ಈ ವಿಜ್ಞಾನಿಗಳ ತಂಡ ಒಂದು ಲ್ಯಾಂಡರ್ ಹಾಗೂ ಎರಡು ಸಣ್ಣ ರೋವರ್ಸ್ ಗಳನ್ನು ಚಂದ್ರನ ಮೇಲೆ ಹಾರಿಸಲು ನಿರ್ಧರಿಸಿವೆ. 4ಜಿ ಸಂಪರ್ಕದ ನೆರವಿನಿಂದ ಈ ಲೂನಾರ್ ಗಳು ಸೆರೆ ಹಿಡಿಯುವ ಚಂದ್ರದ ಮೇಲಿನ ದೃಶ್ಯಗಳನ್ನು ನೇರ ಪ್ರಸಾರದಲ್ಲಿವಿಜ್ಞಾನಿಗಳು ಪಡೆದು ಸಂಶೋಧನೆ ಮಾಡಲಿದ್ದಾರೆ.

Leave a Reply