ಅತಿಲೋಕ ಸುಂದರಿ ಶ್ರೀದೇವಿ ಬಿಟ್ಟು ಹೋದ ಸಿರಿ ಎಷ್ಟು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಅತಿಲೋಕ ಸುಂದರಿ ಶ್ರೀದೇವಿ ನಮ್ಮನ್ನು ಅಗಲಿ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ದುಬೈನ ಹೋಟೆಲ್ ಬಾತ್ ಟಬ್ ನಲ್ಲಿ ಮುಳುಗಿ ಸಾವನ್ನಪ್ಪಿರುವ ಶ್ರೀದೇವಿಯ ಸಿರಿ ಸಂಪತ್ತು ಎಷ್ಟಿರಬಹುದು ಅನ್ನೋದು ಕೋಟ್ಯಂತರ ಅಭಿಮಾನಿಗಳ ಮನದಾಳದ ಪ್ರಶ್ನೆ. ಯಾಕಂದ್ರೆ ಶ್ರೀದೇವಿ ನಾವು ಸಣ್ಣ ಹುಡುಗರಾಗಿದ್ದ ಕಾಲದಿಂದಲೂ ನಮ್ಮನ್ನು ರಂಜಿಸಿದ ತಾರೆ. ಆ ಕಾಲದಲ್ಲೇ ಸ್ಟಾರ್ ಆಗಿದ್ದ ಶ್ರೀದೇವಿ ಒಂದೊಮ್ಮೆ ಸೂಪರ್ ಸ್ಟಾರ್ ರಜನಿಕಾಂತ್ ಗಿಂತಲೂ ಹೆಚ್ಚು ಸಂಭಾವನೆ ಪಡೆದಿದ್ದ ಸ್ಟಾರ್ ನಟಿ. ಅದೇ ಸ್ಟಾರ್ ಪಟ್ಟವನ್ನು ತನ್ನ ಕೊನೆಯ ಯಾತ್ರೆ ತನಕವೂ ಉಳಿಸಿಕೊಂಡೇ ಸಾಗಿದ್ದಾರೆ. ಅಂತಿಮ ಯಾತ್ರೆ ವೇಳೆಯೂ ಕೂಡ ತಾನೊಬ್ಬಳು ಸ್ಟಾರ್ ಅನ್ನೋ ಹಾಗೆ ಸಿಂಗಾರ ಮಾಡಿಕೊಂಡೆ ಸಾಗಿದ ಬಾಲಿವುಡ್ ಸ್ಟಾರ್ ಹೀರೋಯಿನ್ ಶ್ರೀದೇವಿ ಸಂಪತ್ತು ಕಡಿಮೆಯಂತೂ ಇರಲ್ಲ ಅನ್ನೋದು ಅಭಿಮಾನಿಗಳ ಲೆಕ್ಕಾಚಾರ.

ಸಿರಿದೇವಿ ಶ್ರೀದೇವಿ ಸಂಪಾದಿಸಿರುವ ಆಸ್ತಿ ಬರೋಬ್ಬರಿ ₹ 300 ಕೋಟಿಗೂ ಅಧಿಕ. ಅಂದಿನ ಕಾಲದಲ್ಲಿ ಸಾಕಷ್ಟು ಕಡಿಮೆ ಸಂಭಾವನೆಗೆಲ್ಲಾ ನಟನೆ ಮಾಡುತ್ತಿದ್ದ ಶ್ರೀದೇವಿ ಸ್ಟಾರ್ ಪಟ್ಟ ಗಳಿಸಿದ ಮೇಲೆ ಸಂಭಾವನೆ ತುಸು ಹೆಚ್ಚಾಯ್ತು. 1 ಸಿನಿಮಾದಲ್ಲಿ ನಟನೆ ಮಾಡಬೇಕು ಅಂದ್ರೆ ಶ್ರೀದೇವಿ ಪಡೆಯುತ್ತಿದ್ದ ಸಂಭಾವನೆ ಕನಿಷ್ಟ 3 ಕೋಟಿ 40 ಲಕ್ಷ ರೂಪಾಯಿ ಯಿಂದ ಗರಿಷ್ಟ 4 ಕೋಟಿ ರೂಪಾಯಿ ತನಕವಿತ್ತು ಅನ್ನೋದು ಬಾಲಿವುಡ್ ಅಂಗಳದ ಮಾಹಿತಿ. ನಮ್ಮ ಸ್ಯಾಂಡಲ್ ವುಡ್ ಸ್ಟಾರ್ ನಟರು ಪಡೆಯುವ ಸಂಭಾವನೆಯಷ್ಟು ಶ್ರೀದೇವಿ ಪಡೆಯುತ್ತಿದ್ರು ಎಂಬುದು ಗಮನಾರ್ಹ.

ಶ್ರೀದೇವಿ ಬಳಿಯಿದ್ದ 300 ಕೋಟಿ ಆಸ್ತಿಯಲ್ಲಿ 3 ಬಂಗಲೆಗಳು ಸೇರಿವೆ. ಈ ಮೂರೂ ಬಂಗಲೆಗಳು ಈಕೆಯ ಹೆಸರಲ್ಲೇ ಇದ್ದು, ವಾರ್ಸಾ ಹಾಗೂ ಲೋಖಂಡ್ ವಾಲಾದಲ್ಲಿವೆ. ಈ ಮೂರು ಬಂಗಲೆಗಳ ಮೌಲ್ಯ ಬರೋಬ್ಬರಿ ಅಂದಾಜು 62 ಕೋಟಿ ರೂಪಾಯಿ. ಇನ್ನೂ ಶ್ರೀದೇವಿ ಬಳಿ ವಿವಿಧ ಬ್ರಾಂಡ್ ನ 7 ವಾಹನಗಳಿದ್ದು, ಇವುಗಳ ಮೌಲ್ಯ ಸುಮಾರು 9 ಕೋಟಿ.. ಲಕ್ಸ್, ತನಿಷ್ಕಾದ ಬ್ರಾಂಡ್ ಅಂಬಾಸಿಡರ್ ಆಗಿದ್ದ ಶ್ರೀದೇವಿ ಜಾಹಿರಾತು ಮೂಲಕವೂ ಸಾಕಷ್ಟು ಹಣ ಗಳಿಸುತ್ತಿದ್ದರು. ಒಟ್ಟಾರೆ ಶ್ರೀದೇವಿ ಅಂತಾ ಹೆಸರಿಟ್ಟುಕೊಂಡಿದ್ದ ಬಾಲಿವುಡ್ ನ ಬೊಂಬೆ ಚಾಂದಿನಿ ಆಸ್ತಿಗಳಿಕೆಯಲ್ಲಿ ಸಿರಿದೇವಿಯೇ ಆಗಿದ್ದಳು.

Leave a Reply