ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಮಾಸ್ಟರ್ ಪ್ಲಾನ್!

ಡಿಜಿಟಲ್ ಕನ್ನಡ ಟೀಮ್:

ರಾಜ್ಯಸಭಾ ಚುನಾವಣೆಯ 4 ಸ್ಥಾನಗಳಿಗೆ ಅಖಾಡ ಸಜ್ಜಾಗಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ತಂತ್ರಗಾರಿಕೆ ಮಾಡುತ್ತಿವೆ. ಕಾಂಗ್ರೆಸ್ ಎರಡು ಸ್ಥಾನಗಳಿಗೆ ಬೇಕಾದ ಶಾಸಕರ ಬಲಿವಿದ್ದು, ಇನ್ನೊಂದು ಸ್ಥಾನಕ್ಕೆ ಬೇಕಾದ ಮತಗಳಿಗೆ ಕಡಿಮೆಯಾಗುತ್ತೆ. ಅದೇ ರೀತಿ ಬಿಜೆಪಿ ಕೂಡ ಒಂದು ಸ್ಥಾನವನ್ನು ಗೆಲ್ಲಿಸಿಕೊಳ್ಳಲು ಯಾವುದೇ ಸಮಸ್ಯೆ ಇಲ್ಲ. ಇನ್ನೊಂದು ಸ್ಥಾನವನ್ನು ಜೆಡಿಎಸ್ ಗೆಲ್ಲಬೇಕಾದ್ರೆ ಬೇರೆ ಯಾವುದಾದರು ಪಕ್ಷದವರು ಮತ ನೀಡಲೇಬೇಕು. ಇಲ್ಲದಿದ್ದರೆ ಯಾರಾದರು ನಿಲ್ಲಿಸುವ ಒಮ್ಮತದ ಅಭ್ಯರ್ಥಿಗೆ ಜೆಡಿಎಸ್ ಮತ ನೀಡಬೇಕು. ಕಾಂಗ್ರೆಸ್ ಈಗಾಗಲೇ ದಲಿತ, ಲಿಂಗಾಯತ, ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಜ್ಜಾಗಿದ್ದು, ಮೂರನೇ ಅಭ್ಯರ್ಥಿ ಸೋತರೂ ಚುನಾವಣಾ ಅಸ್ತ್ರವಾಗಿಸಿಕೊಳ್ಳು ಪ್ಲಾನ್ ನಡೆದಿದೆ.

ಲಿಂಗಾಯತ ಅಭ್ಯರ್ಥಿ ಗೆಲ್ಲಿಸುವ ಮೂಲಕ ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಹೊಡೆತ ನೀಡುವುದು ಕಾಂಗ್ರೆಸ್ ಪಕ್ಷದ ಲೆಕ್ಕಾಚಾರ. ಅದೇ ರೀತಿ ದಲಿತ ಅಭ್ಯರ್ಥಿ ಗೆಲ್ಲಿಸಲು ರಣತಂತ್ರ ರೂಪಿಸಿದ್ದು, ಕೇಂದ್ರದ ಮಾಜಿ ಸ್ಪೀಕರ್ ಮೀರಾಕುಮಾರ್ ಗೆ ಮಣೆ ಹಾಕಲಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಮೀರಾಕುಮಾರ್ ಹೆಸರನ್ನು ಫೈನಲ್ ಮಾಡಿಕೊಂಡು ರಾಜ್ಯದಲ್ಲಿ ಎದ್ದಿರುವ ಎಡಗೈ, ಬಲಗೈ ಹೋರಾಟವನ್ನು ಶಮನ ಮಾಡುವ ತಂತ್ರಗಾರಿಕೆ ಅಡಗಿದೆ. ಇವರಿಬ್ಬರು ಗೆದ್ದ ಬಳಿಕ ಮುಸ್ಲಿಂ ಅಭ್ಯರ್ಥಿ ಸೋಲುವುದು ಖಚಿತ. ಆದ್ರೆ ಅದನ್ನೇ ಚುನಾವಣೆಯಲ್ಲಿ ಪ್ರಚಾರ ಮಾಡಿ ಜೆಡಿಎಸ್, ಬಿಜೆಪಿ ಮುಸ್ಲಿಂ ವಿರೋಧಿ, ಮುಸ್ಲಿಂ ಅಭ್ಯರ್ಥಿ ಸೋಲಿಸಲು ಹೊಂದಾಣಿಕೆ ಮಾಡಿಕೊಂಡ್ರು ಅಂತ ಅಪಪ್ರಚಾರ ಮಾಡುವುದು ಉದ್ದೇಶವಾಗಿದೆ. ಒಂದು ವೇಳೆ ದಲಿತ ಅಭ್ಯರ್ಥಿ ಸೋಲನ್ನಪ್ಪಿದ್ರೆ ಮಾಯಾವತಿ ಜೊತೆ ಸೇರಿ ದಲಿತರ ಓಲೈಕೆ ಮಾಡ್ತರೆ, ಆದ್ರೆ ರಾಜ್ಯದಲ್ಲಿ ದಲಿತ ಅಭ್ಯರ್ಥಿಯನ್ನು ಸೋಲಿಸ್ತಾರೆ ಅನ್ನೋ ಮೂಲಕ ಜೆಡಿಎಸ್ ಅಣಿಯುವ ತಂತ್ರ ರೆಡಿಯಾಗಿದೆ.

ಈ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿ ಸಮಬಲ ಸಾಧಿಸಿದರೆ ಜೆಡಿಎಸ್ ಕಿಂಗ್ ಮೇಕರ್ ಅನ್ನೋದು ಕಾಂಗ್ರೆಸ್ ಬಿಜೆಪಿ ವಲಯದಲ್ಲಿ ಕೇಳಿಸುತ್ತಿರೋ ಮಾತು. ರಾಜ್ಯದಲ್ಲಿ ಸದ್ಯದ ಪರಿಸ್ಥಿತಿ ಕೂಡ ಅದೇ ರೀತಿ ಇದೆ. ಹಾಗಾಗಿ ಕಾಂಗ್ರೆಸ್ ಎರಡು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು‌ ಮೂರನೇ ಅಭ್ಯರ್ಥಿಯನ್ನು ಜೆಡಿಎಸ್ ಜೊತೆಗೂಡಿ ಆಯ್ಕೆ ಮಾಡಿದರೆ ಮುಂದಿನ ದಿನಗಳಲ್ಲಿ ಅನುಕೂಲ ಅನ್ನೋದು ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿರುವ ಮಾತು.

ಜೆಡಿಎಸ್ ಜೊತೆ ವೈರತ್ವ ಕಟ್ಟಿಕೊಂಡು ಚುನಾವಣೆ ಮಾಡಿದರೂ ಮೈಸೂರು ಭಾಗದಲ್ಲಿ ಗೆಲ್ಲಲು ಸಾಧ್ಯವಾಗದ ಮಾತು. ಹಾಗಾಗಿ ಜೆಡಿಎಸ್ ಜೊತೆ ಫ್ರೆಂಡ್ಲಿ ಫೈಟ್ ಮಾಡುತ್ತಾ ಮುಂದೆ ಸರ್ಕಾರ ರಚನೆ ವೇಳೆ ಸ್ಥಾನಗಳು ಕಡಿಮೆಯಾದರೆ ಜೆಡಿಎಸ್ ಸಖ್ಯ ಸರಳವಾಗುತ್ತೆ. ಈಗ ಸಿದ್ದರಾಮಯ್ಯ ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಉದಾರತೆ ತೋರಿದರೆ ಅಧಿಕಾರ ಹಿಡಿಯುವಾಗ ಅಡ್ಡಿ ಆತಂಕಗಳು ಬರುವುದಿಲ್ಲ. ಈ ಬಗ್ಗೆಯೂ ಯೋಚನೆ ಮಾಡಿ ಅಂತಾ ರಾಜಕೀಯ ಪಂಡಿತರು ಸಿಎಂ ಕಿವಿಯಲ್ಲಿ ಉಸುರಿದ್ದಾರಂತೆ. ಹಾಗಾಗಿ ಸಿಎಂ ಎಲ್ಲಾ ಆಯಾಮಗಳಲ್ಲೂ ಚಿಂತನೆ ನಡೆಸಿ ರಾಜ್ಯಸಭಾ ಚುನಾವಣೆಯಲ್ಲಿ ತಂತ್ರಗಾರಿಕೆ ಮಾಡ್ತಿದ್ದಾರೆ. ಚುನಾವಣೆಯಲ್ಲಿ ಮತ ಗೆಲ್ಲುವ ಜೊತೆಗೆ ಕೆಲವರ ಮನವನ್ನೂ ಗೆಲ್ಲಬೇಕು ಅನ್ನೋದು ಹಸ್ತ ರೂಪಿಸುತ್ತಿರುವ ರಣತಂತ್ರ.

Leave a Reply