ತ್ರಿಪುರಾ- ನಾಗಾಲೆಂಡ್ ನಲ್ಲಿ ಎಡ ಪಕ್ಷಗಳನ್ನು ಮಕಾಡೆ ಮಲಗಿಸಿದ ಬಿಜೆಪಿ ಮೈತ್ರಿ!

ಡಿಜಿಟಲ್ ಕನ್ನಡ ಟೀಮ್:

ದೇಶದಲ್ಲಿ ಕೇಸರಿ ಅಬ್ಬರ ಈಗ ಈಶಾನ್ಯ ರಾಜ್ಯಗಳಿಗೂ ವಿಸ್ತರಿಸುತ್ತಿದೆ. ಈಶಾನ್ಯದ ಮೂರು ರಾಜ್ಯಗಳಾದ ತ್ರಿಪುರಾ, ಮೇಘಾಲಯ ಹಾಗೂ ನಾಗಾಲೆಂಡ್ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಪ್ರದರ್ಶನ ತೋರಿದೆ. ಮೂರೂ ರಾಜ್ಯಗಳ ವಿಧಾನಸಭೆ ತಲಾ 60 ಕ್ಷೇತ್ರಗಳ ಸಾಮರ್ಥ್ಯ ಹೊಂದಿದ್ದು, ತ್ರಿಪುರಾದಲ್ಲಿ ಬಿಜೆಪಿ ಮೈತ್ರಿ ಭರ್ಜರಿ ಜಯ ಸಾಧಿಸಿದೆ. ಅದರೊಂದಿಗೆ ಬಿಜೆಪಿ 2 ದಶಕಗಳ ಮಾಣಿಕ್ ಸರ್ಕಾರ್ ಅವರನ್ನು ಅಧಿಕಾರದ ಗದ್ದುಗೆಯಿಂದ ಕೆಳಗಿಳಿಸಿದೆ. ಇನ್ನು ಮೇಘಾಲಯದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆದರೂ ಬಹುಮತ್ ಪಡೆಯುವಲ್ಲಿ ವಿಫಲವಾಗಿದ್ದು ಅತಂತ್ರ ಸ್ಥಿತಿಯಲ್ಲಿದೆ. ಇತ್ತ ನಾಗಲ್ಯಾಂಡ್ ಅತಂತ್ರದ ಪರಿಸ್ಥಿತಿಯಲ್ಲಿದೆ. ಮೂರೂ ರಾಜ್ಯಗಳಲ್ಲಿ ಬಿಜೆಪಿ ಮತ ಪ್ರಮಾಣ ಗಮನಾರ್ಹವಾಗಿ ಏರಿಕೆಯಾಗಿರೋದು ದೇಶದಲ್ಲಿ ಕೇಸರಿ ವಿಸ್ತರಣೆಗೆ ಸಾಕ್ಷಿಯಾಗಿದೆ.

ಫಲಿತಾಂಶ ಹೀಗಿದೆ…

ತ್ರಿಪುರಾ (60/60)

ಪಕ್ಷ ಮುನ್ನಡೆ ಗೆಲುವು
ಬಿಜೆಪಿ+ ಐಪಿಎಫ್ ಟಿ 00 43
ಎಡಪಕ್ಷಗಳು 00 16
ಕಾಂಗ್ರೆಸ್ 00 00
ಇತರೆ 00 00

 

ಮೇಘಾಲಯ (59/60)

ಪಕ್ಷ ಮುನ್ನಡೆ ಗೆಲುವು
ಕಾಂಗ್ರೆಸ್ 00 21
ಬಿಜೆಪಿ 00 02
ಎನ್ ಪಿಪಿ 00 19
ಇತರೆ 00 17

 

ನಾಗಾಲೆಂಡ್ (60/60)

ಪಕ್ಷ ಮುನ್ನಡೆ ಗೆಲುವು
ಎನ್ ಡಿಡಿಪಿ+ಬಿಜೆಪಿ 00 28
ಎನ್ ಪಿಎಫ್ 00 29
ಕಾಂಗ್ರೆಸ್ 00 00
ಇತರೆ 00 02

Leave a Reply