ದ್ವೇಷ ರಾಜಕಾರಣ ದೇಶಕ್ಕೆ ಮಾರಕ

ಡಿಜಿಟಲ್ ಕನ್ನಡ ಟೀಮ್:

ಈಶಾನ್ಯ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಮಲ ಪಡೆ ಜಯಭೇರಿ ಬಾರಿಸಿ ಗದ್ದುಗೆ ಏರಿದೆ. 25 ವರ್ಷಗಳ ಕಾಲ ಆಳಿಯ ಎಡಪಕ್ಷವನ್ನು ಕೆಡವಿ ಸರ್ಕಾರ ರಚನೆ ಮಾಡಿರೋದು ಸಾಧನೆಯೇ ಸರಿ. ಇದು ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ ಪ್ರಕ್ರಿಯೆ. ಫಲಿತಾಂಶದ ಬಳಿಕ ತ್ರಿಪುರಾದಲ್ಲಿ ರಾಜಕೀಯ ಹಿಂಸಾಚಾರ ಭುಗಿಲೆದ್ದಿದ್ದು, ಕಮ್ಯುನಿಸ್ಟ್‌ ನಾಯಕ ಲೆನಿನ್‌ ಅವರ ಎರಡು ಪ್ರತಿಮೆಗಳನ್ನು ಕೆಡವಲಾಗಿದೆ. ಸೋಮವಾರ ಬೆಲೋನಿಯಾ ಹಾಗೂ ಮಂಗಳವಾರ ಸಬ್ರೂಮ್ ಪ್ರದೇಶದಲ್ಲಿದ್ದ ಪ್ರತಿಮೆ ಧ್ವಂಸ ಮಾಡಲಾಗಿದೆ. ಬಳಿಕ ತ್ರಿಪುರದ ವಿವಿಧ ಪ್ರದೇಗಳಲ್ಲಿ ಹಿಂಸಾಚಾರ ನಡೆದಿದೆ. ರಾಜಕೀಯ ಪ್ರೇರಿತ ಹಿಂಸಾಚಾರದ ಬಗ್ಗೆ ಅಧಿಕಾರ ಹಿಡಿದಿರುವ ಬಿಜೆಪಿ ಹಾಗೂ ಸೋತ ಸಿಪಿಎಂ ಪಕ್ಣಗಳು ಪರಸ್ಪರ ಕೆಸರೆರಚಾಟ ನಡೆಸುತ್ತಿವೆ.

ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಆಗಿರುವ ಈ ಘಟನಗೆ ಬಿಜೆಪಿ ಪ್ರತಿಕ್ರಿಯೆ ಕೂಡ ಸಕಾರಾತ್ಮಕವಾಗಿ ಇಲದಿರೋದು ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆ ಎನಿಸುವಂತಿದೆ. ಚುನಾವಣೆ ನಡೆದ ಬಳಿಕ ಗೆದ್ದವರ ಅಹಂ ಸ್ವಲ್ಪ ಜೋರಾಗಿರುವುದು ಸಹಜ. ಹಾಗಂದ ಮಾತ್ರಕ್ಕೆ ಸೋತವರ ಮನೆ ಮೇಲೆ ದಾಳಿ ಮಾಡುವುದು. ಒಂದು ಸಮುದಾಯದ ಮೇಲೆ ದಾಳಿ ಮಾಡಿ, ಅವರಿಗೆ ಸೇರಿದ ಪ್ರತಿಮೆಗಳ ಧ್ವಂಸ ಮಾಡ್ತಾರೆ, ಮನೆಗಳಿಗೆ ಬೆಂಕಿ ಹಚ್ತಾರೆ ಅಂದ್ರೆ ಏನರ್ಥ.. ಅಲ್ಲಿ ಸ್ಥಾಪಿತವಾದ ಸರ್ಕಾರ ಆ ದುಷ್ಕೃತ್ಯಗಳನ್ನು ತಡೆಯದೆ ಇದ್ದರೆ ಸರ್ಕಾರ ರಚನೆಯಾಗಿ ಏನು ಪ್ರಯೋಜನ ಎನ್ನುವ ಪ್ರಶ್ನೆಗಳು ಉದ್ಬವವಾಗಿವೆ. ಆದ್ರೆ ಬಿಜೆಪಿ ನಾಯಕರು ಈ ಗಲಾಟೆಗೆ ಪುಷ್ಠಿ ನೀಡುವಂತ ಹೇಳಿಕೆ ನೀಡುತ್ತಿರೋದು ಬಿಜೆಪಿ ಪಕ್ಷವೇ ಮುಂದೆ ನಿಂತು ನಡೆಸುತ್ತಿರುವ ಗಲಭೆ ಎನ್ನುವಂತಿದೆ. ವಿದೇಶಿ ನಾಯಕರ ಪ್ರತಿಮೆಗಳಿಗೆ ಭಾರತದಲ್ಲಿ ಜಾಗವಿಲ್ಲ ಎಂದು ಕೇಂದ್ರ ಸಚಿವ ಹಂಸರಾಜ್‌ ಅಹಿರ್‌ ಅವರೇ ಹೇಳಿದ್ದಾರೆ. ಇನ್ನೂ
ಲೆನಿನ್‌ ಒಬ್ಬ ಭಯೋತ್ಪಾದಕ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್‌ ಸ್ವಾಮಿ ತಿಳಿಸಿದ್ದಾರೆ.

ಈಶಾನ್ಯ ರಾಜ್ಯದ ಈ ಬೆಳವಣಿಗೆ ನಡುವೆ ತಮಿಳುನಾಡಿನಲ್ಲಿ ದ್ರಾವಿಡ ಚಳವಳಿ ನಾಯಕ ಪೆರಿಯಾರ್ ಪ್ರತಿಮೆಯನ್ನು ಧ್ವಂಸ ಮಾಡಲಾಗಿದೆ. ಈಶಾನ್ಯ ರಾಜ್ಯದ ಗಲಭೆಯಿಂದ ಪ್ರೇರಣೆ ಪಡೆದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಎಚ್. ರಾಜಾ, ಲೆನಿನ್ ಪ್ರತಿಮೆಯಂತೆ ತಮಿಳುನಾಡಿನಲ್ಲಿ ರಾಮಸ್ವಾಮಿ ಪ್ರತಿಮೆಗಳು ನೆಲಕ್ಕೆ ಉರುಳಲಿವೆ ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದರು.

ಭಾರತ ದೇಶದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದ್ದು ಜನರೇ ಸಾರ್ವಭೌಮರು. ಜನರ ಮತಗಳಿಂದ ಆಯ್ಕೆಯಾದ ಜನಪ್ರತಿನಿಗಳು ಸರ್ಕಾರದಲ್ಲಿ ಕೆಲಸ ಮಾಡಬೇಕಿದೆ. ಆದ್ರೆ ಗೆದ್ದವರು ಹೀಗೆ ವಿರೋಧಿಗಳ ಹುಟ್ಟಡಗಿಸಲು ಸಜ್ಜಾದಾಗ ದಂಗೆಗಳು ನಡೆಯುತ್ತವೆ. ಈಶಾನ್ಯದಲ್ಲಿ ಶುರುವಾದ ಕಮ್ಯೂನಿಸ್ಟ್‌ ಹಾಗೂ ಬಿಜೆಪಿ ಗಲಾಟೆ ತಮಿಳುನಾಡಿನಲ್ಲೂ ಕಾಣಿಸಿಕೊಂಡಿದೆ. ಈಗಾಗಲೇ ಟಿಪ್ಪುವನ್ನು ದೇಶದ್ರೋಹಿ ಎಂದು ಬಿಂಬಿಸಲು ಹೊರಟಿರುವ ಬಿಜೆಪಿ ಪಕ್ಷ, ಅಧಿಕಾರಕ್ಕೆ ಬಂದ ಬಳಿಕ ಟಿಪ್ಪು ಪ್ರತಿಮೆಗಳ ತೆರವಿಗೆ ಮುಂದಾಗಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ. ರಾಜಕಾರಣಿಗಳಯ ಏನೇ ಹೇಳಿದರು ಮಂಡ್ಯ, ಮೈಸೂರು ಭಾಗದಲ್ಲಿ ಟಿಪ್ಪು ನಮ್ಮವ ಅನ್ನೋ ಭಾವನೆಯಿದೆ. ನಾವುಗಳು ಕೂಡ ಪಠ್ಯದಲ್ಲಿ ಟಿಪ್ಪು ಓರ್ವ ಸ್ವತಂತ್ರ ಹೋರಾಟಗಾರ ಎಂದೇ ಓದಿದ್ದೇವೆ. ಪಕ್ಷಗಳ ರಾಜಕಾರಣಕ್ಕೆ ಜನರ

ಈಗ ಭಾರತೀಯರಾದ ಮಹಾತ್ಮ ಗಾಂಧಿ ಅವರ ಮೂರ್ತಿಯನ್ನು ದಕ್ಷಿಣಾಫ್ರಿಕಾದಲ್ಲಿ ಹಾಗೂ ಬಸವಣ್ಣನ ಮೂರ್ತಿಯನ್ನು ಲಂಡನ್ ನ ಥೇಮ್ಸ್ ನದಿ ತೀರದಲ್ಲಿ ಸ್ಥಾಪಿಸಲಾಗಿದೆ. ಇದೇ ರೀತಿ ವಿದೇಶಿ ನಾಯಕರ ಪ್ರತಿಮೆಗಳಿಗೆ ಅವಕಾಶವಿಲ್ಲ ಎಂದು ಏಕಾಏಕಿ ಮಧ್ಯರಾತ್ರಿ ಬುಲ್ಡೋಜರ್ ನಲ್ಲಿ ಉರುಳಿಸಿದರೆ ಭಾರತೀಯರಾದ ನಮ್ಮ ಮನಸ್ಸಿನಲ್ಲಿ ಯಾವ ಭಾವನೆ ಹುಟ್ಟುತ್ತದೆ. ಮಹಾತ್ಮ ಗಾಂಧಿಯನ್ನು ಕೊಂದ ಗೋಡ್ಸೆಯನ್ನೇ ಬೆಂಬಲಿಸುವ ಬಿಜೆಪಿ, ಇದನ್ನು ಸಂಭ್ರಮಿಸಬಹುದು. ಆದರೂ ಇದು ಪ್ರಜಾಪ್ರಭುತ್ವಕ್ಕೆ ಮಾರಕ

Leave a Reply