ವಿಶೇಷ ಸ್ಥಾನಮಾನ ಬೇಡಿಕೆ: ಬಿಜೆಪಿ- ಟಿಡಿಪಿ ನಡುವೆ ರಾಜಿನಾಮೆ ಸಮರ!

ಡಿಜಿಟಲ್ ಕನ್ನಡ ಟೀಮ್:

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಚಾರದ ಈಗ ಬಿಜೆಪಿ ವರ್ಸಸ್ ಟಿಡಿಪಿ ನಡುವೆ ರಾಜಿನಾಮೆ ಸಮರಕ್ಕೆ ವೇದಿಕೆಯಾಗಿದೆ. ತಮ್ಮ ಬೇಡಿಕೆ ಈಡೇರಿಸದ ಕೇಂದ್ರ ಸರ್ಕಾರದ ವಿರುದ್ಧ ಬೇಸತ್ತ ತೆಲುಗು ದೇಶಂ ಪಕ್ಷ ಮೋದಿ ಸಚಿವ ಸಂಪುಟದಲ್ಲಿರುವ ತನ್ನ ಇಬ್ಬರು ನಾಯಕರಿಂದ ರಾಜಿನಾಮೆ ನೀಡಿಸಲು ಮುಂದಾಗಿದೆ. ಟಿಡಿಪಿಯ ಈ ಒತ್ತಡದ ಪ್ರಯತ್ನಕ್ಕೆ ಪ್ರತಿಯಾಗಿ ಬಿಜೆಪಿ ಆಂಧ್ರ ಪ್ರದೇಶ ಸರ್ಕಾರದಲ್ಲಿರುವ ತನ್ನ ಸಚಿವರಿಂದ ರಾಜಿನಾಮೆ ನೀಡಿಸಲು ಮುಂದಾಗಿದೆ. ಆ ಮೂಲಕ ಬಿಜೆಪಿ ಹಾಗೂ ಟಿಡಿಪಿ ನಡುವಣ ಹಗ್ಗಜಗ್ಗಾಟ್ಟ ಮತ್ತಷ್ಟು ತೀವ್ರತೆ ಪಡೆದುಕೊಳ್ಳುತ್ತಿದೆ.

ವಿಶೇಷ ಸ್ಥಾನಮಾನ ವಿಚಾರದಲ್ಲಿ ಕೇಂದ್ರದ ಜತೆ ಯಾವುದೇ ರಾಜಿಗೆ ಮುಂದಾಗದ ಟಿಡಿಪಿ ಮೋದಿ ಸಚಿವ ಸಂಪುಟದಲ್ಲಿದ್ದ ತನ್ನ ಸಚಿವರುಗಳಿಂದ ರಾಜಿನಾಮೆ ನೀಡಿಸುವುದನ್ನು ತನ್ನ ಹೋರಾಟದ ಮೊದಲ ಹೆಜ್ಜೆ ಎಂದು ತಿಳಿಸಿದೆ. ಅದರೊಂದಿಗೆ ಎನ್ ಡಿಎ ಮೈತ್ರಿಕೂಟ ತೊರೆಯುವ ಎಚ್ಚರಿಕೆಯನ್ನೂ ರವಾನಿಸಿದೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ಮಾತ್ರವಲ್ಲದೇ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ ಸಹ ಎದುರಾಗಲಿದ್ದು, ಎರಡೂ ಪಕ್ಷಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಾಗಿ ಉಭಯ ಪಕ್ಷಗಳು ತಮ್ಮ ಪಟ್ಟು ಬಿಡಲು ಬಿಲ್ ಕುಲ್ ಸಿದ್ಧರಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ವರ್ಸಸ್ ಟಿಡಿಪಿ ನಡುವಣ ಸಮರ ಮತ್ತಷ್ಟು ತೀವ್ರಗೊಳ್ಳಲಿದ್ದು, ಇದರ ಲಾಭ ಪಡೆಯಲು ಕಾಂಗ್ರೆಸ್ ತುದಿಗಾಲಲ್ಲಿ ನಿಂತಿದೆ.

Leave a Reply