‘ಪಾಕಿಸ್ತಾನದಿಂದ ಪಾಠ ಕಲಿಯೋ ಅಗತ್ಯ ನಮಗಿಲ್ಲ…’ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಜನ್ಮ ಜಾಲಾಡಿದ ಭಾರತ

GA am

ಡಿಜಿಟಲ್ ಕನ್ನಡ ಟೀಮ್:

ಕಾಶ್ಮೀರ ವಿಚಾರವಾಗಿ ವಿಶ್ವಸಂಸ್ಥೆಯಲ್ಲಿ ಮಾನವ ಹಕ್ಕು ಉಲ್ಲಂಘನೆಯ ಆರೋಪ ಹೊರಿಸುತ್ತಿರುವ ಪಾಕಿಸ್ತಾನದ ವಿರುದ್ಧ ಸತತ ಎರಡನೇ ದಿನವೂ ಹರಿಹಾಯ್ದಿದೆ. ಮುಂಬೈ ದಾಳಿಯಿಂದಿ ಹಿಡಿದು, ಭಯೋತ್ಪಾದಕ ಬಿನ್ ಲಾಡೆನ್ ಗೆ ಆಶ್ರಯ ನೀಡಿದ್ದರವರೆಗೂ ಎಲ್ಲ ಕರ್ಮಕಾಂಡಗಳ ಪಟ್ಟಿಯನ್ನು ಬಿಚ್ಚಿಡುವ ಮೂಲಕ ಭಾರತ, ಪಾಕಿಸ್ತಾನದ ಜನ್ಮ ಜಾಲಾಡಿದೆ.

ಕಾಶ್ಮೀರ ವಿಚಾರವಾಗಿ ಪಾಕಿಸ್ತಾನ ವಿಶ್ವಸಂಸ್ಥೆ ಶಾಶ್ವಸ ಉಪ ಪ್ರತಿನಿಧಿ ತಾಹೀರ್ ಅಂದ್ರಾಬಿ ಅವರ ಹೇಳಿಕೆಗೆ ಶುಕ್ರವಾರ ಉತ್ತರ ನೀಡಿದ ಭಾರತದ ವಿಶ್ವಸಂಸ್ಥೆ ಪ್ರತಿನಿಧಿ ಮಿನಿ ದೇವಿ ಕುಮಾಮ್, ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದು ಹೀಗೆ…

‘ಯಾವ ದೇಶ ತನ್ನೊಳಗೆ ಭಯೋತ್ಪಾದಕರಿಗೆ ಆಶ್ರಯ ನೀಡಿ, ಭಯೋತ್ಪಾದಕ ರಾಜಾರೋಷವಾಗಿ ಒಡಾಡಿಕೊಂಡಿರಲು ಅಕಾಶ ನೀಡಿದೆಯೋ ಅಂತಹ ವಿಫಲ ಹೊಂದಿರುವ ದೇಶದಿಂದ ಜಗತ್ತು ಪ್ರಜಾಪ್ರಭುತ್ವ ಹಾಗೂ ಮಾನವ ಹಕ್ಕಿನ ಕುರಿತಾಗಿ ಪಾಠ ಕಲಿಯುವ ಅಗತ್ಯವಿಲ್ಲ. ಇಂತಹ ದೇಶ ಭಾರತದಲ್ಲಿ ಮಾನವ ಹಕ್ಕು ಉಲ್ಲಂಘನೆ ವಿಚಾರವಾಗಿ ಮಾತನಾಡುತ್ತಿದೆ. 2008ರ ಮುಂಬೈ ದಾಳಿ ಹಾಗೂ 2016ರ ಪಠಾಣ್ ಕೋಟ್ ಮತ್ತು ಉರಿಯಲ್ಲಿರುವ ಸೇನಾ ನೆಲೆಗಳ ಮೇಲಿನ ದಾಳಿಯ ರೂವಾರಿಗಳನ್ನು ಶಿಕ್ಷಿಸಿ ನ್ಯಾಯ ಒದಗಿಸಬೇಕು. ಮಾನವ ಹಕ್ಕಿನ ಬಗ್ಗೆ ಬೋಧನೆ ಮಾಡುವ ಪಾಕಿಸ್ತಾನ ಮೊದಲು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಕಾಶ್ಮೀರವನ್ನು ಬಿಟ್ಟು ಹೋಗಬೇಕು ಎಂಬುದನ್ನು ಮರೆತಿದೆ.’

Leave a Reply