ದಯಾಮರಣಕ್ಕೆ ಸುಪ್ರೀಂ ಅಸ್ತು! ನೀವು ತಿಳಿಯಲೇಬೇಕಿರುವ ಪ್ರಮುಖ ಮಾಹಿತಿಗಳು

ಡಿಜಿಟಲ್ ಕನ್ನಡ ವಿಶೇಷ:

ಪ್ರತಿಯೊಬ್ಬ ವ್ಯಕ್ತಿ ನೆಮ್ಮದಿಯಿಂದ ಜೀವ ಬಿಡುವುದು ಆತನ ಹಕ್ಕು ಎಂಬ ಅಭಿಪ್ರಾಯದೊಂದಿಗೆ ಸುಪ್ರೀಂ ಕೋರ್ಟ್ ಇಚ್ಚಾ ದಯಾಮರಣಕ್ಕೆ ಅನುಮತಿ ನೀಡಿ ಶುಕ್ರವಾರ ಐತಿಹಾಸಿಕ ತೀರ್ಪು ಹೊರಡಿಸಿದೆ.

ಈ ತೀರ್ಪಿನ ಬೆನ್ನಲ್ಲೇ ಈ ದಯಾ ಮರಣ ಎಂದರೇ ಏನು? ಇದನ್ನು ಯಾವ ರೀತಿ ಕೊಡಲಾಗುತ್ತದೆ? ಏಕೆ ಕೊಡಲಾಗುತ್ತದೆ? ಹೀಗೆ ಅನೇಕ ಪ್ರಶ್ನೆಗಳು ಸಾಮಾನ್ಯ ಜನರಲ್ಲಿ ಉದ್ಭವಿಸೋದು ಸಹಜ. ಆ ಎಲ್ಲ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ.

  • ಯಾವುದೇ ಒಬ್ಬ ವ್ಯಕ್ತಿ ಸಾವು ಬದುಕಿನ ಮಧ್ಯೇ ಹೋರಾಡುತ್ತಾ, ಜೀವ ರಕ್ಷಕ ಯಂತ್ರಗಳ ನೆರವಿನಿಂದ ಬದುಕಿರುತ್ತಾನೋ ಅಥವಾ ಆತ ಮೊದಲಿನಂತೆ ಗುಣಮುಖವಾಗಲು ಸಾಧ್ಯವಿಲ್ಲದ ಪರಿಸ್ಥಿತಿಗೆ ತಲುಪುತ್ತಾನೋ ಆತನಿಗೆ ಸಾಯಲು ಅವಕಾಶ ಕಲ್ಪಿಸಿಕೊಡುವುದೇ ಇಚ್ಛಾ ದಯಾಮರಣ.
  • ಯಾವುದೇ ಒಬ್ಬ ವ್ಯಕ್ತಿ ತಾನೂ ಯಾವುದೇ ಚಿಕಿತ್ಸೆ ಆಸರೆ ಇಲ್ಲದೇ ಬದುಕುವುದು ಸಾಧ್ಯವಾಗುವುದಿಲ್ಲವೋ ಅಥವಾ ಜೀವ ರಕ್ಷಕದಲ್ಲಿ ಇರಿಸಲಾಗುತ್ತದೋ ಅಂತಹ ಸಂದರ್ಭದಲ್ಲಿ ತನಗೆ ಸಾಯಲು ಅವಕಾಶ ಮಾಡಿಕೊಡಬೇಕು ಎಂದು ಮುಂಚಿತವಾಗಿಯೇ ಬರೆದಿಡುವ ದಾಖಲೆ ಪತ್ರಕ್ಕೆ ಲಿವಿಂಗ್ ವಿಲ್ ಎಂದು ಕರೆಯಲಾಗುತ್ತದೆ. ಇದರೊಂದಿಗೆ ವ್ಯಕ್ತಿ ತಾನು ಚಿಂತಾಜನಕ ಪರಿಸ್ಥಿತಿಗೆ ತಲುಪಿದರೆ ಸಾಯಬೇಕೆ ಅಥವಾ ಬೇಡವೇ ಎಂದು ಮೊದಲೇ ನಿರ್ಧರಿಸಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ.
  • ವ್ಯಕ್ತಿ ಇಚ್ಛಾ ದಯಾಮರಣದ ಬಗ್ಗೆ ಉಯಿಲು ಬರೆದಿಡದೇ ಚಿಂತಾಜನಕ ಪರಿಸ್ಥಿತಿಗೆ ತಲುಪಿದರೆ, ಅಂತಹ ಸಂದರ್ಭದಲ್ಲಿ ಆತನ ಸಂಬಂಧಿಕರು ಹೈಕೋರ್ಟ್ ಮೊರೆ ಹೋಗಿ ಆ ವ್ಯಕ್ತಿಗೆ ಮರಣ ಕೊಡಿಸಬಹುವುದಾಗಿದೆ. ಇಲ್ಲಿ ದಯಾಮರಣಕ್ಕೆ ಬೇಕಾದ ಎಲ್ಲಾ ಮಾನದಂಡಗಳು ಪೂರ್ಣಗೊಂಡಿರಬೇಕು. ಉದಾಹರಣೆಗೆ ಆ ವ್ಯಕ್ತಿ ಮತ್ತೆ ಗುಣಮುಖರಾಗಲು ಸಾಧ್ಯವೇ ಇಲ್ಲ ಎಂದು ವೈದ್ಯರು ಖಚಿತಪಡಿಸಬೇಕು.
  • ವ್ಯಕ್ತಿಯೊಬ್ಬ ಕೃತಕ ಯಂತ್ರ ಅಥವಾ ಜೀವ ರಕ್ಷಕದಿಂದ ಬದುಕಿದ್ದರೂ ಜೀವಂತ ಶವವಾಗಿರುವ ಬದಲು, ಆತನಿಗೆ ಘನತೆಯಿಂದ ಸಾಯುವ ಅಧಿಕಾರವನ್ನು ನೀಡುವುದೇ ಮರಣ ಹಕ್ಕು. ಪ್ರತಿಯೊಬ್ಬ ವ್ಯಕ್ತಿಗೆ ಬದುಕುವ ಹಕ್ಕು ಹೇಗಿದೆಯೋ ಅದೇ ರೀತಿ ಘನತೆಯಿಂದ ಸಾಯುವ ಹಕ್ಕು ಇದೇ ಎಂಬ ಸಂದೇಶ ರವಾನೆ.

Leave a Reply