ಪುಟ್ಟಣ್ಣಯ್ಯ ನಿಧನ ಪುಟ್ಟರಾಜುಗೆ ಸಂಕಷ್ಟ!

ಡಿಜಿಟಲ್ ಕನ್ನಡ ಟೀಮ್:

ಮೇಲುಕೋಟೆ ಶಾಸಕ ಪುಟ್ಟಣ್ಣಯ್ಯ ಇತ್ತೀಚಿಗೆ ನಿಧನರಾಗಿದ್ದು, ರೈತರಿಗೆ ತುಂಬಲಾರದ ನಷ್ಟ ಅನ್ನೋದು ಕಟು ಸತ್ಯ. ಪುಟ್ಟಣ್ಣಯ್ಯ ಸಾವು ರೈತ ಸಮುದಾಯವನ್ನು ಎಷ್ಟು ಕಂಗೆಡಿಸಿದೆಯೋ ಅದರ ದುಪ್ಪಟ್ಟು ಮಂಡ್ಯ ಸಂಸದ ಪುಟ್ಟರಾಜು ಅವರ ತಲೆ ಕೆಡಿಸಿದೆ. ಮಂಡ್ಯದಿಂದ ಆಯ್ಕೆಯಾಗಿರುವ ಜೆಡಿಎಸ್ ನ ಸಿ.ಎಸ್ ಪುಟ್ಟರಾಜು ಮೇಲುಕೋಟೆ ಕ್ಷೇತ್ರ ಮಾಜಿ ಶಾಸನನಾಗಿದ್ದು ಕಳೆದ ಬಾರಿ ಪುಟ್ಟಣ್ಣಯ್ಯ ವಿರುದ್ಧ ಸೋತಿದ್ದರು. ಈ ಬಾರಿ ಸಂಸದರಾಗಿದ್ದರೂ ಶಾಸಕ ಸ್ಥಾನಕ್ಕೆ ಸ್ಪರ್ಧಿಸುವ ಇಚ್ಛೆಯಿಂದ ಪುಟ್ಟಣ್ಣಯ್ಯ ವಿರುದ್ಧ ವಾಗ್ದಾಳಿ ಮಾಡುತ್ತ ಇಡೀ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ರು. ಆದ್ರಿಗ ಪುಟ್ಟಣ್ಣಯ್ಯ ಇಲ್ಲದೇ ಇರೋದು ಪುಟ್ಟರಾಜು ಅವರ ಆತಂಕಕ್ಕೆ ಕಾರಣವಾಗಿದೆ.

ಕರ್ನಾಟಕ ರೈತಸಂಘದಿಂದಲೇ ಸ್ಪರ್ಧಿಸಿ ಜಯ ಕಂಡಿದ್ದ ಕೆ.ಎಸ್ ಪುಟ್ಟಣ್ಣಯ್ಯ, ಆಮ್ ಆದ್ಮಿ ಪಾರ್ಟಿಯಿಂದ ಸಿಡಿದ ಯೋಗೇಂದ್ರ ಯಾದವ್ ಸ್ಥಾಪಿಸಿದ ಸ್ವರಾಜ್ ಇಂಡಿಯಾ ಪಾರ್ಟಿ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ರೈತರ ಶ್ರೇಯೋಭಿವೃದ್ಧಿಗಾಗಿ ಸ್ವರಾಜ್ ಇಂಡಿಯಾ ಕೂಡ ಕೆಲಸ ಮಾಡ್ತಿದ್ದ ಕಾರಣಕ್ಕೆ ಈ ಬಾರಿ ಸ್ವರಾಜ್ ಇಂಡಿಯಾದಿಂದಲೇ ಸ್ಪರ್ಧೆ ಮಾಡುವ ಬಗ್ಗೆ ಪುಟ್ಟಣ್ಣಯ್ಯ ಆಲೋಚಿಸಿದ್ರು. ಹೀಗಾಗಿ ಪುಟ್ಟಣ್ಣಯ್ಯ ಇಲ್ಲದಿದ್ದರೂ ಅವರ ಆಲೋಚನೆಯಂತೆ ಸ್ವರಾಜ್ ಇಂಡಿಯಾ ಪಕ್ಷ ಮೇಲುಕೋಟೆಯಲ್ಲಿ ಸ್ಪರ್ಧಿಸಲಿದೆ. ಆ ಪಕ್ಷದ ಅಭ್ಯರ್ಥಿಯಾಗಿ ದಿವಂಗತ ಪುಟ್ಟಣ್ಣಯ್ಯ ಅವರ ಧರ್ಮಪತ್ನಿ ಅಥವಾ ಮಗ ದರ್ಶನ್ ಕಣಕ್ಕೆ ಇಳಿಯುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ಪುಟ್ಟಣ್ಣಯ್ಯ ಅವರನ್ನು ಕಳೆದುಕೊಂಡಿದ್ದೇವೆ. ಅವರ ಯೋಜನೆಗಳು ಕಾರ್ಯರೂಪಕ್ಕೆ ಬರಲು ಅವರ ಕುಟುಂಬಸ್ಥರು ರಾಜಕೀಯಕ್ಕೆ ಬಂದರೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಕೂಡ ಪರೋಕ್ಷ ಬೆಂಬಲ ನೀಡಿದೆ.

ಮಂಡ್ಯ ಜಿಲ್ಲೆ ಜನತೆ ಎಷ್ಟು ಒರಟು ಭಾಷೆಯವರೋ ಅಷ್ಟೇ ಮೃದು ಸ್ವಭಾವದ ವ್ಯಕ್ತಿತ್ವದವರು. ಅವರಲ್ಲಿ ಬೆದರಿಸಿ ಪಡೆತುವುದಕ್ಕಿಂತ ಬೇಡಿ ಪಡೆಯುವುದೇ ಬಹಳ ಸುಲಭ. ಯಾಕಂದ್ರೆ ಸ್ವತಂತ್ರ ನಂತರ ಮಂಡ್ಯ ಜಿಲ್ಲೆಯಲ್ಲಿ ಅಧಿಕಾರದಲ್ಲಿದ್ದಾಗ ಹಲವಾರು ಶಾಸಕರು ಮರಣ ಹೊಂದಿದ್ದಾರೆ. ಆ ವೇಲೆ ಅವರ ಕುಟುಂಬಸ್ಥರು ಕಣಕ್ಕೆ ಇಳಿದಿದ್ದು, ಒಮ್ಮೆಯೂ ಸೋಲಿನ ಸುಳಿಗೆ ಸಿಲುಕಿಲ್ಲ. ನಾಗೇಗೌಡರ ನಿಧನದ ಬಳಿಕ ಅವರ ಪತ್ನಿ, ಮದ್ದೂರಿನಲ್ಲಿ ಸಿದ್ದರಾಜು ಪತ್ನಿ ಕಲ್ಪನಾ ಸಿದ್ದರಾಜು, ಶ್ರೀರಂಗಪಟ್ಟಣದಲ್ಲಿ ವಿಜಯಲಕ್ಷ್ಮೀ ಬಂಡಿಸಿದ್ದೇಗೌಡ ಹೀಗೆ ಸಾಲು ಸಾಲು ನಿದರ್ಶನಗಳು ಸಿಗುತ್ತವೆ. ಈ ಬಾರಿ ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿದ್ದ ಪುಟ್ಟರಾಜುಗೆ ಸಂಕಷ್ಟ ಎದುರಾಗಿದೆ. ಬೇರೆ ಕ್ಷೇತ್ರಕ್ಕೆ ವಲಸೆ ಹೋಗುವುದೋ ಅಥವಾ ಸಂಸದರಾಗಿ ಮುಂದುವರಿಯುವುದೋ ಅನ್ನೋ ಚಿಂತೆಯಲ್ಲಿ ಮುಳುಗಿದ್ದಾರೆ. ಮಂಡ್ಯದಲ್ಲಿ ಕ್ಲೀನ್ ಸ್ವೀಪ್ ಮಾಡುವ ಯೋಜನೆಯಲ್ಲಿದ್ದ ಜೆಡಿಎಸ್ ಒಂದು ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದೆ.

1 COMMENT

  1. ಸಿ ಎಸ್ ಪುಟ್ಟರಾಜು ಅವರಿಗೆ ಪಾಂಡವಪುರದಲ್ಲಿಯೇ ಅತಿ ಹೆಚ್ಚು ಲೀಡ್ ಕೂಡುತ್ತೇವೇ

Leave a Reply