ಯೋಗಿ ಆದಿತ್ಯನಾಥರ ದಾರಿಯಲ್ಲಿ ಶೀರೂರು ಸ್ವಾಮೀಜಿ

ಡಿಜಿಟಲ್ ಕನ್ನಡ ಟೀಮ್:

ಸಂತರು ಸ್ವಾಮೀಜಿಗಳು ರಾಜಕೀಯ ಮಾಡಬಹುದು ರಾಜ್ಯವನ್ನಾಳಬಹುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ತೋರಿಸಿಕೊಟ್ಟಿದ್ದು, ಈಗ ಅವರ ಹಾದಿಯಲ್ಲೇ ನಡೆಯಲು ಕರ್ನಾಟಕದ ಶೀರೂರು ಮಠದ ಲಕ್ಷ್ಮೀವರತೀರ್ಥ ಶ್ರೀಗಳು ನಿರ್ಧರಿಸಿದ್ದಾರೆ.

ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯ ಪ್ರವೇಶಕ್ಕೆ ಸ್ವೀಮಿಗಳು ನಿರ್ಧರಿಸಿದ್ದು, ಸದ್ಯಕ್ಕೆ ಪಕ್ಷೇತರರಾಗಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಹಿರಿಯಡ್ಕ ಸಮೀಪದ ಶೀರೂರಿನ ಮೂಲ ಮಠದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು ಹೇಳಿದಿಷ್ಟು…

‘ನಾನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಉಡುಪಿಯಿಂದ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ಜನಪರವಾಗಿದೆ. ಆದರೆ, ಉಡುಪಿಯಲ್ಲಿ ಮಾತ್ರ ಅದು ಸರಿಯಾಗಿಲ್ಲ. ಇಲ್ಲಿ ಕಳ್ಳರು, ಭ್ರಷ್ಟಾಚಾರಿಗಳೇ ತುಂಬಿದ್ದಾರೆ. ಹೀಗಾಗಿ ತಾನು ಪಕ್ಷೇತರನಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ. ಒಂದು ವೇಳೆ ಪಕ್ಷ  ಟಿಕೇಟ್ ನೀಡಿದರೆ ಬಿಜೆಪಿಯಿಂದ ಸ್ಪರ್ಧಿಸುತ್ತೇನೆ. ಸಚಿವ ಪ್ರಮೋದ್ ಮಧ್ವರಾಜ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ತನ್ನ ಸ್ಪರ್ಧೆಯಿಂದ ಪ್ರಮೋದ್‌ಗೆ ಲಾಭವಾಗಲಿದೆ. ಬಿಜೆಪಿ ಬಿಟ್ಟು ಬೇರೆ ಪಕ್ಷದ ಟಿಕೆಟಿನಿಂದ ಸ್ಪರ್ಧಿಸುವುದಿಲ್ಲ, ಚುನಾವಣೆಗೆ ಸ್ಪರ್ಧಿಸುವುದು ನನ್ನ ಅಚಲ ನಿರ್ಧಾರ.’

Leave a Reply