ಆರೆಸ್ಸೆಸ್ ಸಹಸರಕಾರ್ಯವಾಹರಾಗಿ ರಾಜ್ಯದ ಸಿ.ಆರ್. ಮುಕುಂದ ನೇಮಕ

ಡಿಜಿಟಲ್ ಕನ್ನಡ ಟೀಮ್:

ಆರೆಸ್ಸೆಸ್ ನ ಅಖಿಲ ಭಾರತ ಪ್ರತಿನಿಧಿ ಸಭಾದಲ್ಲಿ ಸಂಘದ ಪ್ರಮುಖ ಜವಾಬ್ದಾರಿಗಳಲ್ಲಿ ಬದಲಾವಣೆ ಮಾಡಲಾಗಿದ್ದು, ಕರ್ನಾಟಕದ ಸಿ.ಆರ್ ಮುಕುಂದ ಅವರನ್ನು ರಾಷ್ಟ್ರಮಟ್ಟದ 6 ಸಹಸರಕಾರ್ಯವಾಹ (ಜಂಟಿ ಪ್ರಧಾನ ಕಾರ್ಯದರ್ಶಿ) ರಲ್ಲಿ ಒಬ್ಬರಾಗಿ ನೇಮಕವಾಗಿದ್ದಾರೆ.

ಇನ್ನು ರಾಜ್ಯದಲ್ಲಿ ಡಾ.ಜಯಪ್ರಕಾಶ್ (ಕರ್ನಾಟಕ ದಕ್ಷಿಣ ಪ್ರಾಂತ್ಯ ಕಾರ್ಯವಾಹ), ಪಿ.ಎಸ್.ಪ್ರಕಾಶ್ (ಕರ್ನಾಟಕ ದಕ್ಷಿಣ ಪ್ರಾಂತ್ಯ ಸಹಕಾರ್ಯವಾಹ), ಗುರುಪ್ರಸಾದ್ (ಕರ್ನಾಟಕ ದಕ್ಷಿಣ ಪ್ರಾಂತ್ಯ ಪ್ರಚಾರಕ), ಸುಧಾಕರ್ (ಕರ್ನಾಟಕ ಉತ್ತರ ಪ್ರಾಂತ್ಯ ಪ್ರಚಾರಕ) ನರೇಂದ್ರ (ಕರ್ನಾಟಕ ಉತ್ತರ ಸಹಪ್ರಾಂತ್ಯ ಪ್ರಚಾರಕ), ಎನ್.ತಿಪ್ಪೇಸ್ವಾಮಿ ಅವರನ್ನು ಕ್ಷೇತ್ರೀಯ ಸಹಕಾರ್ಯವಾಹ (ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ), ಸುಧೀರ್ ಅವರನ್ನು ಕ್ಷೇತ್ರ ಸಹಪ್ರಚಾರಕ (ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ), ಬಿ.ವಿ.ಶ್ರೀಧರಸ್ವಾಮಿ ಅವರನ್ನು ಕ್ಷೇತ್ರೀಯ ಬೌದ್ಧಕ್ ಪ್ರಮುಖ (ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ),ಶಂಕರಾನಂದ  ಅವರನ್ನು ಭಾರತೀಯ ಶಿಕ್ಷಣ ಮಂಡಳಿಗೆ ನೇಮಕ ಮಾಡಲಾಗಿದೆ.

ಉಳಿದಂತೆ ದತ್ತಾತ್ರೇಯ ಹೊಸಬಾಳೆ, ಸುರೇಶ್ ಜೋಷಿ, ಡಾ.ಕೃಷ್ಣ ಗೋಪಾಲ್, ಭಾಗಯ್ಯ, ಡಾ. ಮನಮೋಹನ್ ವೈದ್ಯ ಅವರು ಮುಕುಂದ್ ಅವರ ಜತೆ ಉಳಿದ ಸಹಸರಕಾರ್ಯವಾಹರಾಗಿದ್ದಾರೆ.

Leave a Reply