ಕಾಂಗ್ರೆಸ್- ಬಿಜೆಪಿ ನಡುವಣ ಪ್ರಶ್ನೋತ್ತರ ಸಮರದಲ್ಲಿ ಗೆದ್ದಿದ್ಯಾರು?

ಡಿಜಿಟಲ್ ಕನ್ನಡ ವಿಶೇಷ:

ವಿಧಾನಸಭಾ ಚುನಾವಣೆಗೆ ಸಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಣ ವಾಗ್ದಾಳಿ ನಿಯಂತ್ರಣ ಕಳೆದುಕೊಳ್ಳುವ ಮಟ್ಟಕ್ಕೆ ತಲುಪುತ್ತಿವೆ. ಎರಡು ಪಕ್ಷಗಳ ನಾಯಕರು ಟ್ವೀಟ್​ನಲ್ಲಿ ಲೆಕ್ಕಾಚಾರಗಳ ಸಮರ ಆರಂಭಿಸಿವೆ. ಕಾಂಗ್ರೆಸ್​​ ಕೇಳಿದ್ದ 10 ಪ್ರಶ್ನೆಗಳಿಗೆ ಬಿಜೆಪಿ ಉತ್ತರ ನೀಡಿದೆ. ಲೆಕ್ಕಕ್ಕೆ ಪ್ರತಿ ಲೆಕ್ಕ ಎಂಬಂತೆ ಉಭಯ ಪಕ್ಷಗಳು ಪ್ರಶ್ನೆ ಹಾಗೂ ಉತ್ತರಗಳ ಹಂಚಿಕೆ ಸ್ವಾರಸ್ಯಕರವಾಗಿದ್ದು, ಕಾಂಗ್ರೆಸ್ ನ ಪ್ರಶ್ನೆಗಳ ಪ್ರಶ್ನೆಗಳ ದಾಳಿಗೆ ಬಿಜೆಪಿಯ ಪ್ರತ್ಯುತ್ತರ ಹೇಗಿದೆ ಎಂಬುದನ್ನು ನೋಡೋಣ ಬನ್ನಿ…

 1. ಕಾಂಗ್ರೆಸ್: ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ನಿರಂತರವಾಗಿ ಕನ್ನಡೇತರ ಅಭ್ಯರ್ಥಿ ಆಯ್ಕೆ ಮಾಡ್ತಿದೆ. ಇದಕ್ಕೆ ಉದಾಹರಣೆ ರಾಜೀವ್​ ಚಂದ್ರಶೇಖರ್​ ಆಯ್ಕೆ.
  ಬಿಜೆಪಿ: ರಾಜೀವ್​ ಚಂದ್ರಶೇಖರ್​ ಕೇರಳದವರು ಅನ್ನೋ ಕಾರಣಕ್ಕೆ ಕಾಂಗ್ರೆಸ್​​ ವಿರೋಧಿಸುತ್ತಿದೆ. ಹಾಗಿದ್ರೆ ಸಚಿವ ಕೆ.ಜೆ ಜಾರ್ಜ್​ ಹಾಗೂ ಶಾಸಕ ಎನ್​.ಎ ಹ್ಯಾರಿಸ್​ ಅವರ ರಾಜೀನಾಮೆ ಪಡೆಯಿರಿ. ಯಾಕಂದ್ರೆ ಅವರೂ ಕೂಡ ಕೇರಳದವರು.
 2. ಕಾಂಗ್ರೆಸ್: ಮಹದಾಯಿ ಸಮಸ್ಯೆ ಇತರ್ಥ್ಯಕ್ಕೆ 3 ರಾಜ್ಯಗಳ ಸಿಎಂ ಸಭೆ ಕರೆಯುವಂತೆ ಹಲವಾರು ಬಾರಿ ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ಮನವಿ ಮಾಡಿದ್ರು ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿದ್ದಾರೆ.
  ಬಿಜೆಪಿ: ಸೋನಿಯಾ ಗಾಂಧಿ ಬಹಿರಂಗ ಸಭೆಯಲ್ಲೇ ಮಹದಾಯಿಯಿಂದ ಒಂದು ಹನಿ ನೀರನ್ನು ಕರ್ನಾಟಕಕ್ಕೆ ಬಿಡಲು ಸಾಧ್ಯವಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ.. ಈ ಹೇಳಿಕೆಯನ್ನು ನಾವು ಖಂಡಿಸುತ್ತೇವೆ.
 3. ಕಾಂಗ್ರೆಸ್: ಭಾರತೀಯ ಪ್ರಾದೇಶಿಕ ಬ್ಯಾಂಕಿಂಗ್​ ಪರೀಕ್ಷೆಯಲ್ಲಿ ಬದಲಾವಣೆ ಮಾಡಿ ಹಿಂದಿ ಹಾಗೂ ಇಂಗ್ಲಿಷ್​ನಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಕನ್ನಡಿಗರು ಉದ್ಯೋಗ ವಂಚಿತರಾಗ್ತಿದ್ದಾರೆ. ಈ ಬಗ್ಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದು, ಕೇಂದ್ರದಿಂದ ಉತ್ತರ ಬಂದಿಲ್ಲ.
  ಬಿಜೆಪಿ: ಭಾರತೀಯ ಪ್ರಾದೇಶಿಕ ಬ್ಯಾಂಕಿಂಗ್​ ಪರೀಕ್ಷೆಗಳು ( IBPS ) ಪರೀಕ್ಷೆ ಆರಂಭವಾಗಿದ್ದು 2014ರಲ್ಲಿ ಅಲ್ಲ. ಹಾಗಿದ್ದ ಮೇಲೆ ನಿಮ್ಮದೇ ಸರ್ಕಾರ ಕೇಂದ್ರದಲ್ಲಿದ್ದಾಗ ಯಾಕೆ ಕನ್ನಡವನ್ನು ಸೇರಿಸಲಿಲ್ಲ? ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನೀಟ್​ ಪರೀಕ್ಷೆ ಆರಂಭಿಸಿದ್ದು ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ ನೀಡಿದೆ ಎಂದಿದೆ. ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆಗೆ ಅವಕಾಶ ಕೊಡುವ ಬಗ್ಗೆ ರಾಜ್ಯಗಳಿಂದ ಕೇಂದ್ರ ಸಲಹೆ ಕೇಳಿದಾಗ, ನಿಮ್ಮ ಸರ್ಕಾರ ಇಂಗ್ಲಿಷ್​ ಆಯ್ಕೆ ಮಾಡಿಕೊಂಡು ಕನ್ನಡಕ್ಕೆ ದ್ರೋಹ ಬಗೆದಿದೆ. ಆಗ ಕೇಂದ್ರ ಬಿಜೆಪಿ ಸಚಿವರು ಶ್ರಮವಹಿಸಿ ಕನ್ನಡ ಸೇರಿಸಿದ್ದಾರೆ.
 4. ಕಾಂಗ್ರೆಸ್: ಬರ ಪರಿಹಾರದಲ್ಲಿ ಕೇಂದ್ರ ಸರ್ಕಾರದ ತಾರತಮ್ಯ ಮಾಡಲಾಗಿದೆ
  ಬಿಜೆಪಿ: ಬಿಜೆಪಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ‌ ಇದ್ದಾಗ 2007-08ರಲ್ಲಿ ರಾಜ್ಯ ಕೇಳಿದ್ದು 42 ಕೋಟಿ‌‌ ರೂ.‌ ಆದ್ರೆ ಕೇಂದ್ರ ಕೊಟ್ಟಿದ್ದು ಮಾತ್ರ 269 ಕೋಟಿ, 2012-13ರಲ್ಲಿ ರಾಜ್ಯ ಕೇಳಿದ್ದು 11,489 ಕೋಟಿ ಆದ್ರೆ ಕೇಂದ್ರ ಸರ್ಕಾರ ಕೊಟ್ಟಿದ್ದು ಕೇವಲ 530.29 ಕೋಟಿ ಮಾತ್ರ.. ಆದ್ರೆ ಮೋದಿ ಸರ್ಕಾರ ಕಾಂಗ್ರೆಸ್​ ಸರ್ಕಾರ ಕೊಟ್ಟಿದ್ದ 3 ಪಟ್ಟು ಜಾಸ್ತಿ ನೀಡಿದೆ.
 5. ಕಾಂಗ್ರೆಸ್: ಕರ್ನಾಟಕದಲ್ಲಿ ಇದ್ದ CRPF ಕಚೇರಿಯನ್ನು ಉತ್ತರ ಪ್ರದೇಶಕ್ಕೆ‌ ಅದರಲ್ಲೂ ರಾಜನಾಥ್​ ಸಿಂಗ್​ ಕ್ಷೇತ್ರಕ್ಕೆ ಎತ್ತಂಗಡಿ ಮಾಡಿಕೊಂಡರು.
  ಬಿಜೆಪಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕರ್ನಾಟಕಕ್ಕೆ AIIMS, IIT, IIIT, ಸ್ಕಿಲ್​ ಡೆವಲಪ್​ಮೆಂಟ್​ ಯೂನಿವರ್ಸಿಟಿ, ಫುಡ್​ಪಾರ್ಕ್​ ಕೊಡುಗೆ ನೀಡಿದೆ. ಮಂಗಳೂರಿನಲ್ಲಿ NIA ಬ್ರಾಂಚ್​ ಸ್ಥಾಪನೆಗೆ ಮನವಿ ಮಾಡಿದ್ದೇವೆ‌.
 6. ಕಾಂಗ್ರೆಸ್: ಕನ್ನಡದ ಕಂಪನ್ನು ಎಲ್ಲಾ ಕಡೆ ಪಸರಿಸಲು ನಾಡಧ್ವಜವನ್ನು ರೂಪಿಸಿದ್ದೇವೆ. ಪ್ರತ್ಯೇಕ ಕನ್ನಡ ಬಾವುಟಕ್ಕೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸುವ ಮೂಲಕ ಕನ್ನಡ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ.
  ಬಿಜೆಪಿ: ಬಿಜೆಪಿ ಕಳೆದ 5 ವರ್ಷಗಳಿಂದ ನಿಮ್ಮ ಸರ್ಕಾರದ ರಾಬರಿ ಸಚಿವರು ಕರ್ನಾಟಕದ ಹೆಸರನ್ನು ಹಾಳು ಮಾಡಿದ್ದಾರೆ. ಕ್ರೈಂ ರೇಟ್​ನಲ್ಲಿ ಬಿಹಾರವನ್ನು ಹಿಂದಿಕ್ಕಿದ್ದೀರಿ ರಾಜಕೀಯ ಪ್ರೇರಿತ ಹತ್ಯೆಗಳಲ್ಲಿ ಕೇರಳವನ್ನು ಮೀರಿಸಿದ್ದೀರಿ. ಇದೀಗ ಕನ್ನಡ ಧ್ವಜ ಬದಲಾಯಿಸಿದ ನಾಟಕ ನಡೆಸಿದ್ದೀರಿ. ನಾಡಹಬ್ಬ ದಸರಾ, ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆರ್ಥಿಕ ನೆರವು ನೀಡಲು ನಿಮ್ಮ ಬಳಿ ಹಣವಿಲ್ಲ ಎಂದು ಅನುದಾನ ಕಡಿತ ಮಾಡ್ತೀರಿ. ಆದ್ರೆ ಟಿಪ್ಪು ಜಯಂತಿಯನ್ನು ಆಚರಣೆ ಮಾಡಲು ನಿಮ್ಮ ಬಳಿ ಹಣವಿದೆ.
 7. ಕಾಂಗ್ರೆಸ್: ಕಳೆದ 70 ವರ್ಷಗಳಿಂದ ಭಾರತೀಯ ವೈಮಾನಿಕ ಕ್ಷೇತ್ರದಲ್ಲಿ ಎಚ್​ಎಎಲ್​ ಅಪಾರ ಕೊಡುಗೆ ನೀಡುತ್ತಾ ಬಂದಿದೆ. ಆದ್ರೆ ಮೋದಿ ಸರ್ಕಾರ ವಿಮಾನ ಗುತ್ತಿಗೆಯನ್ನು ಹೆಚ್​ಎಎಲ್​ಗೆ ನೀಡದೆ ಅನಿಲ್ ಅಂಬಾನಿ ಸಂಸ್ಥೆಗೆ ನೀಡುವ ಮೂಲಕ ಹೆಚ್​ಎಎಲ್​ಗೆ ಮೋಸ ಮಾಡಿದೆ.
  ಬಿಜೆಪಿ: ರಿಲಯನ್ಸ್ ಕಂಪನಿಗೆ ಗುತ್ತಿಗೆ ನೀಡಿರೋದು ಕೇಂದ್ರ ಸರ್ಕಾರವಲ್ಲ, ಬದಲಿಗೆ ರಫೆಲ್ ಕಂಪನಿ ಒಳಗುತ್ತಿಗೆ ನೀಡಿದೆ. ಕಳೆದ 6 ದಶಕಗಳಿಂದ ಫೈಟರ್​ ಜೆಟ್​ಗಳನ್ನು ಫ್ರೆಂಚ್​ ಹಾಗೂ​ ರಷ್ಯಾ ದೇಶದಿಂದ ಆಮದು ಮಾಡಿಕೊಂಡಿದ್ದು ಬಿಜೆಪಿ ಸರ್ಕಾರವಲ್ಲ. ಇದೀಗ ಭಾರತವೇ ಸರ್ಕಾರವೇ ಅವರಿಗೆ ರಫ್ತು ಮಾಡ್ತಿದೆ. ಎಚ್​ಎಎಲ್​​ನ ಮತ್ತೊಂದು ಘಟಕವನ್ನು ಗುಬ್ಬಿಯಲ್ಲಿ ತೆರಯಲಾಗ್ತಿದ್ದು, ಕನ್ನಡಿಗರಿಗೆ ಮತ್ತಷ್ಟು ಉದ್ಯೋಗ ಸಿಗಲಿದೆ.
 8. ಕಾಂಗ್ರೆಸ್: ರಾಜ್ಯ ಸರ್ಕಾರ ಸಹಕಾರ ಬ್ಯಾಂಕ್​ಗಳಲ್ಲಿ ರೈತರು ಮಾಡಿದ್ದ 50 ಸಾವಿರದ ವರರೆಗಿನ ಸಾಲ ಮನ್ನಾ ಮಾಡಿದೆ.. ಆದ್ರೆ ಕೇಂದ್ರ ರಾಷ್ಟ್ರೀಕೃತ ಹಾಗೂ ವಾಣಿಜ್ಯ ಬ್ಯಾಂಕ್​ನಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡಿಲ್ಲ.
  ಬಿಜೆಪಿ: ನಮ್ಮ ಪಕ್ಷದ ರೈತ ಸ್ನೇಹಿ ಸರ್ಕಾರಗಳಾದ ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶ ಸರ್ಕಾರಗಳು ರೈತರ ಸಾಲ ಮನ್ನಾ ಮಾಡಿದ್ದು, ರಾಷ್ಟ್ರೀಕೃತ ಹಾಗೂ ವಾಣಿಜ್ಯ ಬ್ಯಾಂಕ್​ಗಳ ಸಾಲವನ್ನೂ ಮನ್ನಾ ಮಾಡಿವೆ. ನೀವೇ ಹೇಳಿರುವಂತೆ ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ. ಎಲ್ಲಾ ಸಾಲ ಮನ್ನಾ ಮಾಡಲು ಬೇಡ ಅಂದವರು ಯಾರು?
 9. ಕಾಂಗ್ರೆಸ್: ನಮ್ಮ ಮೆಟ್ರೊ ಸ್ಟೇಷನ್ ಗಳ ನಾಮ ಫಲಕಗಳಲ್ಲಿ ಹಿಂದಿ ಬಳಸುವ ಮೂಲಕ ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ಬಲವಂತವಾಗಿ ಹಿಂದಿ ಹೇರುತ್ತಿದೆ. ರಾಜ್ಯ ಸರ್ಕಾರವು ಕನ್ನಡ ಭಾಷೆಯ ಪರವಾಗಿದ್ದು, ಕನ್ನಡಿಗರ ಸ್ವಾಭಿಮಾನ ರಕ್ಷಣೆಗೆ ಬದ್ಧವಾಗಿದೆ.
  ಬಿಜೆಪಿ: ನಿಮ್ಮ ಢೋಂಗಿ ಕನ್ನಡ ಪ್ರೇಮ ನಮ್ಮ ಹಿಂದಿನ ಟ್ವೀಟ್ ಗಳಲ್ಲಿ ಬಯಲು ಮಾಡಿದ್ದೇವೆ. ಬಿಜೆಪಿ ಸರ್ಕಾರ ಪ್ರಾದೇಶಿಕ ಭಾಷೆಗಳಿಗೆ ಎಂದಿನಿಂದಲೂ ಪ್ರಾಶಸ್ತ್ಯ ನೀಡುತ್ತಲೇ ಬಂದಿದೆ. ದಶಕಗಳ ಕಾಲ ಆಳ್ವಿಕೆ ಮಾಡಿದ ನೀವು ಕನ್ನಡ ಭಾಷೆಯಲ್ಲಿ ರೈಲ್ವೆ ಟಿಕೆಟ್ ಮುದ್ರಿಸಲು ಆಗಿರಲಿಲ್ಲ. ಅದನ್ನು ಮಾಡಿದ್ದು ನಮ್ಮ ಮೋದಿ ಸರ್ಕಾರ.
 10. ಕಾಂಗ್ರೆಸ್: 2016 ರಲ್ಲಿ ರಾಜ್ಯದಲ್ಲಿ ಕಾವೇರಿ ನೀರಿನ ಸಮಸ್ಯೆ ತಲೆದೋರಿತ್ತು.. ಈ ವೇಳೆ ಕಾವೇರಿ ವಿವಾದವನ್ನು ಬಗೆಹರಿಸುವಂತೆ ಸಿಎಂ ಪ್ರಧಾನಿಗೆ ಪತ್ರ ಬರೆದಾಗಲೂ ಯಾವುದೇ ರೀತಿಯ ಉತ್ತರ ಬಂದಿರಲಿಲ್ಲ. ರಾಜ್ಯ ಸರ್ಕಾರ ಕರೆದ ಸರ್ವ ಪಕ್ಷ ಸಭೆಗೂ ಬಿಜೆಪಿ ಸಂಸದರು ಹಾಗೂ ಕೇಂದ್ರ ಸಚಿವರು ಗೈರಾಗುವ ಮೂಲಕ ಕನ್ನಡಿಗರಿಗೆ ಮೋಸ ಮಾಡಿದ್ದಾರೆ.
  ಬಿಜೆಪಿ: ಕರ್ನಾಟಕಕ್ಕೆ ಸಹಾಯ ಮಾಡಲೆಂದೇ ಸುಪ್ರೀಂಕೋರ್ಟ್​ಗೆ ಕೇಂದ್ರ ಸರ್ಕಾರ, ಅಫಿಡವಿಟ್​ ಸಲ್ಲಿಕೆ ಮಾಡಿತ್ತು. ಅಫಿಡವಿಟ್ ನಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆ ಸಾಧ್ಯವಿಲ್ಲ ಎಂದು ಹೇಳಿದೆ. ಇದರಿಂದ ಕರ್ನಾಟಕ ಸುಪ್ರೀಂಕೋರ್ಟ್ ನಲ್ಲಿ ಬಲವಾದ ವಾದ ಮಂಡನೆಗೆ ಸಹಾಯವಾಗಿದ್ದು, ಅಂತಿಮವಾಗಿ ಕರ್ನಾಟಕದ ಪರವಾಗಿ ತೀರ್ಪು ಬಂದಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಥ್ಯಾಂಕ್ಸ್​ ಹೇಳಬೇಕು.

Leave a Reply