ಪ್ರಖ್ಯಾತ ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ವಿಧಿವಶ

ಡಿಜಿಟಲ್ ಕನ್ನಡ ಟೀಮ್:

ಕಾಲದ ಬಗ್ಗೆ ವೈಜ್ಞಾನಿಕ ಸಿದ್ಧಾಂತ ಮಂಡಿಸಿದ ವಿಶ್ವದ ಪ್ರಖ್ಯಾತ ಭೌತ ವಿಜ್ಞಾನಿ ಸ್ಠೀಫನ್ ಹಾಕಿಂಗ್ ಬುಧವಾರ ವಿಧಿವಶರಾಗಿದ್ದಾರೆ.

ಕ್ರೇಂಬ್ರಿಡ್ಜ್ ನಲ್ಲಿರುವ ತಮ್ಮ ಸ್ವಗೃಹದಲ್ಲಿ 76 ವರ್ಷದ ಹಾಕಿಂಗ್ ಅವರು ತಮ್ಮ ಕೊನೆಯುಸಿರೆಳೆದಿದ್ದಾರೆ. ವಿಶ್ವ ವಿಜ್ಞಾನ, ಭೌತಶಾಸ್ತ್ರಜ್ಞರಾದ ಸ್ಟೀಫನ್ ಹಾಕಿಂಗ್ ಅವರ ಸಾಧನೆಯ ಶಿಖರದ ಅಧ್ಯಯನವೇ ಒಂದು ಸಾಧನೆ ಎನ್ನುವಂತೆ ಬೆಳೆದು ನಿಂತವರು. ಐದು ದಶಕಗಳ ಕಾಲ ಭೌತ ವಿಜ್ಞಾನ ಹಾಗೂ ಸಂಶೋಧನನಾ ಕ್ಷೇತ್ರದಲ್ಲಿ ಇವರ ಕಾಣಿಕೆ ಅಪಾರ. ಇವರ ಅನೇಕ ಪುಸ್ತಕಗಳು, ಸಿದ್ಧಾಂತಗಳು ವಿಜ್ಞಾನ ಕ್ಷೇತ್ರಕ್ಕೆ ಮಾಣಿಕ್ಯವಾಗಿವೆ. 1998ರಲ್ಲಿ ಮುದ್ರಣವಾದ ಇವರ ‘ಎ ಬ್ರೀಫ್ ಇಸ್ಟರಿ ಆಫ್ ಟೈಮ್’ ಪುಸ್ತಕ 40 ಭಾಷೆಗಳಲ್ಲಿ 1 ಕೋಟಿಗೂ ಹೆಚ್ಚು ಪ್ರತಿಗಳು ಮಾರಾಟವಾದವು.

ಕಪ್ಪುಕುಳಿಯ ಅಸ್ಥಿತ್ವ, ವಿಕಿರಣ ಸಿದ್ಧಾಂತವನ್ನು ಪರಿಚಯಿಸಿದ ಹಾಕಿಂಗ್ ವಿಶ್ವದ ಶ್ರೇಷ್ಠವಿಜ್ಞಾನಿಗಳ ಸಾಲಿನಲ್ಲಿ ನಿಲ್ಲುವಂತೆ ಮಾಡಿದೆ.

ಹುಟ್ಟುತ್ತಲೇ ನರ ವ್ಯವಸ್ಥೆಯ ದೋಷ (ಮೊಟೊರ್ ನರ್ವ್ ಡಿಸೀಸ್) ಹೊಂದಿದ್ದ ಹಾಕಿಂಗ್ ಅವರ ಈ ಸಾಧನೆಯ ಹಾದಿ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ. ಸಾಮಾನ್ಯವಾಗಿ ಈ ನರ ದೋಷ ಹೊಂದಿದವರು ಹೆಚ್ಚೆಂದರೆ 45ರಿಂದ 50 ವರ್ಷ  ಬದುಕುತ್ತಾರೆ. ಹಾಕಿಂಗ್ ಸಹ ಹೆಚ್ಚೆಂದರೆ 49 ವರ್ಷ ಬದುಕುತ್ತಾರೆ ಎಂಬ ಭವಿಷ್ಯ ನುಡಿದಿದ್ದರು. ಆದರೆ 76 ವರ್ಷ ಬದುಕಿದ್ದು, ಈ ಕಾಯಿಲೆ ಇಟ್ಟುಕೊಂಡು ಅತಿ ಹೆಚ್ಚು ವರ್ಶ ಬದುಕಿದ ವ್ಯಕ್ತಿಯಾಗಿದ್ದಾರೆ. ವಿಶ್ವದ ಶ್ರೇಷ್ಠ ವಿಜ್ಞಾನಿಯಾಗಿ ಬೆಳೆದ ಹಾಕಿಂಗ್ ಅವರ ಅಗಲಿಕೆ ವಿಜ್ಞಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟ.

ಸ್ಟೀಫನ್ ಹಾಕಿಂಗ್ ಅವರ ಕುರಿತಾಗಿ ಡಿಜಿಟಲ್ ಕನ್ನಡದಲ್ಲಿ ಈ ಹಿಂದೆ ಪ್ರಕಟವಾದ ವಿಶೇಷ ಲೇಖನ ಇಲ್ಲಿದೆ ಓದಿಕೊಳ್ಳಿ…

ಕಪ್ಪುಕುಳಿಗಳನ್ನೇ ಬೇಧಿಸಬಹುದು ಅಂತಂದ್ಮೇಲೆ ಹತಾಶೆಯ ಕಾರ್ಮೋಡ ಅದ್ಯಾವ ಲೆಕ್ಕ ಅಂತ ಕೇಳ್ತಿದಾರೆ ವಿಜ್ಞಾನಿ ಸ್ಟೀಫನ್ ಹಾಕಿಂಗ್!

Leave a Reply