ಜೀವ ಬೆದರಿಕೆ ಭೀತಿಯಲ್ಲಿ ಪ್ರಕಾಶ್ ರೈ!?

ಡಿಜಿಟಲ್ ಕನ್ನಡ ಟೀಮ್:

ಇಂದು ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಬಹುಭಾಷಾ ಚಿತ್ರನಟ ಪ್ರಕಾಶ್ ರೈ ಮಾಧ್ಯಮ ಸಂವಾದ ನಡೆಸಿದ್ದು, ಸಾಕಷ್ಟು ವಿಚಾರಗಳ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.

ನಾನು ನೀಡುವ ಹೇಳಿಕೆಯನ್ನು ಸದಾ ತಿರುಚಲಾಗುತ್ತದೆ ಎಂದಿರುವ ಪ್ರಕಾಶ್ ರೈ ಯಾವುದೇ ರಾಜಕೀಯ ಪಕ್ಷದಿಂದ‌ ನಾನು ಬೆಳೆದಿಲ್ಲ.. ರಾಜಕೀಯದಲ್ಲಿ ಆತಂಕದ ವಾತಾವರಣವಿದ್ದು, ನಾನು ಆಳುವ ಪಕ್ಷಗಳ ವಿರೋಧಿಯಾಗಿದ್ದೇನೆ.. ದೇಶದಲ್ಲಿ ಒಬ್ಬ ಪ್ರಜೆ, ಪ್ರಜೆಯಾಗಿ ಇರೋದಕ್ಕೆ ಸಾಧ್ಯವಾಗುತ್ತಿಲ್ಲ.. ಪ್ರಶ್ನಿಸುವ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ.. ಪ್ರಶ್ನಿಸುವ #JustAsking ಅಭಿಯಾನ‌ ನಿರಂತರವಾಗಿ ನಡೆಯತ್ತದೆ ಎಂದು ಹೇಳಿದ್ದಾರೆ.

ರಾತ್ರಿ ವಿಮಾನ ನಿಲ್ದಾಣದಲ್ಲಿ ನನ್ನ ಕಾರ್ ಡ್ರೈವರ್ ಬಳಿಗೆ ಬಂದ ನಾಲ್ಕು ಮಂದಿ ಬೆದರಿಕೆ ಒಡ್ಡಿದ್ದಾರೆ.. ನಾನು ಎಲ್ಲಿ ಉಳಿದುಕೊಳ್ಳುತ್ತೇನೆ ಎಲ್ಲಿ ಹೋಗ್ತೇನೆ ಅನ್ನೋ ಮಾಹಿತಿಗಳನ್ನು ಕೇಳಿ, ಕಾರ್ ಡ್ರೈವರ್ ಗೆ ಧಮ್ಕಿ ಹಾಕಿದ್ದಾರೆ.. ಕೂಡಲೇ ಆ ಕಡೆಗೆ ನಾಲ್ಕು ಜನರು ಪೊಲೀಸರು ಬಂದ ಕೂಡಲೇ ಹೊರಟು ಹೋಗಿದ್ದಾರೆ.. ನನಗೆ ಇಲ್ಲಿ ಮಂಗಳೂರಿನಲ್ಲಿ ಆತಂಕದ ವಾತವರಣ ಇದೆ ಎಂದು ಬೆದರಿಕೆ ಬಗ್ಗೆ ಹೇಳಿಕೊಂಡಿದ್ದಾರೆ..

ನಾನು ಯಾವುದೇ ಪಕ್ಷದ ಪರ, ವಿರುದ್ಧ ಚುನಾವಣಾ ಪ್ರಚಾರಕ್ಕೆ ಹೋಗಲ್ಲ.. ಆದರೂ, ಕೆಲವು ಪಕ್ಷಗಳ ವಿರುದ್ದ ಮಾತನಾಡುತ್ತೇನೆ.. ಉದಾಹರಣೆಗೆ ಬಿಜೆಪಿ ಕೋಮುವಾದದ ಬಗ್ಗೆ ನಾನು ಮಾತನಾಡ್ತೇನೆ ಯಾಕಂದ್ರೆ ಬಿಜೆಪಿ ಕೋಮುವಾದ ದೇಶದ ಸಾಮರಸ್ಯ ಹಾಳು ಮಾಡುತ್ತದೆ ಎಂದಿರುವ ರೈ, ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಬಗ್ಗೆ ನನಗೆ ಯಾವುದೇ ದ್ವೇಷವಿಲ್ಲ. ಪ್ರತಾಪ್ ಸಿಂಹ ಮುಖವಾಡ ಹಾಕಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ.. ಸಾಮಾಜಿಕ ಜಾಲತಾಣದಲ್ಲಿ ಸೊಂಟದ ಕೆಳಗಿನ ಭಾಷೆ ಬಳಕೆ ಮಾಡ್ತಾರೆ. ನಾನು ಒಬ್ಬ ಪ್ರಜೆಯಾಗಿ ಪ್ರತಾಪ್‌ ಸಿಂಹ ವಿರುದ್ದ ಕೇಸ್ ಹಾಕಿದ್ದೇನೆ ಹೊರತು ಬೇರೆ ದ್ವೇಷ ಭಾವನೆಯಿಂದಲ್ಲ ಎಂದಿದ್ದಾರೆ.

ಮಂಗಳೂರಿನ ಪಬ್ ದಾಳಿ ಆರೋಪಿಗಳನ್ನು ಕೋರ್ಟ್ ಖುಲಾಸೆ ಮಾಡಿದರ ವಿಚಾರವಾಗಿ ಮಾತನಾಡಿರುವ ರೈ ಸಾಕಷ್ಟು ಸಾಕ್ಷಧಾರ ಇಲ್ಲ ಅಂತ ನ್ಯಾಯಾಲಯ ಹೇಳಿದೆ.. ಆದರೆ ಕಾರ್ಯಕರ್ತರು ಹಲ್ಲೆ ಮಾಡಿರುವ ವಿಡಿಯೋ ಇದೆ.. ಹಾಗಾಗಿ ಕೋರ್ಟ್ ತೀರ್ಪು ಜನಸಾಮಾನ್ಯರನ್ನು ಗೊಂದಲಕ್ಕೆ ಈಡು ಮಾಡಿದೆ.. ಕೋರ್ಟ್ ಈ ರೀತಿ ಆದೇಶ ಕೊಟ್ಟಿದ್ದು ನ್ಯಾಯನಾ..? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಆಡಳಿತರೂಢ ಕಾಂಗ್ರೆಸ್ ಪಕ್ಷ ಇದರ ಬಗ್ಗೆ ಪ್ರಶ್ನೆ ಹೈಯರ್ ಕೋರ್ಟ್ ನಲ್ಲಿ ಮಾಡಬಹುದಿತ್ತು, ಆದರೆ, ಪ್ರಶ್ನೆ ಮಾಡಿದ್ರೆ ಕೆಲವರ ವಿರೋಧಿಯಾಗ್ತಿವಿ ಎಂಬ‌ ಭಯ ಸರ್ಕಾರಕ್ಕೆ ಇದೆ ಹಾಗಾಗಿ ಕಾಂಗ್ರೆಸ್ ರಾಜಕೀಯ ಪ್ರದರ್ಶನ ಮಾಡುತ್ತಿದೆ ಎಂದು ಟೀಕಿಸಿದ್ದಾರೆ..

ಮಂಗಳೂರಿನಲ್ಲಿ ಒಬ್ಬ ಮುಸ್ಲಿಂ ಕೊಲೆ ನಡೆದರೆ ಇನ್ನೊಬ್ಬ ಹಿಂದೂವಿನ ಕೊಲೆಯಾಗುತ್ತದೆ.. ಕೊಲೆ ನಡೆದ ಬಳಿಕ ಎರಡೂ ಕಡೆಯವರನ್ನು ಬಂಧಿಸಲಾಗುತ್ತದೆ.. ಬಂಧನಕ್ಕೆ ಒಳಗಾದ ಮನೆಯವರು ಬಳಿಕ ನಾಲ್ಕು ವರ್ಷ ಜೈಲು ಕಾಯುವ ಸ್ಥಿತಿ ಬರುತ್ತದೆ. ಆದರೆ ಕೊಲೆ ಹಿಂದಿರುವ ಕೈಗಳು ಯಾವುದೇ ಸಮಸ್ಯೆ ಇಲ್ಲದೆ ಹಾಯಾಗಿ ಇರ್ತಾರೆ.. ದಕ್ಷಿಣ ಕನ್ನಡದ ಜನ ಹೀಗೇಕೆ ಮಾಡುತ್ತಾರೆ ಅನ್ನೋ ಪ್ರಶ್ನೆ ಹುಟ್ಟುತ್ತದೆ.. ಕೆಲವೊಮ್ಮೆ ನಿಮ್ಮ ಊರಿನವರು ಕೋಮುವಾದಿಗಳು ಅಂತ ನನ್ನನ್ನು ಕೇಳುತ್ತಾರೆ.. ಇದರಿಂದಾಗಿ ನನಗೆ ತಲೆತಗ್ಗಿಸುವ ಪರಿಸ್ಥಿತಿ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾರನ್ನು ಟೀಕಿಸಿದಕ್ಕೆ ಪುತ್ತೂರಿನ ಕಾಲೇಜಿನಲ್ಲಿ ವಿದ್ಯಾರ್ಥಿಯನ್ನು ಸಸ್ಪೆಂಡ್ ಮಾಡ್ತಾರೆ. ಹಾಗಾದ್ರೆ ಬಂಡಲ್ ಷಾ ಅಂತ ಪ್ರಶ್ನೆ ಮಾಡೋಕೆ ದೇಶದಲ್ಲಿ ರೈಟ್ಸ್ ಇಲ್ಲವೇ..? ಪ್ರಶ್ನಿಸುವುದು ವಿದ್ಯಾರ್ಥಿಯ ಹಕ್ಕು ಯಾಕಲ್ಲ..? ಎಂದು ಮಾಧ್ಯಮದ ಮೂಲಕ ಪ್ರಕಾಶ್ ರೈ ಪ್ರಶ್ನಿಸಿದ್ದಾರೆ..

ಉತ್ತರ ಕನ್ನಡ ಸಂಸದ, ಹಾಲಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಯನ್ನು ಒಪ್ಪಿಕೊಳ್ಳುವುದು ಹೇಗೆ..? ಎಂದು ಪ್ರಶ್ನಿಸಿರುವ ಪ್ರಕಾಶ್ ರೈ, ಒಂದು ಜಾತಿಯವರನ್ನು ಅಳಿಸಬೇಕು ಎನ್ನುತ್ತಾರೆ ಅದರ ಜೊತೆಗೆ ಸಂವಿಧಾನವನ್ನೂ ಪ್ರಶ್ನಿಸುತ್ತಾರೆ.. ನಾವು ಅವರ ಕ್ಷೇತ್ರದಲ್ಲಿ ‌ಹೋಗಿ ಮಾತಾಡಿದರೆ ಗೋಮೂತ್ರ ಹಾಕುತ್ತಾರೆ.. ಇಂತಹ ಸಂಸದ, ಸಚಿರವರನ್ನು ಬಿಜೆಪಿ ಪಕ್ಷ ಪ್ರಶ್ನಿಸುತ್ತಿಲ್ಲ..ಭ್ರಷ್ಟಾಚಾರ ಕ್ಕಿಂತ ಕೋಮುವಾದ ದೊಡ್ಡ ಕ್ಯಾನ್ಸರ್.. ನಾನು ಆಳುವ ಸರ್ಕಾರಕ್ಕೆ ಪ್ರಶ್ನೆ ಕೇಳಿದರೆ ನನ್ನ ಮಗ ಸತ್ತದು, ಸೈಟ್ ಬಗ್ಗೆ ಪ್ರಶ್ನಿಸುತ್ತಾರೆ.. ನನ್ನ ತಾಯಿ ಕ್ರಿಶ್ಚಿಯನ್, ತಂದೆ ಮಂಗಳೂರಿನ ಬಂಟರು, ಇದರ ಬಗ್ಗೆ ನನಗೆ ಹೆಮ್ಮೆಯಿದೆ.. ಇದನ್ನು ಹೇಳಲು ನನಗೆ ಅಂಜಿಕೆಯಿಲ್ಲ..ಇದನ್ನು ಯಾಕೆ ಪ್ರಶ್ನಿಸುತ್ತಾರೆ ಎಂದು ಪ್ರಕಾಶ್ ರೈ ಕೇಳಿದರು..

ಒಂದು ಧರ್ಮ ಅಳಿಸಬೇಕೆಂದು ಇರುವವರು ಯಾವುದೇ ಧರ್ಮಕ್ಕೆ ಸೇರಿದವರಲ್ಲ..ಯಾವುದೇ ಧರ್ಮವೂ ಬೇರೊಂದು ಧರ್ಮವನ್ನು ಅಳಿಸಬೇಕು ಎನ್ನುವುದಿಲ್ಲ.. ಕಾವಿ ನನಗೆ ತುಂಬಾ ಇಷ್ಟವಾದ ಬಣ್ಣ.. ಕಾವಿ ನೋಡಿದಾಗ ನನಗೆ ವಿವೇಕಾನಂದರು ನೆನಪಾಗುತ್ತಾರೆ.. ಆದರೆ, ಪ್ರಸ್ತುತ ಕಾವಿಯನ್ನು ಕಾಲಿನಡಿ ಬಚ್ಚಿಡಲಾಗಿದೆ.. GST ಲೋಪದ ಪ್ರಶ್ನೆ ಕೇಳಿದರೆ ನೀನು ‌ಕ್ರಿಶ್ಚಿಯನ್ ಎನ್ನುತ್ತಾರೆ.. ನಿನ್ನೆ ಸುಕ್ಮಾದಲ್ಲಿ ನಕ್ಸಲರು ಯೋಧರನ್ನು ಕೊಂದದ್ದು ತಪ್ಪು ನಡೆ ಎಂದು ಖಂಡಿಸಿದರು.. ನಾನು ಹಿಂದು, ಮುಸ್ಲಿಂ ಹತ್ಯೆಗಳನ್ನು ವಿರೋಧಿಸುತ್ತೇನೆ.. ಕೋಮುವಾದ ಅಮಿತ್ ಷಾ ನಾಲಗೆ ತುದಿಯಲ್ಲಿದೆ.. ಹಲ್ಲೆಗೊಳಗಾದ ವಿದ್ವತ್ ನನ್ನೂ ನಮ್ಮ ಕಾರ್ಯಕರ್ತ ಎನ್ನುತ್ತಾರೆ ಎಂದು ಟೀಕಿಸಿದ್ರು..

ಇನ್ನು ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ನನ್ನು ಹೊಗಳಿದ್ದ ವಿಚಾರ ಪ್ರಸ್ತಾಪಿಸಿದ ಪ್ರಕಾಶ್ ರೈ, ಆತ ರಾಕ್ಷಸ ಅಂತ ಗೊತ್ತಿರಲಿಲ್ಲ.. ಈ ಪ್ರಕರಣದಿಂದ ನಾನು ಸಾಕಷ್ಟು ಪಾಠ ಕಲಿತಿದ್ದೀನಿ.. ಇನ್ನು ಯಾರನ್ನು ಹೊಗಳಿದರು, ತೆಗಳಿದರು ಆಲೋಚಿಸಿ ಮಾತಾಡಬೇಕಿದೆ.. ಸಿನಿಮಾ ಜೀವನ ಸ್ವಲ್ಪ ತ್ಯಾಗ ಮಾಡ್ತಿದ್ದೇನೆ.. ಸಿನಿಮಾ ಆಯ್ಕೆ ಸ್ವಲ್ಪ ಕಡಿಮೆ ಆಗಿದೆ, ಪತ್ರಕರ್ತೆ ಗೌರಿ ಹತ್ಯೆ ನನ್ನನ್ನು ಕಾಡುತ್ತಿದೆ.. ಹತ್ಯೆಯನ್ನು ಸಂಭ್ರಮ ಮಾಡಿದಕ್ಕೆ ಪ್ರಶ್ನೆ ಕೇಳಿದೆ.. ಗೌರಿ ಹಂತಕರ ಬಂಧಿಸಿದರೆ ನೋವು ಹೋಗಲ್ಲ.. ಗೌರಿ ಹತ್ಯೆ ಯಾವ ಸಿದ್ದಾಂತದಿಂದ ಆಯಿತೆಂದು ತಿಳಿದು ಅದನ್ನು ನಿಲ್ಲಿಸಲು ಪ್ರಯತ್ನ ಪಡಬೇಕು ಎಂದು ನಟ ಪ್ರಕಾಶ್ ರೈ ಸಂವಾದದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ..

Leave a Reply