ಮಹಾ ಮೈತ್ರಿಗೆ ವೇದಿಕೆಯೇ ಸೋನಿಯಾ ಔತಣಕೂಟ?

ಡಿಜಿಟಲ್ ಕನ್ನಡ ಟೀಮ್:

ಎಐಸಿಸಿ ಮಾಜಿ ಅಧ್ಯಕ್ಷೆ ಹಾಗೂ ಯುಪಿಎ ಮೈತ್ರಿಕೂಟದ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಗಳವಾರ 20 ವಿರೋಧ ಪಕ್ಷಗಳ ನಾಯಕರ ಜತೆ ಔತಣಕೂಟ ನಡೆಸಿದ್ದಾರೆ. ಸ್ನೆಹ ಹಾಗೂ ಸೌದಾರ್ದತೆಯ ಭಾಗವಾಗಿ ಈ ಔತಣಕೂಟ ಆಯೋಜಿಸಲಾಗಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದ್ದರೂ ಇದು 2019ರ ಲೋಕಸಭೆ ಚುನಾವಣೆಯಲ್ಲಿ ಮಹಾ ಮೈತ್ರಿಗೆ ತಾಲೀಮು ನಡೆಸಲು ಒಂದು ವೇದಿಕೆ ಎಂದೇ ರಾಜಕೀಯವಾಗಿ ವಿಶ್ಲೇಷಿಸಲಾಗುತ್ತಿದೆ.

ಈ ಔತಣಕೂಟದಲ್ಲಿ ಎನ್ಸಿಪಿ, ಆರ್ ಜೆಡಿ, ಸಮಾಜವಾದಿ ಪಕ್ಷ, ಬಿಎಸ್ ಪಿ, ತೃಣಮೂಲ ಕಾಂಗ್ರೆಸ್, ಡಿಎಂಕೆ ಹಾಗೂ ಎಡ ಪಕ್ಷಗಳ ನಾಯಕರು ಭಾಗವಹಿಸಿದ್ದರು. ಈ ಔತಣಕೂಟದಲ್ಲಿ ಭಾಗವಹಿಸಿದ್ದ ಎನ್ ಸಿಪಿ ನಾಯಕ ಶರದ್ ಪವಾರ್ ಮಹಾ ಮೈತ್ರಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ‘ಈ ಕುರಿತಾಗಿ ಪ್ರಯತ್ನಗಳು ನಡೆಯುತ್ತಿದ್ದು, ಈ ಔತಣಕೂಟವೂ ಅದರ ಭಾಗ’ ಎಂದಿದ್ದಾರೆ. ಇನ್ನು ಯುಪಿಎ ಭಾಗವಾಗಿರುವ ಆರ್ ಜೆಡಿ ನಾಯಕ ತೇಜಸ್ವಿ ಯಾದವ್, ಎನ್ ಡಿಎ ಮೈತ್ರಿಕೂಟದಲ್ಲಿ ಭಿನ್ನಾಭಿಪ್ರಾಯ ಮೂಡಿದೆ. ಅತ್ತ ಶಿವಸೇನೆ, ಟಿಡಿಪಿ ಹಾಗೂ ಅಕಾಲಿ ದಳ ಬೇಸತ್ತಿವೆ ಎಂದಿದ್ದಾರೆ. ಇನ್ನು ಮಹಾ ಮೈತ್ರಿಯಲ್ಲಿ ರಾಹುಲ್ ಗಾಂಧಿ ಅವರನ್ನು ಪ್ರಧಾನಿಯಾಗಿ ಒಪ್ಪಿಕೊಳ್ಳುವರೇ ಎಂಬ ಪ್ರಶ್ನೆಗೆ ಉತ್ತರಿಸಿರೋ ತೇಜಸ್ವಿ, ಪ್ರಧಾನಿ ಅಭ್ಯರ್ಥಿ ಬಗ್ಗೆ ಇನ್ನು ಚರ್ಚೆ ಮಾಡಿಲ್ಲ ಎಂದಿದ್ದಾರೆ.

ಈ ನಾಯಕರ ಪ್ರತಿ ಮಾತುಗಳಲ್ಲಿ ಈ ಔತಣಕೂಟ ಮಹಾಮೈತ್ರಿಯ ವೇದಿಕೆ ಎಂಬುದು ಸ್ಪಷ್ಟವಾಗಿದೆ.

Leave a Reply