ದೇಶದಲ್ಲಿ ನಿಜಕ್ಕೂ ಮೋದಿ ಹವಾ ಇದೆಯಾ? ಈ ಅಂಶ ನೋಡಿ ನೀವೆ ನಿರ್ಧರಿಸಿ

ಡಿಜಿಟಲ್ ಕನ್ನಡ ಟೀಮ್:

2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಿತ್ತು. ಅಲ್ಲಿಂದೀಚೆಗೆ ಚುನಾವಣೆ ಪ್ರಸ್ತಾಪವಾದಾಗೆಲ್ಲಾ ಮೋದಿ ಹವಾ ಎಂಬ ಮಾತುಗಳು ಕೇಳಿಬರುತ್ತಿದೆ. ಆದರೆ 2014ರ ಲೋಕಸಭೆ ಚುನಾವಣೆ ನಂತರ ನಡೆದಿರುವ ಉಪ ನಾವಣೆಗಳ ಫಲಿತಾಂಶ ನೋಡಿದ್ರೆ ಮೋದಿ ಹವಾ ಅನ್ನೋದು ಕೇವಲ ಮಾಧ್ಯಮಗಳ ಪ್ರಚಾರವೇ? ದೇಶದಲ್ಲಿ ನಿಜವಾಗಿಯೂ ಮೋದಿ ಹವಾ ಇದೆಯಾ? ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ.

ಪ್ರಧಾನಿ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಅಂದ್ರೆ 2014ರ ಬಳಿಕ ಒಟ್ಟು 12 ಲೋಕಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆದಿದ್ದು, ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಗೆಲುವು ಸಾಧಿಸಿರೋದು ಕೇವಲ 2 ಸ್ಥಾನಗಳಲ್ಲಿ ಮಾತ್ರ. ಉಳಿದ ಕಡೆಗಳಲ್ಲಿ ವಿರೋಧ ಪಕ್ಷಗಳು ಸಂಸತ್ ಗೆ ಆಯ್ಕೆಯಾಗುವ ಮೂಲಕ ಬಿಜೆಪಿ ಸ್ಥಾನಗಳನ್ನು ಕಡಿಮೆ ಮಾಡಿವೆ. ಮಧ್ಯಪ್ರದೇಶದ ಶಾರ್ಧುಲಾ ಜೊತೆ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಉತ್ತರ ಪ್ರದೇಶದ ವಾರಣಾಸಿ  ಹಾಗೂ ಗುಜರಾತ್​ನ ವಡೋಧರ ಎರಡು ಕ್ಷೇತ್ರಗಳ ಪೈಕಿ ಮೋದಿ ಆಯ್ಕೆ ವಾರಣಾಸಿ ಆಗಿತ್ತು. ಹಾಗಾಗಿ ಅನಿವಾರ್ಯವಾಗಿ ವಡೋಧರ ಕ್ಷೇತ್ರಕ್ಕೆ ರಾಜೀನಾಮೆ ಕೊಡಲಾಯ್ತು. ಆ ಬಳಿಕ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

ಇವೆರಡು ಕ್ಷೇತ್ರಗಳನ್ನು ಹೊರತುಪಡಿಸಿದ್ರೆ ಉಳಿದ 10 ಕ್ಷೇತ್ರಗಳಲ್ಲಿ ವಿರೋಧ ಪಕ್ಷಗಳೇ ಗೆಲುವು ಸಾಧಿಸಿವೆ. ಹೀಗಾಗಿ 2014ರಲ್ಲಿ ಬಿಜೆಪಿ ಗಳಿಸಿದ್ದು ಒಟ್ಟು 282 ಸ್ಥಾನಗಳು. ಈ ರೀತಿ ಪ್ರಚಂಡ ಗೆಲುವು ದಾಖಲಿಸಿದ್ದ ಮೋದಿ ನೇತೃತ್ವದ ಸರ್ಕಾರ 10 ಸ್ಥಾನಗಳನ್ನು ಉಪಚುನಾವಣೆಯಲ್ಲೇ ಕಳೆದುಕೊಂಡಿದೆ. ಇದೀಗ ಮೋದಿ ಸರ್ಕಾರದಲ್ಲಿ ಬಿಜೆಪಿಯ 272 ಸಂಸದರು ಉಳಿದುಕೊಂಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಬಿಜೆಪಿಯೇ ಅಧಿಕಾರದಲ್ಲಿ ಇದ್ದರೂ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರ ಹಿಡಿತದಲ್ಲಿದ್ದ ಎರಡು ಸ್ಥಾನಗಳನ್ನು ಗೆಲ್ಲುವಲ್ಲಿ ಸಫಲವಾಗಿಲ್ಲ. ಅದೇ ರೀತಿ ಬಿಹಾರದಲ್ಲೂ ಜೆಡಿಯು ಜೊತೆ ಮೈತ್ರಿ ಆಡಳಿತ ನಡೆಸುತ್ತಿದ್ದು ಅಲ್ಲಿಯೂ ಒಂದು ಸ್ಥಾನ ಕಳೆದುಕೊಂಡಿದೆ. ಇನ್ನುಳಿದಂತೆ , ರಾಜಸ್ತಾನದಲ್ಲಿ 2, ಪಶ್ಚಿಮಬಂಗಾಳದಲ್ಲಿ, ಪಂಜಾಬ್‌, ಮಧ್ಯ ಪ್ರದೇಶ, ಜಮ್ಮು ಕಾಶ್ಮೀರ, ಕೇರಳದಲ್ಲಿ ತಲಾ ಒಂದೊಂದು ಸ್ಥಾನವನ್ನು ಬಿಜೆಪಿ ಕಳೆದುಕೊಂಡಿದೆ.

ಹಾಗಿದ್ರೆ ಬಿಜೆಪಿ ಕೇಸರಿಮಯ ಮಾಡ್ತಿರೋದು ಹೇಗೆ?

ಮೋದಿ, ಅಮಿತ್ ಶಾ ಜೋಡಿ ಲೆಕ್ಕಾಚಾರ ಹಾಕೋದ್ರಲ್ಲಿ ಎತ್ತಿದ ಕೈ. ಹಾಗಾಗಿ ಯಾವುದೇ ರಾಜ್ಯದ ಚುನಾವಣೆಯ ಫಲಿತಾಂಶ ಬಂದ ಬಳಿಕ ತುರ್ತಾಗಿ ಲೆಕ್ಕಾಚಾರ ಹಾಕಿ ಮುಗಿಸುತ್ತಾರೆ. ದೆಹಲಿ ದೊರೆಗಳಿಂದ ಆರ್ಡರ್ ಪಾಸ್ ಆಗ್ತಿದ್ದ ಹಾಗೆ ಸಂಬಂಧ ಪಟ್ಟ ನಾಯಕರು ಕಾರ್ಯೋನ್ಮುಖ ಆಗೋದ್ರಿಂದ ಅಧಿಕಾರ ಹಿಡಿಯುವಲ್ಲಿ ಸಫಲ ಆಗ್ತಿದ್ದಾರೆ. ಗೋವಾ, ಜಮ್ಮು ಮತ್ತು ಕಾಶ್ಮೀರ, ಇತ್ತೀಚಿಗೆ ಅಧಿಕಾರ ಹಿಡಿದ ಮೇಘಾಲಯ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಜೆಪಿ ಮೈತ್ರಿ ಸರ್ಕಾರ ಇರೋದ್ರಿಂದ ಭೂಪಟದಲ್ಲಿ ಕೇಸರಿ ರಾರಾಜಿಸತೊಡಗಿದೆ. ಒಟ್ಟಾರೆ ಮೋದಿ ಹವಾ ಇಲ್ಲದೇ 2014 ರಲ್ಲಿ ಬಿಜೆಪಿ 282 ಕ್ಷೇತ್ರದಲ್ಲಿ ಗೆಲುವು ಸಾಧಿಸಿಲ್ಲ. ಆ ಬಳಿಕ ಮೋದಿ ಉಪಚುನಾವಣೆಗಳನ್ನು ಬಿಟ್ಟು ಕೇವಲ ರಾಜ್ಯಗಳ ಮೇಲೆ ಕಣ್ಣಿಟ್ಟಿದ್ದಾರೆ ಅಂತ ಹೇಳಬಹುದಾಗಿದೆ.

Leave a Reply