ಚೀನಾ ವಿರುದ್ಧ ವ್ಯಾಪಾರ ಸಮರ ತೀವ್ರಗೊಳಿಸಿದ ಟ್ರಂಪ್

ಡಿಜಿಟಲ್ ಕನ್ನಡ ಟೀಮ್:

ಚೀನಾ ಜತೆಗೆ ವ್ಯಾಪಾರ ಯುದ್ಧಕ್ಕೆ ನಾಂದಿ ಹಾಡಿರರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಚೀನಾದ ಆಮದು ಉತ್ಪಪನ್ನಗಳ ಮೇಲಿನ ಸುಂಕ ಹೆಚ್ಚಿಸುವ ಮೂಲಕ ಈ ಸಮರವನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದ್ದಾರೆ.

ಸದ್ಯ ಚೀನಾ ಉತ್ಪನ್ನಗಳ ಮೇಲೆ 60 ಬಿಲಿಯನ್ ಡಾಲರ್ ಗಳಷ್ಟು ಸುಂಕ ಹೆಚ್ಚಿಸಿರುವ ಟ್ರಂಪ್, ಚೀನಾಕ್ಕೆ ವ್ಯಾಪಾರ ಸಮರದಲ್ಲಿ ಸೆಡ್ಡು ಹೊಡೆದಿದ್ದಾರೆ. ವಿಶ್ವ ಮಟ್ಟದಲ್ಲಿ ಎರಡು ಪ್ರಬಲ ರಾಷ್ಟ್ರಗಳ ನಡುವಣ ವ್ಯಾಪಾರ ಸಮರ ಇಡೀ ಜಾಗತಿಕ ಆಥಿಕತ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಅಮೆರಿಕದ ವ್ಯಾಪಾರ ಸಮರಕ್ಕೆ ಪ್ರತಿಯಾಗಿ ಚೀನಾ ಸಹ ಪ್ರತ್ಯುತ್ತರ ನೀಡುವ ಎಚ್ಚರಿಕೆ ನೀಡಲಾಗಿತ್ತಾದರೂ, ಇದಕ್ಕೆ ಟ್ರಂಪ್ ತಲೆ ಕೆಡಿಸಿಕೊಳ್ಳದೆ ಅಮೆರಿಕ ಇನ್ನಷ್ಟು ಬಲಶಾಲಿಯಾಗಲಿದೆ ಎಂದಿದ್ದರು.

ಅಮೆರಿಕ ಫಸ್ಟ್ ಎಂಬ ಧ್ಯೇಯ ಹೊಂದಿರುವ ಟ್ರಂಪ್ ಸರ್ಕಾರ ತನ್ನ ಹಿತಾಸಕ್ತಿಗೆ ಧಕ್ಕೆಯಾಗುವ ಯಾವುದೇ ವಿಚಾರದಲ್ಲೂ ರಾಜಿಯಾಗಲು ಸಿದ್ಧವಿಲ್ಲ. ಹೀಗಾಗಿ ವೀಸಾ ವಿಚಾರದಿಂದ ಚೀನಾ ಜತೆಗಿನ ವ್ಯಾಪಾರ ಸಮರದವರೆಗೂ ಕಠಿಣ ಧೋರಣೆ ತಾಳುತ್ತಿದೆ. ಶ್ವೇತಭವನದಲ್ಲಿ ಆಮದು ಸುಂಕ ವಿನಾಯಿತಿ ಬಗ್ಗೆ ಕಠಿಣ ನಿಲುವು ತಾಳುವ ಬಗ್ಗೆ ಟ್ರಂಪ್ ನಿರ್ದೇಶನ ನೀಡಿದ್ದರೂ ಅಡಳಿತಾಧಿಕಾರಿಗಳು ಮಾತ್ರ ಉಕ್ಕು ಆಮದಿನಲ್ಲಿ ಯೂರೋಪಿಯನ್ ಒಕ್ಕೂಟ ರಾಷ್ಟ್ರಗಳು, ಆಸ್ಟ್ರೇಲಿಯಾ , ದಕ್ಷಿಣ ಕೊರಿಯಾ, ಕೆನಡಾ ಹಾಗೂ ಮೆಕ್ಸಿಕೋ ರಾಷ್ಟ್ರಗಳಿಗೆ ಆರಂಭಿಕ ವಿನಾಯಿತಿ ನೀಡಲು ಮುಂದಾಗಿದ್ದಾರೆ.

ಅಮೆರಿಕದ ಈ ನಿಲುವಿಗೆ ಪ್ರತಿಯಾಗಿ ಚೀನಾ ಸಹ ಅಮೆರಿಕ ಉತ್ಪನ್ನಗಳ ಆಮದು ಸುಂಕವನ್ನು ಹೆಚ್ಚಿಸುವ ಮೂಲಕ ಸೆಡ್ಡು ಹೊಡೆದಿದೆ. ಪೋರ್ಕ್ ಸೇರಿದಂತೆ ಸೇಬು, ಕಬ್ಭಿಣದ ಕೊಳವೆ ಹಾಗೂ ಇತರೆ ಉತ್ಪನ್ನಗಳ ಮೇಲಿನ ಸುಂಕವನ್ನು ಹೆಚ್ಚಿಸಿದೆ.

Leave a Reply