ಜೆಡಿಎಸ್ ಪ್ಲಾನ್ ಉಲ್ಟಾ ಆಗಿದ್ದು ಯಾಕೆ?

ಡಿಜಿಟಲ್ ಕನ್ನಡ ಟೀಮ್:

ರಾಜ್ಯಸಭೆ ಚುನಾವಣೆಯಲ್ಲಿ 30 ಮತಗಳನ್ನು ಹೊಂದಿದ್ದ, ಜೆಡಿಎಎಸ್ ಫಾರೂಕ್ ಅವರನ್ನು ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿತ್ತು. ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಹೊರಗಿನ 14 ಮತಗಳ ಅವಶ್ಯಕತೆ ಇತ್ತು.. ಕಾಂಗ್ರೆಸ್ ಮೂರನೇ ಅಭ್ಯರ್ಥಿ ಜೆ.ಸಿ ಚಂದ್ರಶೇಖರ್ ಹೊರಗಿನ 13 ಮತಗಳ ಅವಶ್ಯಕತೆ ಇತ್ತು. ಕಾಂಗ್ರೆಸ್ ಪಕ್ಷೇತರರು, ಜೆಡಿಎಸ್ ಬಂಡಾಯ ಶಾಸಕರ ಮೇಲೆ ಅವಲಂಬಿಸಿತ್ತು. ಆದ್ರೆ ಜೆಡಿಎಸ್ ಕಾಂಗ್ರೆಸ್ ನಲ್ಲಿ ಟಿಕೆಟ್ ಸಿಗೋದು ಡೌಟ್ ಎನ್ನುತ್ತಿರುವ 25 ಶಾಸಕರಲ್ಲಿ 20 ಜನರನ್ನು ಓಲೈಕೆ ಮಾಡಿತ್ತು.. ಈ ಬಗ್ಗೆ ಡಿಜಿಟಲ್ ಕನ್ನಡ ಮೊದಲೇ ವರದಿ ಕೂಡ ಪ್ರಕಟ ಮಾಡಿತ್ತು.. ಇದನ್ನು ಸ್ವತಃ ಕುಮಾರಸ್ವಾಮಿ ಅವರೇ ಒಪ್ಪಿಕೊಂಡಿದ್ದು, ಇಬ್ಬರು ಶಾಸಕರು ಅಡ್ಡ ಮತದಾನ ಮಾಡಿದ ಕೂಡಲೇ ಕಾಂಗ್ರೆಸ್ ಏಜೆಂಟ್ ಅವರನ್ನು ಮನವೊಲಿಸುವ ಕೆಲಸ ಮಾಡಿ, ಬೇರೊಂದು ಬ್ಯಾಲೆಟ್ ಪೇಪರ್ ನಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಗೆ ಮತ ಹಾಕಿಸಿದ್ದಾರೆ. ಹಿರಿಯರಾದ ಕಾಗೋಡು ತಿಮ್ಮಪ್ಪ ಅವರಿಗೆ ಹೇಗೆ ಮತ ಹಾಕಬೇಕು ಅನ್ನೋದು ಗೊತ್ತಿಲ್ವಾ? ಎಂದು ಪ್ರಶ್ನಿಸುವ ಜೊತೆಗೆ ಜೆಡಿಎಸ್ ಅಭ್ಯರ್ಥಿ ಬೆಂಬಲಿಸಲು ನಮ್ಮ ಪಕ್ಷದವರಲ್ಲದ ಇನ್ನೂ 18 ಮಂದಿ ಸಜ್ಜಾಗಿದ್ರು, ಮೊದಲೆರಡು ಮತಗಳನ್ನೇ ಕಾಂಗ್ರೆಸ್ ತನಗೆ ಬೇಕಾದ ಹಾಗೆ ಹಾಕಿಸಿಕೊಂಡಿದ್ರಿಂದ JDS ಮತದಾನ ಬಹಿಷ್ಕಾರ ಮಾಡಿದೆ ಎಂದಿದ್ದಾರೆ.

ಜೆಡಿಎಸ್ ಹುರಿಯಾಳು ಫಾರೂಕ್ ಮಾಧ್ಯಮಗಳ ಜೊತೆ ಮಾತನಾಡುತ್ತಾ, ರಾಜ್ಯಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿದೆ. ಕಾಂಗ್ರೆಸ್‌ನ 22 ಕ್ಕೂ ಹೆಚ್ಚು ಶಾಸಕರು ನನಗೆ ಮತ ನೀಡುವ ಭರವಸೆ ನೀಡಿದ್ರು, ಆದ್ರೆ ಬಲವಂತವಾಗಿ ಕಾಂಗ್ರೆಸ್‌ನ ಅಭ್ಯರ್ಥಿಗೆ ಮತ ಹಾಕಿಸಲಾಯ್ತು. ಹೀಗಾಗಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ನನಗೆ ಗೆಲುವು ಸಾಧ್ಯವಾಗಿಲ್ಲ ಎಂದಿದ್ದಾರೆ. ಚುನಾವಣೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಕೇಂದ್ರ, ರಾಜ್ಯ ಚುನಾವಣಾ ಆಯೋಗಕ್ಕೂ ದೂರು ನೀಡಿದ್ದೇವೆ. ಆಯೋಗದಿಂದ ನಮಗೆ ನ್ಯಾಯ ಸಿಗದೆ ಹೋದ್ರೆ ಕೋರ್ಟ್ ಮೊರೆ ಹೋಗುತ್ತೇವೆ ಎಂದಿದ್ದಾರೆ. ಜೊತೆಗೆ ನಮ್ಮದೇ ಪಕ್ಷದ 7 ಜನ ಶಾಸಕರು ಈ ಬಾರಿಯೂ ವಿಪ್ ಪಡೆದು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವ ಮೂಲಕ ಅಡ್ಡ ಮತದಾನ ಮಾಡಿದ್ದಾರೆ. ಈ ಬಗ್ಗೆಯೂ ದೂರು ನೀಡುತ್ತೇವೆ ಎಂದಿದ್ದಾರೆ.

ಬಾಬುರಾವ್ ಚಿಂಚನಸೂರ್ ಹಾಗೂ ಕಾಗೋಡು ತಿಮ್ಮಪ್ಪ ಕಾಂಗ್ರೆಡ್ ವಿರುದ್ಧ ಸಾಕಷ್ಟು ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಇದೀಗ ಮತದಾನ ಕೂಡ ಮಾಡುವಾಗ ಜೆಡಿಎಸ್ ಅಭ್ಯರ್ಥಿಗೆ ಮತ ಚಲಾಯಿಸಿದ್ರು. ಒಂದು ವೇಳೆ ಕಳೆದ ಬಾರಿ ಜೆಡಿಎಸ್ ನ ರೇವಣ್ಣ ಅಡ್ಡಮತದಾನ ನೋಡಿ ತಲೆ ಬಗ್ಗಿಸಿಕೊಂಡ ಹಾಗೆ ಈ ಬಾರಿ ಕಾಂಗ್ರೆಸ್ ಏಜೆಂಟ್ ಪ್ರಶ್ನಿಸದೆ ಸುಮ್ಮನಾಗಿದ್ದರೆ ಉಳಿದ ಶಾಸಕರೂ ಬಂದು ಜೆಡಿಎಸ್ ಗೆ ಮತ ಹಾಕೋದ್ರಲ್ಲಿ ಅನುಮಾನ ಇರಲಿಲ್ಲ. ಆದ್ರೆ ಯಾವಾಗ ಕಾಂಗ್ರೆಸ್ ಏಜೆಂಟ್ ಮತ ತಪ್ಪಾಗಿ ಹಾಕಿದ್ದೀರಿ, ಮತ್ತೊಂದು ಬ್ಯಾಲೆಟ್ ಪೇಪರ್ ಪಡೆದು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ ಎಂದು ಸರಿಪಡಿಸುವ ಮೂಲಕ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಲು ಬಿಡಲಿಲ್ಲ. ಆದ್ದರಿಂದ ಬೇರೆ ಶಾಸಕರು ಜೆಡಿಎಸ್ ಅಭ್ಯರ್ಥಿಗೆ ಮತ ನೀಡುವ ಮನಸ್ಸು ಮಾಡಲಿಲ್ಲ. ಕ್ರಾಸ್ ವೋಟಿಂಗ್ ನಡೆಯುವ ಬಗ್ಗೆ ಮೊದಲೇ ಮಾಹಿತಿ ಪಡೆದಿದ್ದ ಕಾಂಗ್ರೆಸ್, ಮತಪೆಟ್ಟಿಗೆಗೆ ಹಾಕುವ ಮುಂಚೆ ಮತ ಬದಲಾವಣೆ ಮಾಡಲು ಪ್ರಯತ್ನಿಸಿ ಅನ್ನೋ ಸೂಚನೆ ಇತ್ತು ಅನ್ನೋದು ಗೊತ್ತಾಗಿದೆ. ಹೀಗಾಗಿಯೇ ಚುನಾವಣಾ ಅಧಿಕಾರಿ ಒಮ್ಮೆ ಮತದಾನ ಮಾಡಿದ ಬಳಿಕವೂ ಏಜೆಂಟ್ ಹೇಳಿದ ಮೇಲೆ ಮತ್ತೊಂದು ಬ್ಯಾಲೆಟ್ ಪೇಪರ್ ನೀಡಿದರು ಎನ್ನಲಾಗಿದೆ. ಇದೀಗ ಚುನಾವಣಾ ಆಯೋಗ ಯಾವ ನಿರ್ಧಾರ ಕೈಗೊಳ್ಳಲಿದೆ ಕಾದು ನೋಡ್ಬೇಕು.

Leave a Reply