ದೇಶಭಕ್ತಿ ಬಗ್ಗೆ ಉದ್ದುದ್ದ ಭಾಷಣ ಬಿಗಿಯೋರು ಭಗತ್ ಸಿಂಗ್, ಸುಖ್ದೇವ್, ರಾಜಗುರುಗೆ ಹುತಾತ್ಮ ಗೌರವ ನೀಡಿಲ್ಲ ಏಕೆ?

ಡಿಜಿಟಲ್ ಕನ್ನಡ ಟೀಮ್:

ಮಾರ್ಚ್ 23, ಬ್ರಿಟೀಷರು ದೇಶದ ವೀರಪುತ್ರರಾದ ಭಗತ್ ಸಿಂಗ್, ಸುಖ್ದೇವ್ ಮತ್ತು ರಾಜಗುರು ಅವರನ್ನು ಗಲ್ಲಿಗೇರಿಸಿದ ದಿನ. ಪ್ರತಿ ವರ್ಷ ಈ ದಿನದಂದು ಈ ಮೂವರು ಹೋರಾಟಗಾರರನ್ನು ನೆನೆದು ದೇಶಪ್ರೇಮಿಗಳ ರಕ್ತ ಒಮ್ಮೆಯಾದರೂ ಕುದಿಯುತ್ತದೆ. ಇಂದಿಗೆ ಈ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನವಾಗಿ 87 ವರ್ಷವಾಗಿದೆ.

ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಈ ಮೂವರು ಸಾಧಕರಿಗೆ ಹುತಾತ್ಮ ಗೌರವ ನೀಡಿಲ್ಲ ಎಂಬುದು ನಿಜಕ್ಕೂ ನಾವೆಲ್ಲರೂ ತಲೆತಗ್ಗಿಸಬೇಕಾದ ವಿಷಯ. ಪ್ರತಿ ಬಾರಿ ಸ್ವಾತಂತ್ರ್ಯ ದಿನಾಚರಣೆ ವೇಳೆ ಶಾಲೆಯಲ್ಲಿ  ಮಕ್ಕಳಿಂದ ಹಿಡಿದು ಸಂಸತ್ತಿನಲ್ಲಿ ರಾಜಕೀಯ ಮುಖಂಡರವರೆಗೂ ಎಲ್ಲರೂ ಈ ತ್ರಿವಳಿ ಹೋರಾಟಗಾರರನ್ನು ನೆನೆಯುತ್ತಾರೆ. ಆದರೂ ಇವರಿಗೆ ಹುತಾತ್ಮ ಗೌರವ ಸಲ್ಲದಿರುವುದು ಈ ದೇಶವನ್ನು ಆಳಿದ ಪ್ರತಿ ಸರ್ಕಾರಕ್ಕೂ ನಾಚಿಕೆಗೇಡಿನ ವಿಚಾರ.

ರಾಜಕೀಯ ನಾಯಕರು ಈ ದೇಶಪ್ರೇಮಿಗಳ ತ್ಯಾಗವವನ್ನು ತಮ್ಮ ಭಾಷಣಗಳಿಗಷ್ಟೇ ಮೀಸಲಿಡದೇ ನಿಜಕ್ಕೂ ಅವರ ಬಗ್ಗೆ ಗೌರವ ಹೊಂದಿದ್ದರೆ, ಇಂದು ಸುಖ್ದೇವ್ ಅವರ ಕುಟುಂಬಸ್ಥರು ಹಹುತಾತ್ಮ ಗೌರವ ನೀಡಿ ಎಂದು ದೆಹಲಿಯಲ್ಲಿ ಉಪವಾಸ ಹೋರಾಟ ಮಾಡುವ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಈ ಬಗ್ಗೆ ಸುಖ್ದೇವ್ ಅವರ ಕುಚುಂಬ ಸದಸ್ಯರು ಹೇಳೋದಿಷ್ಟು…

‘ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳೇ ಕಳೆದಿವೆ. ಆದರೂ ಈ ಮೂವರಿಗೆ ಹುತಾತ್ಮ ಗೌರವ ನೀಡಿಲ್ಲ. ನಾವು ಈ ಬಗ್ಗೆ ಕೇಂದ್ರ ಸರ್ಕಾರದ ಮುಂದೆ ಈ ಬೇಡಿಕೆ ಇಟ್ಟಿದ್ದು, ಸರ್ಕಾರ ಇದನ್ನು ಒಪ್ಪಿಕೊಳ್ಳದಿದ್ದರೆ, ಉಪವಾಸ ಸತ್ಯಗ್ರಹಕ್ಕೆ ಮುಂದಾಗುತ್ತೇವೆ.’

Leave a Reply