ಜಮ್ಮು ಕಾಶ್ಮೀರದಲ್ಲಿ ಇಬ್ಬರು ಉಗ್ರರ ಹತ್ಯೆ

ಡಿಜಿಟಲ್ ಕನ್ನಡ ಟೀಮ್:

ಕಣಿವೆ ರಾಜ್ಯ ಜಮ್ಮ ಕಾಶ್ಮೀರದಲ್ಲಿ ಭದ್ರತಾ ಪಡೆ ಹಾಗೂ ಉಗ್ರಗಾಮಿಗಳ ನಡುವಣ ಸಮರ ಮುಂದುವರಿದಿದ್ದು, ಭಾರತೀಯ ಸೇನೆ ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅನಂನತನಾಗ್ ಜಿಲ್ಲೆಯ ಶಿಸ್ತಾರಗಾಮ ದೂರು ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಆರಂಭವಾದ ಎನ್ ಕೌಂಟರ್ ನಲ್ಲಿ ಕನಿಷ್ಠ ಇಬ್ಬರು ಉಗ್ರರನ್ನು ಸದೆಬಡಿಯಲಾಗಿದೆ ಎಂದು ಸೇನೆಯ ಮೂಲಗಳು ಮಾಹಿತಿ ನೀಡಿವೆ. ಈ ಪ್ರದೇಶದ ಮೇಲೆ ಉಗ್ರರ ಗುಂಪಿನಿಂದ ದಾಳಿ ನಡೆದಿದ್ದು, ತಕ್ಷಣವೇ ಭಾರತೀಯ ಸೇನೆ ಉಗ್ರರಿಗೆ ಬಿಸಿ ಮುಟ್ಟಿಸಿದೆ. ಈ ಎನ್ ಕೌಂಟರ್ ನಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ, ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಭದ್ರತೆ ವಿಚಾರವಾಗಿ ಕಣಿವೆ ರಾಜ್ಯದಲ್ಲಿನ ಪ್ರಮುಖ ಬೆಳವಣಿಗೆಗಳು ಹೀಗಿವೆ…

  • ದಾಳಿ ಮಾಡಿದ ಉಗ್ರರ ಬಳಿ ಎಕೆ47 ಬಂದೂಕು, ಪಿಸ್ತೂಲ್, ಗ್ರೆನೇಡ್ ಮತ್ತು ಬಾಂಬ್ ಗಳಿದ್ದವು.
  • ಶುಕ್ರವಾರ ಇಲ್ಲಿನ ಸಿಆರ್ ಪಿಎಫ್ ಶಿಬಿರದ ಮೇಲೆ ಉಗ್ರರಿಂದ ಗ್ರೆನೇಡ್ ದಾಳಿ.
  • ಈ ಹಿಂದೆ ಕುಪ್ವಾರದಲ್ಲಿ ನಡೆದ ದಾಳಿ ವೇಳೆ ಹುತಾತ್ಮರಾದ ಹವಲ್ದಾರ್ ಜೊರಾವರ್ ಸಿಂಗ್ ಅವರನ್ನು ಹಿಮಾಚಲ ಪ್ರದೇಶದಲ್ಲಿ ಸಕಲಸೇನಾ ಗೌರವದೊಂದಿಗೆ ಅಂತ್ಯಕ್ರಿಯೆ ಮಾಡಲಾಗಿದೆ.
  • ಉತ್ತರ ಕಾಶ್ಮೀರದಲ್ಲಿ ಲೆಫ್ಟಿನೆಂಟ್ ಜೆನರಲ್ ಭಟ್ ನೇತೃತ್ವದಲ್ಲಿ ಭದ್ರತಾ ಪರಿಶೀಲನೆ ಸಭೆ ನಡೆಯುತ್ತಿದೆ.
  • ಕುಪ್ವಾರ ಎನ್ ಕೌಂಟರ್ ನಂತರ ಉಗ್ರರ ಬಳಿ ಇದ್ದ ಅಪಾರ ಪ್ರಮಾಣದ ಶಸ್ತಾಸ್ತ್ರ ವಶಪಡಿಸಿಕೊಳ್ಳಲಾಗಿದೆ.
  • ಕುಪ್ವಾರ ಎನ್ ಕೌಂಟರ್ ನಲ್ಲಿ ಐವರು ಯೋಧರು ಹುತಾತ್ಮರಾದರೆ ಐವರು ಉಗ್ರರನ್ನು ಹತ್ಯೆ ಮಾಡಲಾಯಿತು. ಈ ಎಲ್ಲಾ ಐವರು ಉಗ್ರರು ವಿದೇಶಿಗರು ಎಂದು ಮಾಹಿತಿ

Leave a Reply