ಲಿಂಗಾಯತರಿಗೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ಶಿಫಾರಸಿಗೆ ಸರ್ಕಾರದಿಂದ ಅಂಗೀಕಾರ

ಡಿಜಿಟಲ್ ಕನ್ನಡ ಟೀಮ್:
ಚುನಾವಣೆ ಸಮಯದಲ್ಲಿ ಲಿಂಗಾಯತ ಸಮುದಾಯವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಏನೆಲ್ಲ ಮಾಡಬಹುದೊ ಅದನ್ನು ಚಾಚೂತಪ್ಪದೇ ರಾಜ್ಯ ಸರ್ಕಾರ ಕ್ರಮಕೈಗೊಳ್ಳುತ್ತಿದೆ. ಲಿಂಗಾಯತರಿಗೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನ ನೀಡುವ ವಿಚಾರದಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಶಿಫಾರಸ್ಸನ್ನು ಅಂಗೀಕರಿಸಿರುವ ಸರ್ಕಾರ ಇದೇ ಶಿಫಾರಸನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ. ರಾಜ್ಯ ಸರ್ಕಾರದ ಅಧಿಸೂಚನೆ ಪ್ರಕಾರ, ಅಲ್ಪಸಂಖ್ಯಾತ ಸ್ಥಾನಮಾನದ ಮಾನ್ಯತೆ ನೀಡುವ ಬಗ್ಗೆ ಕೇಂದ್ರ ಸರಕಾರ ಹೊರಡಿಸುವ ಆದೇಶದ ದಿನಾಂಕದಿಂದ ಜಾರಿಗೆ ಬರಲಿದೆ ಎಂದು ಸ್ಪಷ್ಟಪಡಿಸಿದೆ.
1994ರ ಅಧಿನಿಯಮ 31ರ ಪ್ರಕರಣ 10ರ ಅನ್ವಯ ರಾಜ್ಯ ಅಲ್ಪಸಂಖ್ಯಾಾತರ ಆಯೋಗ ಮಾಡಿರುವ ಶಿಫಾರಸು ಪರಿಗಣಿಸಿ ರಾಷ್ಟ್ರೀಯ ಅಲ್ಪಸಂಖ್ಯಾಾತ ಆಯೋಗದ 1992ರ ಅಧಿನಿಯಮ 19ರ ಪ್ರಕರಣ 2(ಸಿ) ಯಲ್ಲಿ ಕೇಂದ್ರ ಸರಕಾರ ಲಿಂಗಾಯತ ಹಾಗೂ ಬಸವ ತತ್ತ್ವಗಳನ್ನು ನಂಬುವ ವೀರಶೈವ ಲಿಂಗಾಯತ ಎಂದು ಮಾನ್ಯತೆ ಮಾಡಿ ಅಧಿನಿಯಮದಲ್ಲಿ ಗೊತ್ತುಪಡಿಸುವ ದಿನಾಂಕದಿಂದ ಜಾರಿಗೆ ಬರಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ. ಪ್ರಸ್ತುತ ಧಾರ್ಮಿಕ ಅಲ್ಪಸಂಖ್ಯಾಾತರ ಮೀಸಲು ಸೌಲಭ್ಯ ಸೇರಿ ಹಕ್ಕು ಹಾಗೂ ಆಸಕ್ತಿಿಗಳಿಗೆ ಧಕ್ಕೆೆ ಬಾರದಂತೆ ಲಿಂಗಾಯತ ಹಾಗೂ ಬಸವ ತತ್ತ್ವಗಳನ್ನು ನಂಬುವ ವೀರಶೈವ ಲಿಂಗಾಯತ ಸಮುದಾಯವನ್ನು ಧಾರ್ಮಿಕ ಅಲ್ಪಸಂಖ್ಯಾಾತರು ಎಂದು ಮಾನ್ಯತೆ ಮಾಡಲಾಗಿದೆ ಎಂದು ಈ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಈ ಮಧ್ಯೆ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ ಸರಕಾರದ ನಿರ್ಧಾರಕ್ಕೆ ನಮ್ಮ ವಿರೋಧವಿದೆ ಎಂದು ಆರೋಪಿಸಿರುವ ವೀರಶೈವ ಲಿಂಗಾಯತ ಮಹಾಸಭಾ ಸರಕಾರದ ನಿರ್ಧಾರದ ವಿರುದ್ಧ ಸಿಡಿದಿದೆ. ಶುಕ್ರವಾರ ಬೆಂಗಳೂರಿನಲ್ಲಿ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಹೇಳಿದಿಷ್ಟು… ‘ವೀರಶೈವ-ಲಿಂಗಾಯತ ಧರ್ಮ ಎಂದು ಹೆಸರಿಸಬೇಕಿತ್ತು. ಆದರೆ ಬಸವತತ್ತ್ವ ಅನುಸರಿಸುವವರು ಎಂದು ಸೇರಿಸಿರುವುದು ಸರಿಯಲ್ಲ’ ಎಂದರು.
ಆದರೆ ಈ ವಿಚಾರದಲ್ಲಿ ಸೇಫ್ ಗೇಮ್ ಆಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ‘ವೀರಶೈವ ಮಹಾಸಭಾದ ಸಭೆ ಬಗ್ಗೆ ನಾನು ಮಾತನಾಡುವುದಿಲ್ಲ. ಪ್ರತ್ಯೇಕ ಧರ್ಮದ ಶಿಫಾರಸನ್ನು ರಾಜ್ಯ ಸರಕಾರದಿಂದ ಕೇಂದ್ರ ಸರಕಾರಕ್ಕೆ ಕಳುಹಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ’ ಎಂದು ಹೇಳಿ ನುಣುಚಿಕೊಂಡಿದ್ದಾರೆ.

Leave a Reply