ಚೆಂಡು ವಿರೂಪ ಪ್ರಕರಣದಲ್ಲಿ ಆಸ್ಟ್ರೇಲಿಯಾ, ಹೊಣೆ ಹೊತ್ತುಕೊಂಡ ನಾಯಕ ಸ್ಮಿತ್

ಡಿಜಿಟಲ್ ಕನ್ನಡ ಟೀಮ್:

ಬೇರೆ ಕ್ರಿಕೆಟ್ ತಂಡಗಳ ತಪ್ಪನ್ನು ದೊಡ್ಡದಾಗಿ ಬಿಂಬಿಸುತ್ತಿದ್ದ ಆಸ್ಟ್ರೇಲಿಯಾ ತಂಡ ಈಗ ತಾನೇ ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿದೆ. ತಂಡದ ಆರಂಭಿಕ ಆಟಗಾರ ಬ್ಯಾಂಕ್ರಾಫ್ಟ್ ಹಳದಿ ಬಣ್ಣದ ವಸ್ತುವಿನಿಂದ ಚೆಂಡಿನ ರೂಪ  ಬದಲಿಸಿ ರಿವರ್ಸ್ ಸ್ವಿಂಗ್ ಲಾಾಭ ಪಡೆಯಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

  • ದಕ್ಷಿಣ ಆಫ್ರಿಕಾ ವಿರುದ್ಧದ ತೃತೀಯ ಪಂದ್ಯದಲ್ಲಿ ಆತಿಥೇಯರು ದ್ವಿತೀಯ ಇನಿಂಗ್ಸ್ ನಲ್ಲಿ 1 ವಿಕೆಟ್ 65 ರನ್ ಪೇರಿಸಿ 121 ರನ್ ಗಳ ಮುನ್ನಡೆಯೊಂದಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಭೋಜನ ವಿರಾಮದಲ್ಲಿ ಸಭೆ ನಡೆಸಿದ ಆಸ್ಟ್ರೇಲಿಯಾ ತಂಡ ಚೆಂಡಿನ ರೂಪ  ಬದಲಿಸಿ ರಿವರ್ಸ್ ಸ್ವಿಂಗ್ ಲಾಾಭ ಪಡೆಯಲು ನಿರ್ಧರಿಸಿತು. ಚೆಂಡು ವಿರೂಪಗೊಳಿಸುವ ಜವಾಬ್ದಾರಿ ಬ್ಯಾಂಕ್ರಾಫ್ಟ್ ಹೊತ್ತುಕೊಂಡರು.
  • ಪಂದ್ಯ ನಡೆಯುವ ಸಂದರ್ಭದಲ್ಲಿ ಬ್ಯಾಂಕ್ರಫ್ಟ್ ಹಳದಿ ಬಣ್ಣದ ವಸ್ತುವಿನಿಂದ ಚೆಂಡನ್ನು ಉಜ್ಜಲಾರಂಭಿಸಿದರು. ದಕ್ಷಿಣ ಆಫ್ರಿಕಾದ ಪಂದ್ಯ ಪ್ರಸಾರಕರು ಬ್ಯಾಕ್ರಫ್ಟ್ ಅವರg ಚೆಂಡನ್ನು ತೀಡುತ್ತಿರುವುದನ್ನು ಸೆರೆ ಹಿಡಿದು, ನೇರವಾಗಿ ವಾಹಿನಿಗಳು ಹಾಗೂ ಮೈದಾನದ ದೊಡ್ಡ ಪರದೆ ಮೇಲೆ ಪ್ರಸಾರ ಮಾಡಿದರು.
  • ಹೀಗೆ ಬ್ಯಾಂಕ್ರಾಫ್ಟ್ ಕೃತ್ಯ ಪ್ರಸಾರವಾಗುತ್ತಿದ್ದಂತೆ ಆಸ್ಟ್ರೇಲಿಯಾ ತಂಡದ ಕೋಚ್ ಡಾರೆನ್ ಲೀಮನ್ ಹೆಚ್ಚುವರಿ ಆಟಗಾರ ಪೀಟರ್ ಹ್ಯಾಂಡ್ ಸ್ಕೊಂಬ್ ಅವರನ್ನು ಕಳುಹಿಸಿ ಬ್ಯಾಂಕ್ರಾಫ್ಟ್ ಗೆ ಎಚ್ಚರಿಕೆ ರವಾನಿಸಿದರು.
  • ನಂತರ ಬ್ಯಾಂಕ್ರಾಫ್ಟ್ ಆ ಹಳದಿ ಬಣ್ಣದ ವಸ್ತುವನ್ನು ಜೇಬಿನಿಂದ ತೆಗೆದು ತಮ್ಮ ಪ್ಯಾಂಟ್ ಒಳಗೆ ಹಾಕಿಕೊಂಂಡರು. ಇದನ್ನು ಕೂಡ ಪ್ರಸಾರಕರು ನೇರ ಪ್ರಸಾರದಲ್ಲಿ ಬಿತ್ತರಿಸಿದರು. ಹೀಗೆ ಆಸ್ಟ್ರೇಲಿಯಾ ತಂಡದಯತ್ನ ವಿವಾದಕ್ಕೆ ಕಾರಣವಾಗಿ ಚರ್ಚೆ ಶುರುವಾಯಿತು.
  • ದಿನದಾಟ ಮುಕ್ತಾಯವಾದ ನಂತರ ಸುದ್ದಿಗೋಷ್ಠಿಯಲ್ಲಿ ಆಗಮಿಸಿದ ನಾಯಕ ಸ್ಟೀವನ್ ಸ್ಮಿತ್, ‘ಚಚೆಂಡು ವಿರೂಪಗೊಳಿಸುವ ಯೋಜನೆ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ಇಂತಹ ಅತ್ಯುತ್ತಮ ಸರಣಿಯ ಮಧ್ಯೆ ಇಂತಹ ಪ್ರಕರಣ ಬಂದಿರುವುದು ದುರಾದೃಷ್ಟಕರ. ನನ್ನ ನಾಯಕತ್ವದಲ್ಲಿ ಇನ್ನು ಮುಂದೆ ಇಂತಹ ಘಟನೆ ಮರುಕಳಿಸದದಂತೆ ನೋಡಿಕೊಳ್ಳುತ್ತೇನೆ’ ಎಂದರು.

Leave a Reply