ಮೋದಿ ಕೊಟ್ಟ ಆಶ್ವಾಸನೆ ಈಡೇರಿಸಲ್ಲ, ಪ್ರಧಾನಿ ವಿರುದ್ಧ ರಾಹುಲ್ ವಾಗ್ದಾಳಿ

ಡಿಜಿಟಲ್ ಕನ್ನಡ ಟೀಮ್:

‘ಬಿಜೆಪಿ  ಸಮಾಜವನ್ನು ಒಡೆಯುತ್ತದೆ, ಆದ್ರೆ ಕಾಂಗ್ರೆಸ್ ಕಾಂಗ್ರೆಸ್ ಬಸವಣ್ಣನ ವಿಚಾರಧಾರೆಯಂತೆ ಒಂದುಗೂಡಿಸುವ ಕೆಲಸ ಮಾಡುತ್ತಿದೆ. ಪ್ರಧಾನಿ ಮೋದಿ ಕೊಟ್ಟ ಭರವಸೆಯಲ್ಲಿ ಒಂದನ್ನೂ ಈಡೇರಿಸಲ್ಲ, ಆದ್ರೆ ನಾವು ಕೊಟ್ಟ ಎಲ್ಲಾ ಆಶ್ವಾಸನೆಗಳನ್ನು ಈಡೇರಿಸಿದ್ದೇವೆ. ಮೋದಿ ಹೋದ ಕಡೆಯಲ್ಲೆಲ್ಲಾ ಸುಳ್ಳು ಹೇಳಿಕೊಂಡು ತಿರುಗುತ್ತಾರೆ…’ ಇದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್ ಬೃಹತ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಧಾನಿ ಮೋದಿ ಅವರ ವಿರುದ್ಧ ನಡೆಸಿದ ವಾಗ್ದಾಳಿ.

ಕೇಂದ್ರ ಸರ್ಕಾರ, ಮೋದಿ, ಅಮಿತ್ ಶಾ, ಆರೆಸ್ಸೆಸ್ ಹೀಗೆ ತಮ್ಮ ರಾಜಕೀಯ ವಿರೋಧಿಗಳ ವಿರುದ್ಧ ರಾಹುಲ್ ಗಾಂಧಿ ಟೀಕಿಸಿದರು. ಸಮಾವೇಶದಲ್ಲಿ ಅವರ ಭಾಷಣದ ಪ್ರಮುಖ ಅಂಶಗಳು ಹೀಗಿವೆ…

  • ಭ್ರಷ್ಟಾಚಾ ರದ ವಿರುದ್ಧ ಹೋರಾಡುತ್ತೇನೆಂದು ಹೇಳುವ ಪ್ರಧಾನಿ, ಕರ್ನಾಟಕದಲ್ಲಿ ಜೈಲಿಗೋಗಿ ಬಂದವರ ಜತೆ ಕೂರುತ್ತಾರೆ.
  • ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪುತ್ರ ಜಯ್‌ ಶಾ ಅವರು ನೋಟು ಅಮಾನ್ಯೀಕರಣ ವೇಳೆ ₹ 50 ಸಾವಿರದಲ್ಲಿ ₹ 80 ಕೋಟಿ ಆದಾಯ ಮಾಡಿಕೊಂಡರು.
  • ಯುದ್ಧ ವಿಮಾನ ಖರೀದಿ ಟೆಂಡರನ್ನು ಫ್ರಾನ್ಸ್ ದೇಶಕ್ಕೆ ನೀಡಲಾಗಿದೆ. 24 ಯುದ್ಧ ವಿಮಾನ ಖರೀದಿಯನ್ನು ₹ 1600 ಕೋಟಿ ಬದಲಿಗೆ 40 ಸಾವಿರ ಕೋಟಿಗೆ ಕೊಡಲಾಗಿದೆ.
  • ಕರ್ನಾಟಕದಲ್ಲಿರುವ ಜಾತ್ಯತೀತ ಜನತಾ ದಳವನ್ನು ಜೆಡಿಎಸ್ ಎಂದು ಪರಿಗಣಿಸಬೇಕೆ ಅಥವಾ ಸಂಘ ಪರಿವಾರದ ಭಾಗವಾಗಿ ನೋಡಬೇಕೆ ಎಂಬ ಗೊಂಜದಲ ಜನರಲ್ಲಿ ಮೂಡಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಕುಟುಕಿದರು.

ರಾಹುಲ್ ಕೈ ಕುಲುಕಿದ ಜೆಡಿಎಸ್ ನಾಯಕರು

ಜೆಡಿಎಸ್‌ನ ಏಳು ಬಂಡಾಯ ಶಾಸಕರು ಹಾಗೂ ಹಹಿರಿಯ ಮುಖಂಡರಾದ ಎಂ.ಸಿ ನಾಣಯ್ಯ ಹಾಗೂ ಎಂ.ಶ್ರೀನಿವಾಸ್ ಭಾನುವಾರ ಬೃಹತ್ ಸಮಾವೇಶದಲ್ಲಿ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿಕೊಂಡರು. ಬಂಡಾಯ ಪಡೆಯಲ್ಲಿದ್ದ ನಾಗಮಂಗಲದ ಚೆಲುವರಾಯಸ್ವಾಮಿ, ಚಾಮರಾಜಪೇಟೆಯ ಜಮೀರ್ ಅಹಮದ್, ಶ್ರೀರಂಗ ಪಟ್ಟಣದ ರಮೇಶ್‌ಬಾಬು ಬಂಡಿಸಿದ್ದೇಗೌಡ, ಮಾಗಡಿಯ ಎಚ್.ಸಿ.ಬಾಲಕೃಷ್ಣ, ಗಂಗಾವತಿಯ ಇಕ್ಬಾಲ್ ಅನ್ಸಾರಿ, ಪುಲಿಕೇಶಿನಗರದ ಅಖಂಡ ಶ್ರೀನಿವಾಸ ಮೂರ್ತಿ,  ಹಗರಿಬೊಮ್ಮನಹಳ್ಳಿಯ ಭೀಮಾನಾಯ್ಕ ಅವರು ಪಕ್ಷ ಸೇರ್ಪಡೆಯಾದರು ಹಲವು ವರ್ಷಳಿಂದ ಜನತಾಪರಿವಾರದಲ್ಲಿದ್ದು ಸಜ್ಜನ ರಾಜಕಾರಣಿ ಎಂದು ಹೆಸರು ಮಾಡಿದ್ದ ಮಾಜಿ ಕಾನೂನು ಸಚಿವ ಎಂ.ಸಿ.ನಾಣಯ್ಯ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಎಂ. ಶ್ರೀನಿವಾಸ್ ಕೂಡ ಕಾಂಗ್ರೆಸ್ ಸೇರ್ಪಡೆಯಾದರು. ರಾಹುಲ್ ಗಾಂಧಿಗೆ ಬೆಳ್ಳಿ ಖಡ್ಗ ಕೊಟ್ಟ ಜಮೀರ್ ಅಹಮದ್, ಟಿಪ್ಪುಪೇಟ ಹಾಕಲು ಮುಂದಾದರು. ಆದರೆ ರಾಹುಲ್ ಟಿಪ್ಪು ಪೇಟವನ್ನು ನಿರಾಕರಿಸಿ, ಬೆಳ್ಳಿ ಖಡ್ಗ ಹಿಡಿದು ಮತ್ತೆ ಅವರಿಗೇ ಕೊಟ್ಟರು.

Leave a Reply