ಸಿ-ಫೋರ್ ಶಕುನದ ಪ್ರಕಾರ ಕೈಗೆ ಅಧಿಕಾರ

ಡಿಜಿಟಲ್ ಕನ್ನಡ ಟೀಮ್:

ಚುನಾವಣೆ ಸಮರ ಕಾವೇರುತ್ತಿರುವ ಹೊತ್ತಲ್ಲಿ ಸಮೀಕ್ಷೆಗಳ ಅಬ್ಬರಕ್ಕೆಕೂಡ ಜೋರಾಗಿರುತ್ತದೆ. ಈಗ ಸಿ-ಫೋರ್ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಸ್ಪಷ್ಟ ಬಹುಮತದೊಂದಿಗೆ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬ ಭವಿಷ್ಯ ಹಿಡಿದಿದೆ.

ಮಾ.1ರಿಂದ 25ರವರೆಗೆ ಸಮೀಕ್ಷೆ ನಡೆಸಿದ್ದು, ರಾಜ್ಯಾದ್ಯಂತ 22 ಸಾವಿರಕ್ಕಿಂತ ಹೆಚ್ಚು ಮತದಾರರನ್ನು ಮಾದರಿಯಾಗಿ ಬಲಸಿಕೊಂಡಿದೆ. ಈ ಸಮೀಕ್ಷೆಯಲ್ಲಿ ಕಾಂಗ್ರೆಸ್ 126, ಬಿಜೆಪಿ 70, ಜೆಡಿಎಸ್ 27 ಸ್ಥಾನಪಡೆಯಲಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಇನ್ನು ಮತಗಳ ಪ್ರಮಾಣದಲ್ಲೂ ಕಾಂಗ್ರೆಸ್ ಏರಿಕೆ ಕಂಡಿದ್ದು, ಕಾಂಗ್ರೆಸ್ ಶೇ.46, ಬಿಜೆಪಿ ಶೇ.31 ಹಾಗೂ ಜೇಡಿಎಸ್ ಶೇ.16ರಷ್ಟು ಮತ ಪಡೆಯಲಿದೆ ಎಂದು ಅಂದಾಜಿಸಿದೆ.

Leave a Reply