ವೀರಶೈವರಿಗೆ ಸಂಘ ಬೇಕಾ? ಲಿಂಗ ಬೇಕಾ? ಅವರೇ ನಿರ್ಧರಿಸಲಿ ಎಂದ ಚಂಪಾ

ಡಿಜಿಟಲ್ ಕನ್ನಡ ಟೀಮ್:

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ರೀತಿಯಲ್ಲಿ ಸಾಹಿತಿ ಚಂಪಾ ಅವರು ತಮ್ಮ ವ್ಯಂಗದ ಮಾತಿನಲ್ಲೇ ಆರೆಸ್ಸೆಸ್- ಬಿಜೆಪಿಯನ್ನು ಟೀಕಿಸುತ್ತಾ ವೀರಶೈವರನ್ನು ಲಿಂಗಾಯತ ಧರ್ಮವನ್ನು ಒಪ್ಪಿಕೊಳ್ಳಿ ಎಂದು ಸಾಹಿತಿ ಚಂದ್ರಶೇಖರ ಪಾಟೀಲರು ಸಂದೇಶ ರವಾನಿಸಿದ್ದಾರ.

ಸಾಕಷ್ಟು ಪರ ವಿರೋಧದ ಚರ್ಚೆಗೆ ಕಾರಣವಾಗಿರುವ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವನ್ನು ನೇರವಾಗಿ ಪ್ರಸ್ತಾಪಿಸದ ಚಂಪಾ ಅವರು ಹೇಳಿದಿಷ್ಟು…

‘ಆರೆಸ್ಸೆಸ್ ನವರದ್ದು ಸ್ವಯಂಸೇವಕ ಸಂಘಾಯ ನಮಃವಾದರೆ ನಮ್ಮದು ಬಸವಲಿಂಗಾಯ ನಮಃ. ಈ ಎರಡರಲ್ಲಿ ವೀರಶೈವರಿಗೆ ಯಾವುದು ಬೇಕೋ ಅದನ್ನೇ ಆಯ್ಕೆ ಮಾಡಿಕೊಳ್ಳಲಿ. ಸಾಕಷ್ಟು ಲಿಂಗಾಯತರು ಆರೆಸ್ಸೆಸ್ ನಲ್ಲಿ ಗುರುತಿಸಿಕೊಂಡಿದ್ದಾರೆ. ಅವರದ್ದು ಕೋಮುವಾದ ಸಿದ್ಧಾಂತ. ನಿಮಗೆ ಬಸವ ಲಿಂಗಾಯ ನಮಃ ಬೇಕೋ ಅಥವಾ ಕೋಮುವಾದದ ಸ್ವಯಂಸೇವಕ ಸಂಘಾಯ ನಮಃ ಬೇಕೋ ಎಂಬುದನ್ನು ನಿರ್ಧರಿಸಿ. ಇಲ್ಲವಾದ್ರೆ ನೀವು ಎಡಬಿಡಂಗಿಗಳಾಗುತ್ತೀರಿ. ಬಸವ ತತ್ವ ಒಪ್ಪುವುದಾದರೆ ಲಿಂಗಾಯತರ ಜತೆ ಬನ್ನಿ. ಇಲ್ಲವಾದ್ರೆ ಹಿಂದೂ ಧರ್ಮದಲ್ಲೇ ಇರಿ.’

Leave a Reply