ಯಡಿಯೂರಪ್ಪ ನಂಬರ್ 1 ಭ್ರಷ್ಟ ಎಂದ ಅಮಿತ್ ಶಾ!

ಡಿಜಿಟಲ್ ಕನ್ನಡ ಟೀಮ್:
ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಸಿಎಂ ಸಿದ್ದರಾಮಯ್ಯನವರ ಗಾಳಿ ಬೀಸಿದಂತೆ ಕಾಣುತ್ತಿದೆ. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಭರದಲ್ಲಿ ಅಮಿತ್ ಶಾ, ಬಾಯಿ ತಪ್ಪಿ ಯಡಿಯೂರಪ್ಪನವರ ಸರ್ಕಾರವೇ ನಂಬರ್ 1 ಭ್ರಷ್ಟ ಸರ್ಕಾರ ಎಂದು ಹೇಳಿದ್ದಾರೆ.
ಈ ಹಿಂದೆ ಸಾರ್ವಜನಿಕ ಸಭೆಗಳಲ್ಲಿ ಅನೇಕ ಬಾರಿ ಬಾಯಿ ತಪ್ಪಿ ಸಿದ್ದರಾಮಯ್ಯನವರು ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೈಯ್ದಿದ್ದರು. ಈಗ ಆ ಸರದಿ ಅಮಿತ್ ಶಾ ಅವರದ್ದಾಗಿದೆ.
ಅಮಿತ್ ಶಾ ಅವರ ಈ ಪ್ರಮಾದದ ವಿಡಿಯೋ ಸದ್ಯ ಫೇಸ್ಬುಕ್ ಹಾಗೂ ವಾಟ್ಸಪ್ ಗಳಲ್ಲಿ ವೈರಲ್ ಆಗುತ್ತಿದ್ದು, ಅಮಿತ್ ಶಾ ಕೊನೆಗೂ ಸತ್ಯ ಒಪ್ಪಿಕೊಂಡಿದ್ದಾರೆ ಎಂಬ ಸಂದೇಶಗಳು ರವಾನೆಯಾಗುತ್ತಿದೆ. ಈಗಾಗಲೇ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಗಿಂತ ಮಂಕಾಗಿರುವ ಬಿಜೆಪಿಗೆ ಅಮಿತ್ ಶಾ ಅವರ ಈ ಹೇಳಿಕೆ ಮತ್ತಷ್ಟು ಹಿನ್ನಡೆಯುಂಟು ಮಾಡಿದೆ.

Leave a Reply