ರಾಜ್ಯ ಚುನಾವಣೆಯಲ್ಲಿ ರಾಹುಲ್ ದ್ರಾವಿಡ್- ಯೋಗರಾಜ ಭಟ್ಟರ ಪ್ರಚಾರ!

ಡಿಜಿಟಲ್ ಕನ್ನಡ ಟೀಮ್:
ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಪರವಾಗಿ ಗೋಡೆ ಖ್ಯಾತಿ ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ವಿಕಟ ಕವಿ ಎಂದೇ ಪ್ರಸಿದ್ಧರಾಗಿರುವ ಯೋಗರಾಜ  ಭಟ್ಟರು ಪ್ರಚಾರ ನಡೆಸಲಿದ್ದಾರೆ.
ಭಾರತೀಯ ಚುನಾವಣಾ ಆಯೋಗ ರಾಜ್ಯ ಚುನಾವಣೆಗಾಗಿ ದ್ರಾವಿಡ್ ಅವರನ್ನು ರಾಯಭಾರಿಯನ್ನಾಗಿ ನೇಮಕ ಮಾಡಿಕೊಂಡಿದೆ. ಇನ್ನು ಯೋಗರಾಜ ಭಟ್ಟರನ್ನು ರಾಜ್ಯ ಚುನಾವಣ ಆಯೋಗ ನೇಮಕ ಮಾಡಿಕೊಂಡಿದ್ದು, ಅವರ ಮುಂದಿನ ಚಿತ್ರ ‘ಪಂಚತಂತ್ರ’ ತಂಡದೊಂದಿಗೆ ಚುನಾವಣೆ ಮೇಲೆ ವಿಶೇಷ ಹಾಡನ್ನು ಮಾಡಲು ತಿಳಿಸಿದೆ.
ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾರರನ್ನು ಸೆಳೆಯುವ ಉದ್ದೇಶದಿಂದ ಚುನಾವಣ ಆಯೋಗ ಕ್ರೀಡೆ ಹಾಗೂ ಸಿನಿಮಾ ಕ್ಷೇತ್ರದ ಈ ಇಬ್ಬರು ಖ್ಯಾತನಾಮರನ್ನು ಆಯ್ಕೆ ಮಾಡಿಕೊಂಡಿದೆ.

Leave a Reply