ದೆಹಲಿಗೆ ಹೊರಟ ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ!

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ವಿಧಾನಸಭೆಗೆ ಜೆಡಿಎಸ್ ಈಗಾಗಲೇ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಬಿಜೆಪಿ ಹಾಗು ಕಾಂಗ್ರೆಸ್ ಕೂಡ ಮೊದಲ ಪಟ್ಟಿ ಬಿಡುಗಡೆ ಮಾಡಲು ಕಸರತ್ತು ನಡೆಸಿವೆ. ಕಾಂಗ್ರೆಸ್ ಪಕ್ಷದ ಟಿಕೆಟ್ ವಿಚಾರವಾಗಿ ದೆಹಲಿಯ ಸ್ಕ್ರೀನಿಂಗ್ ಕಮಿಟಿಯಲ್ಲಿ ಅಂತಿಮ ನಿರ್ಧಾರ ಮಾಡಬೇಕಿದ್ದು, ರಾಜ್ಯ ಕಾಂಗ್ರೆಸ್‌ನಿಂದ ಸಿದ್ಧಪಡಿಸಿದ ಪಟ್ಟಿಯನ್ನು ಹೈಕಮಾಂಡ್ ಗೆ ರವಾನಿಸಲಾಗಿದೆ. ಈ ಪಟ್ಟಿಯಲ್ಲಿ ಹಲವು ಅಚ್ಚರಿಗಳಿದ್ದು, ಹೈಕಮಾಂಡ್ ಯಾವ ನಿರ್ಧಾರ ಮಾಡಲಿದೆ ಅನ್ನೋ ಕುತೂಹಲ ಹೆಚ್ಚಾಗಿದೆ.

ಜೆಡಿಎಸ್ ನಲ್ಲಿ ಬಂಡಾಯವೆದ್ದು ರಾಜ್ಯಸಭೆ ಕಾಂಗ್ರೆಸ್ ಅಭ್ಯರ್ಥಿ ಮತ ಚಲಾಯಿಸಿದ್ದ 7 ಜನ ಶಾಸಕರು, ಇತ್ತೀಚೆಗಷ್ಟೇ ರಾಹುಲ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ ಆಗಿದ್ದರು. ಆದ್ರೆ ಟಿಕೆಟ್ ವಿಚಾರವಾಗಿ ಯಾವುದೇ ಷರತ್ತು ವಿಧಿಸದೆ ಕಾಂಗ್ರೆಸ್‌ಗೆ ಸೇರ್ಪಡೆ ಆಗ್ತಿದ್ದಾರೆ ಅಂತ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ತಿಳಿಸಿದ್ರು. ಆದ್ರೆ ಇದೀಗ ಕಾಂಗ್ರೆಸ್ ಮೊದಲ ಪಟ್ಟಿ ದೆಹಲಿಯ ಸ್ಕ್ರೀನಿಂಗ್ ಕಮಿಟಿ ಮುಂದೆ ಹೋಗಿದ್ದು, ಮೊದಲ ಪಟ್ಟಿಯಲ್ಲೇ ಬಂಡಾಯಗಾರರಿಗೆ ಟಿಕೆಟ್ ಕನ್ಫರ್ಮ್ ಆಗಿದೆ. ಜೆಡಿಎಸ್ ಬಿಟ್ಟು ಬಂದವರ ಕ್ಷೇತ್ರದಲ್ಲಿ ಅವರೊಬ್ಬರೇ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ ಹೆಸರು ಇದ್ದು, ಹೈಕಮಾಂಡ್ ಬೇರೊಬ್ಬರ ಹೆಸರನ್ನು ಆಯ್ಕೆ ಮಾಡುವ ಪ್ರಮಯವೇ ಇಲ್ಲ. ಹೀಗಾಗಿ ಕಾಂಗ್ರೆಸ್ ಸೇರಿದ್ದ ಜೆಡಿಎಸ್ ಬಂಡಾಯ ನಾಯಕರು ನಿಟ್ಟುಸಿರು ಬಿಡುವಂತಾಗಿದೆ.

ಕಾಂಗ್ರೆಸ್ ಪಕ್ಷದಲ್ಲೂ ಅಪ್ಪ ಮಕ್ಕಳ ರಾಜಕಾರಣ ಶುರುವಾಗಿದ್ದು, ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕುಟುಂಬ ರಾಜಕಾರಣ ಅಬ್ಬರಿಸುತ್ತಿದೆ. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಡಾ. ಯತೀಂದ್ರ ವರುಣ ಕ್ಷೇತ್ರದಿಂದ ಈ ಬಾರಿ ಚುನಾವಣಾ ಅಖಾಡದಲ್ಲಿ ಅಭ್ಯರ್ಥಿಗಳಾಗಲಿದ್ದಾರೆ. ಕಾನೂನು ಸಚಿವ ಟಿ.ಬಿ ಜಯಚಂದ್ರ ತುಮಕೂರಿನ ಶಿರಾದಿಂದ ಅಭ್ಯರ್ಥಿ ಆದ್ರೆ, ಚಿಕ್ಕನಾಯಕನಹಳ್ಳಿಯಿಂದ ಮಗ ಸಂತೋಷ ಜಯಚಂದ್ರ ಕಾಂಗ್ರೆಸ್ ಅಭ್ಯರ್ಥಿ.. ಬೆಂಗಳೂರಿನ ಬಿಟಿಎಂ ಲೇಔಟ್ ಕ್ಷೇತ್ರದಲ್ಲಿ ರಾಮಲಿಂಗಾರೆಡ್ಡಿ ಅಭ್ಯರ್ಥಿ ಆದ್ರೆ, ಜಯನಗರ ಅಥವಾ ಬೊಮ್ಮನಹಳ್ಳಿ ಕ್ಷೇತ್ರಕ್ಕೆ ಮಗಳು ಸೌಮ್ಯಾರೆಡ್ಡಿ ಅಭ್ಯರ್ಥಿ ಆಗುವ ಸಾಧ್ಯತೆ ಹೆಚ್ಚಿದೆ. ಹಾಗೆ ಟಿ. ನರಸೀಪುರ ಹಾಗೂ ಬೆಂಗಳೂರಿನ ಸಿ.ವಿ ರಾಮನ್ ನಗರದಿಂದ ಮಹದೇವಪ್ಪ ಹಾಗು ಅವರ ಪುತ್ರ ಸುನೀಲ್ ಬೋಸ್ ಅಭ್ಯರ್ಥಿ ಆಗಲಿದ್ದು, ಯಾವ ಕ್ಷೇತ್ರಕ್ಕೆ ಯಾರು ಅನ್ನೋದಷ್ಟೆ ಫೈನಲ್ ಆಗಬೇಕಿದೆ. ಶಿವಮೊಗ್ಗದ ಸಾಗರ ಕ್ಷೇತ್ರದಿಂದ ಕಾಗೋಡು ತಿಮ್ಮಪ್ಪ ಅಥವಾ ಅವರ‌ ಮಗಳು ರಾಜ ನಂದಿನಿ ಅಭ್ಯರ್ಥಿ ಆಗಲಿದ್ದಾರೆ. ಇನ್ನು ಹಾಲಿ ಶಾಸಕ ಲೇಔಟ್ ಕೃಷ್ಣಪ್ಪ ವಿಜಯನಗರಕ್ಕೆ ಮತ್ತೆ ಅಭ್ಯರ್ಥಿ ಆಗಿದ್ದು, ಮಗ ಪ್ರಿಯಾ ಕೃಷ್ಣ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.

1. ಬೆಂಗಳೂರು
ಕೆ.ಆರ್ ಪುರಂ – ಭೈರತಿ ಬಸವರಾಜ್
ಮಹಾದೇವಪುರ – ಎ.ಸಿ ಶ್ರೀನಿವಾಸ
ಬೊಮ್ಮನಹಳ್ಳಿ – ಕವಿತಾ ರೆಡ್ಡಿ/ ಸೌಮ್ಯಾ ರೆಡ್ಡಿ
ರಾಜಾಜಿನಗರ – ಮಂಜುಳಾನಾಯ್ಡು / ಪದ್ಮಾವತಿ / ಮಂಜುನಾಥ ಗೌಡ
ಚಿಕ್ಕಪೇಟೆ – ಆರ್.ವಿ ದೇವರಾಜ್
ಯಲಹಂಕ – ಗೋಪಾಲಕೃಷ್ಣ
ಮಲ್ಲೇಶ್ವರ – ಎಂ.ಆರ್ ಸೀತಾರಾಂ / ರಕ್ಷಿತ್ ಶಿವರಾಂ / ರಾಕ್ ಲೈನ್ ವೆಂಕಟೇಶ್
ಯಶವಂತಪುರ – ಎಸ್. ಟಿ ಸೋಮಶೇಖರ್
ಆರ್.ಆರ್ ನಗರ – ಮುನಿರತ್ನ
ಬಸವನಗುಡಿ – ಬಿ ಕೆ ಚಂದ್ರಶೇಖರ್ / ಸುಧೀಂದ್ರ
ಶಿವಾಜಿನಗರ – ರೋಷನ್ ಬೇಗ್
ಶಾಂತಿನಗರ – ಹ್ಯಾರಿಸ್
ಸಿ.ವಿ ರಾಮನ್ ನಗರ – ಮಹಾದೇವಪ್ಪ/ ಸುನೀಲ್ ಬೋಸ್ / ಪಿ.ರಮೇಶ್
ಚಾಮರಾಜಪೇಟೆ – ಜಮೀರ್ ಅಹಮದ್
ಪುಲಕೇಶಿನಗರ – ಅಖಂಡ ಶ್ರೀನಿವಾಸ ಮೂರ್ತಿ / ಪ್ರಸನ್ನ ಕುಮಾರ್
ಗಾಂಧಿನಗರ – ದಿನೇಶ್ ಗುಂಡೂರಾವ್
ಬ್ಯಾಟರಾಯನಪುರ – ಕೃಷ್ಣಬೈರೇಗೌಡ
ಹೆಬ್ಬಾಳ – ಬೈರತಿ ಸುರೇಶ್
ಬಿಟಿಎಂ ಲೇಔಟ್ – ರಾಮಲಿಂಗರೆಡ್ಡಿ
ಜಯನಗರ – ಸೌಮ್ಯಾ ರೆಡ್ಡಿ / ಎಂ ಸಿ ವೇಣುಗೋಪಾಲ
ಗೋವಿಂದರಾಜ ನಗರ – ಪ್ರಿಯಾ ಕೃಷ್ಣ
ವಿಜಯನಗರ – ಎಂ.ಕೃಷ್ಣಪ್ಪ
ಸರ್ವಜ್ಞನಗರ – ಕೆ.ಜೆ ಜಾರ್ಜ್‌

2. ಬೆಳಗಾವಿ ಜಿಲ್ಲೆ
ಬೆಳಗಾವಿ ಉತ್ತರ – ಫಿರೋಜ್ ಸೇಠ್
ಯಮಕನಮರಡಿ – ಸತೀಶ್ ಜಾರಕಿಹೊಳಿ
ಬೆಳಗಾವಿ ಗ್ರಾಮೀಣ – ಲಕ್ಷ್ಮಿ ಹೆಬ್ಬಾಳ್ಕರ್
ಖಾನಾಪುರ – ಅಂಜಲಿ ನಿಂಬಾಳ್ಕರ್
ಕಾಗವಾಡ – ಶ್ರೀಮಂತ ಪಾಟೀಲ
ಚಿಕ್ಕೋಡಿ – ಗಣೇಶ್ ಹುಕ್ಕೇರಿ
ಗೋಕಾಕ್ – ರಮೇಶ್ ಜಾರಕಿಹೊಳಿ
ಕಿತ್ತೂರು – ಡಿ ಬಿ ಇನಾಮದಾರ್
ರಾಮದುರ್ಗ – ಅಶೋಕ್ ಪಟ್ಟಣ

3. ಬಾಗಲಕೋಟೆ ಜಿಲ್ಲೆ
ಬಾಗಲಕೋಟೆ – ಹೆಚ್ ವೈ ಮೇಟೆ
ಬದಾಮಿ – ಬಿ ಬಿ ಚಿಮ್ಮನಕಟ್ಟಿ / ಡಾ.ದೇವರಾಜ್ ಪಾಟೀಲ್
ಜಮಖಂಡಿ – ಸಿದ್ದು ನ್ಯಾಮಗೌಡ
ಬೀಳಗಿ – ಜಿ ಟಿ ಪಾಟೀಲ್
ಹು‌ನಗುಂದ – ವಿಜಯಾನಂದ ಕಾಶಪ್ಪನವರ
ಮುಧೋಳ – ಆರ್ ಬಿ ತಿಮ್ಮಾಪುರ
ತೇರದಾಳ – ಉಮಾಶ್ರೀ

4. ತುಮಕೂರು ಜಿಲ್ಲೆ
ತುಮಕೂರು ನಗರ – ರಫೀಕ್ ಅಹಮದ್
ತುಮಕೂರು ಗ್ರಾಮೀಣ – ನಿಂಗಪ್ಪ
ಶಿರಾ – ಟಿ ಬಿ ಜಯಚಂದ್ರ
ಮಧುಗಿರಿ – ಕೆ ಎನ್ ರಾಜಣ್ಣ
ಪಾವಗಡ – ವೆಂಕಟರಮಣಪ್ಪ
ಚಿಕ್ಕನಾಯಕನಹಳ್ಳಿ – ಸಂತೋಷ ಜಯಚಂದ್ರ
ತಿಪಟೂರು – ಷಡಕ್ಷರಿ
ಕೊರಟಗೆರೆ – ಡಾ. ಜಿ ಪರಮೇಶ್ವರ್

5. ವಿಜಯಪುರ ಜಿಲ್ಲೆ
ವಿಜಯಪುರ – ಮಕ್ಬುಲ್ ಬಾಗವಾನ
ಬಸವನ ಬಾಗೇವಾಡಿ – ಶಿವಾನಂದ ಪಾಟೀಲ್
ಇಂಡಿ – ಯಶವಂತರಾಯಗೌಡ ಪಾಟೀಲ್
ಬಬಲೇಶ್ವರ್ – ಎಂ ಬಿ ಪಾಟೀಲ್
ನಾಗಠಾಣ – ರಾಜು ಅಲಗೂರು
ಮುದ್ದೇಬಿಹಾಳ – ಅಪ್ಪಾಜಿಗೌಡ ಪಾಟೀಲ್

6. ಚಿಕ್ಕಬಳ್ಳಾಪುರ ಜಿಲ್ಲೆ
ಚಿಕ್ಕಬಳ್ಳಾಪುರ – ಸುಧಾಕರ್
ಗೌರಿಬಿದನೂರು – ಶಿವಶಂಕರರೆಡ್ಡಿ
ದೇವನಹಳ್ಳಿ – ಛಲವಾದಿ ನಾರಾಯಣಸ್ವಾಮಿ
ಬಾಗೇಪಲ್ಲಿ – ಸುಬ್ಬಾರೆಡ್ಡಿ

7. ಕೋಲಾರ ಜಿಲ್ಲೆ
ಶ್ರೀನಿವಾಸಪುರ – ರಮೇಶ್ ಕುಮಾರ್
ಮುಳಬಾಗಿಲು – ಮಂಜುನಾಥ
ಬಂಗಾರಪೇಟೆ – ನಾರಾಯಣಸ್ವಾಮಿ
ಕೋಲಾರ – ವಿ.ಆರ್ ಸುದರ್ಶನ್

8. ಚಿಕ್ಕಮಗಳೂರು ಜಿಲ್ಲೆ
ಚಿಕ್ಕಮಗಳೂರು – ಬಿ ಎಲ್ ಶಂಕರ್
ಶೃಂಗೇರಿ – ಟಿ ಡಿ ರಾಜೇಗೌಡ
ಮೂಡಿಗೆರೆ – ಮೋಟಮ್ಮ
ತರೀಕೆರೆ – ಶ್ರೀನಿವಾಸ್

9. ಚಿತ್ರದುರ್ಗ ಜಿಲ್ಲೆ
ಮೊಳಕಾಲ್ಮೂರು – ಶಶಿಕುಮಾರ್/ ಉಗ್ರಪ್ಪ
ಚಳ್ಳಕೆರೆ – ಕೆ ರಘುಮೂರ್ತಿ
ಚಿತ್ರದುರ್ಗ – ರಘು ಆಚಾರ್/ ಭಾವನಾ
ಹೊಸದುರ್ಗ – ಡಿ.ಜಿ ಗೋವಿಂದಪ್ಪ
ಹಿರಿಯೂರು – ಡಿ ಸುಧಾಕರ್
ಹೊಳಲ್ಕೆರೆ – ಅಂಜನೇಯ

10. ಬಳ್ಳಾರಿ ಜಿಲ್ಲೆ
ಬಳ್ಳಾರಿ ನಗರ – ಅನಿಲ್ ಲಾಡ್ / ಸೂರ್ಯನಾರಾಯಣ ರೆಡ್ಡಿ
ಬಳ್ಳಾರಿ ಗ್ರಾಮೀಣ – ಎನ್ ವೈ ಗೋಪಾಲಕೃಷ್ಣ / ಬಿ ನಾಗೇಂದ್ರ
ಹೊಸಪೇಟೆ(ವಿಜಯನಗರ) – ಆನಂದಸಿಂಗ್
ಸಿರಗುಪ್ಪ – ಬಿ ಎಂ ನಾಗರಾಜ್
ಕೂಡ್ಲಿಗಿ – ಬಿ ನಾಗೇಂದ್ರ
ಹಗರಿಬೊಮ್ಮನಹಳ್ಳಿ – ಭೀಮಾ ನಾಯ್ಕ್
ಹೂವಿನಹಡಗಲಿ – ಪರಮೇಶ್ವರ್ ನಾಯ್ಕ್
ಸಂಡೂರು – ತುಕಾರಾಂ

11. ಮೈಸೂರು ಜಿಲ್ಲೆ
ನರಸಿಂಹರಾಜ – ತನ್ವೀರ್ ಸೇಠ್
ಕೃಷ್ಣರಾಜ – ಸೋಮಶೇಖರ್
ಚಾಮರಾಜ – ವಾಸು
ಪಿರಿಯಾಪಟ್ಟಣ – ವೆಂಕಟೇಶ್
ವರುಣ – ಡಾ.ಯತೀಂದ್ರ
ಚಾಮುಂಡೇಶ್ವರಿ – ಸಿದ್ದರಾಮಯ್ಯ
ಟಿ. ನರಸೀಪುರ – ಹೆಚ್ ಸಿ ಮಹದೇವಪ್ಪ/ ಸುನೀಲ್ ಬೋಸ್
ನಂಜನಗೂಡು – ಕಳಲೇ ಕೇಶವಮೂರ್ತಿ

12. ಕಲಬುರಗಿ ಜಿಲ್ಲೆ
ಸೇಡಂ – ಶರಣಪ್ರಕಾಶ ಪಾಟೀಲ್
ಚಿಂಚೋಳಿ – ಉಮೇಶ ಜಾಧವ
ಕಲಬುರಗಿ ಗ್ರಾಮೀಣ – ಪ್ರಿಯಾಂಕ್ ಖರ್ಗೆ
ಆಳಂದ – ಬಿ ಆರ್ ಪಾಟೀಲ್

13. ಬೀದರ್ ಜಿಲ್ಲೆ
ಬೀದರ್ ದಕ್ಷಿಣ – ಅಶೋಕ ಖೇಣಿ / ಚಂದ್ರಸಿಂಗ್
ಹುಮ್ನಾಬಾದ್ – ರಾಜಶೇಖರ ಪಾಟೀಲ್
ಭಾಲ್ಕಿ – ಈಶ್ವರ ಖಂಡ್ರೆ
ಔರಾದ್ – ಭೀಮಸೇನರಾವ್ ಸಿಂಧೆ/ ಜಯಕುಮಾರ ಕೌಡಾಳೆ
ಬೀದರ – ರಹೀಂ ಖಾನ್
ಬಸವಕಲ್ಯಾಣ – ನಾರಾಯಣ / ಶಿವರಾಜ್ ನರಶೆಟ್ಟಿ

14. ಉತ್ತರ ಕನ್ನಡ ಜಿಲ್ಲೆ
ಶಿರಸಿ – ಭೀಮಣ್ಣ ಟಿ ನಾಯ್ಕ್ / ನಿವೇದಿತ್ ಆಳ್ವ
ಯಲ್ಲಾಪುರ – ಶಿವರಾಮ ಹೆಬ್ಬಾರ್
ಕಾರವಾರ – ಸತೀಶ್ ಸೈಲ್
ಹಳಿಯಾಳ – ಆರ್ ವಿ ದೇಶಪಾಂಡೆ
ಭಟ್ಕಳ – ಮಂಕಾಳ ವೈದ್ಯ
ಕುಮಟಾ – ಶಾರದಾ ಶೆಟ್ಟಿ

14. ಶಿವಮೊಗ್ಗ ಜಿಲ್ಲೆ
ಶಿವಮೊಗ್ಗ ನಗರ – ಪ್ರಸನ್ನ ಕುಮಾರ್
ಸೊರಬ – ರಾಜು ತಲ್ಲೂರು/ಶ್ರೀಧರ/ ಬಾಸೂರ್ ಚಂದ್ರೇಗೌಡ
ಸಾಗರ – ಕಾಗೋಡು ತಿಮ್ಮಪ್ಪ / ರಾಜ ನಂದಿನಿ
ತೀರ್ಥಹಳ್ಳಿ – ಕಿಮ್ಮನೆ ರತ್ನಾಕರ
ಭದ್ರಾವತಿ – ಸಂಗಮೇಶ / ಸಿಎಂ ಇಬ್ರಾಹಿಂ
ಶಿಕಾರಿಪುರ – ಗೋಣಿ ಮಾಲತೇಶ / ಪ್ರಸನ್ನ ಕುಮಾರ್(mlc)

15. ಕೊಡಗು ಜಿಲ್ಲೆ
ಮಡಿಕೇರಿ – ವಿಜಯಕುಮಾರ್

16. ಧಾರವಾಡ ಜಿಲ್ಲೆ
ಧಾರವಾಡ – ವಿನಯ ಕುಲಕರ್ಣಿ
ಹುಬ್ಬಳ್ಳಿ – ಧಾರವಾಡ ಪೂರ್ವ – ಅಬ್ಬಯ್ಯ ಪ್ರಸಾದ್
ಕಲಘಟಗಿ – ಸಂತೋಷ್ ಲಾಡ್
ಕುಂದಗೋಳ – ಸಿ ಎಸ್ ಶಿವಳ್ಳಿ
ಹುಬ್ಬಳ್ಳಿ- ಧಾರವಾಡ ಕೇಂದ್ರ – ನಾಗರಾಜ್ ಛಬ್ಬಿ
ಹುಬ್ಬಳ್ಳಿ ಧಾರವಾಡ ಪಶ್ಚಿಮ – ದೀಪಕ್ ಚಿಂಚೊಳ್ಳಿ / ಸ್ವಾತಿ ಮಳಗಿ

18. ಗದಗ ಜಿಲ್ಲೆ
ಗದಗ – ಹೆಚ್. ಕೆ ಪಾಟೀಲ್
ನರಗುಂದ – ಬಿ ಆರ್ ಯಾವಗಲ್
ನವಲಗುಂದ – ವಿಜಯ ಕುಲಕರ್ಣಿ
ರೋಣ – ಜಿ.ಎಸ್ ಪಾಟೀಲ
ಶಿರಹಟ್ಟಿ – ರಾಮಕೃಷ್ಣ ದೊಡ್ಡಮನಿ

19. ಹಾಸನ ಜಿಲ್ಲೆ

ಅರಕಲಗೂಡು – ಎ ಮಂಜು

20. ಮಂಡ್ಯ ಜಿಲ್ಲೆ
ಮಂಡ್ಯ – ಅಂಬರೀಷ್
ನಾಗಮಂಗಲ – ಚೆಲುವರಾಯಸ್ವಾಮಿ
ಮಳವಳ್ಳಿ – ನರೇಂದ್ರಸ್ವಾಮಿ
ಕೆ ಆರ್ ಪೇಟೆ – ಚಂದ್ರಶೇಖರ್
ಶ್ರೀರಂಗಪಟ್ಟಣ – ರಮೇಶ ಬಂಡಿಸಿದ್ದೇಗೌಡ

21. ರಾಮನಗರ ಜಿಲ್ಲೆ
ಕನಕಪುರ – ಡಿ ಕೆ ಶಿವಕುಮಾರ್
ಮಾಗಡಿ – ಹೆಚ್ ಸಿ ಬಾಲಕೃಷ್ಣ

21. ರಾಯಚೂರು ಜಿಲ್ಲೆ

ಸಿಂಧನೂರು – ಹಂಪನಗೌಡ ಬಾದರ್ಲಿ/ ಬಸನಗೌಡ ಬಾದರ್ಲಿ

22. ಕೊಪ್ಪಳ ಜಿಲ್ಲೆ
ಕೊಪ್ಪಳ – ಬಸವರಾಜ ಹಿಟ್ನಾಳ
ಕುಷ್ಟಗಿ – ಅಮರೇಗೌಡ ಬಯ್ಯಾಪುರ
ಗಂಗಾವತಿ – ಇಕ್ಬಾಲ್ ಅನ್ಸಾರಿ
ಕನಕಗಿರಿ – ಶಿವರಾಜ ತಂಗಡಗಿ
ಯಲಬುರ್ಗ – ಬಸವರಾಜ ರಾಯರೆಡ್ಡಿ
ಮಂಗಳೂರು ನಗರ ಉತ್ತರ – ಮೋಹಿದ್ದೀನ್ ಬಾವಾ
ಮಂಗಳೂರು ದಕ್ಷಿಣ – ಲೋಬೋ
ಮಂಗಳೂರು ನಗರ – ಯು ಟಿ ಖಾದರ್
ಬಂಟ್ವಾಳ – ರಮಾನಾಥ ರೈ

ಸದ್ಯಕ್ಕೆ ಇವಿಷ್ಟು ಹೆಸರನ್ನು ಸ್ಕ್ರೀನಿಂಗ್ ಕಮಿಟಿ ಮುಂದೆ ಕಳುಹಿಸಿದ್ದು, ಇದರಲ್ಲಿ ಕೆಲ ಬದಲಾವಣೆ ಆದರೂ ಯಾವುದೇ ಅಚ್ಚರಿಯಿಲ್ಲ.

Leave a Reply