ಅಂಬೇಡ್ಕರ್ ಗೆ ಮರುನಾಮಕರಣ ಮಾಡಲು ಮುಂದಾದ ಯೋಗಿ ಸರ್ಕಾರ!

ಡಿಜಿಟಲ್ ಕನ್ನಡ ಟೀಮ್:

ಭಾರತ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮರುನಾಮಕರಣ ಮಾಡಲು ಮುಂದಾಗಿದ್ದು, ಅಂಬೇಡ್ಕರ್ ಅವರ ಹೆಸರಿನಲ್ಲಿ ‘ರಾಮ್ ಜಿ’ ಎಂದು ಸೇರಿಸಲು ನಿರ್ಧರಿಸಿದೆ.

ಸದ್ಯ ವರದಿಗಳ ಪ್ರಕಾರ ಉತ್ತರ ಪ್ರದೇಶ ಸರ್ಕಾರ ಅಂಬೇಡ್ಕರ್ ಅವರ ಹೆಸರನ್ನು ‘ಭೀಮ್ ರಾವ್ ರಾಮ್ ಜಿ ಅಂಬೇಡ್ಕರ್’ ಎಂದು ಬದಲಾಯಿಸಲು ಚಿಂತನೆ ನಡೆಸಲಾಗಿದೆ. ಉತ್ತರ ಪ್ರದೇಶದ ರಾಜ್ಯಪಾಲರಾದ ರಾಮ ನಾಯಕ್ ಅವರ ಶಿಫಾರಸ್ಸಿನ ಮೇರೆಗೆ ರಾಜ್ಯ ಸರ್ಕಾರ ಈ ಮರುನಾಮಕರಣ ಮಾಡಲು ಮುಂದಾಗಿದೆ. ಈ ಮರುನಾಮಕರಣದ ನಂತರ ಅಂಬೇಡ್ಕರ್ ಅವರನ್ನು ರಾಮ್ ಜಿ ಎಂದು ಅಧಿಕೃತವಾಗಿ ಕರೆಯಲು ಈ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.

ಇದಕ್ಕೆ ಸಾಕ್ಷಿ ಎಂಬಂತೆ ಯುಪಿ ಸರ್ಕಾರ ಎಲ್ಲ ಸರ್ಕಾರಿ ಇಲಾಖೆಗಳಿಗೂ ಈ ವಿಚಾರವಾಗಿ ಸೂಚನೆ ಹೊರಡಿಸಿದ್ದು, ಅಲಹಬಾದ್ ಹೈ ಕೋರ್ಟ್ ಹಾಗೂ ಲಖನೌ ಪೀಠಕ್ಕೂ ಪತ್ರ ಬರೆದಿದ್ದು, ಎಲ್ಲಾ ದಾಖಲೆಗಳಲ್ಲಿ ಅಂಬೇಡ್ಕರ್ ಅವರ ಹೆಸರು ಬದಲಾಯಿಸುವಂತೆ ತಿಳಿಸಿದೆ ಎಂಬ ವರದಿಗಳು ಬಂದಿವೆ. ‘ರಾಮ್ ಜಿ’ ಅಂಬೇಡ್ಕರ್ ಅವರ ತಂದೆಯ ಹೆಸರಾಗಿದ್ದು, ಈ ಕಾರಣಕ್ಕೆ ಅಂಬೇಡ್ಕರ್ ಅವರ ಹೆಸರು ಬದದಲಾವಣೆಗೆ ರಾಜ್ಯಪಾಲರು ಶಿಫಾರಸ್ಸು ಮಾಡಿರುವುದಾಗಿ ಜೀನ್ಯೂಸ್ ವರದಿ ಮಾಡಿದೆ.

ಯೋಗಿ ಸರ್ಕಾರದದ  ಈ ನಡೆಯನ್ನು ವಿರೋಧ ಪಕ್ಷಗಳು ಟೀಕಿಸಿವೆ. ಸಮಾಜಜವಾದಿ ಪಕ್ಷದ ನಾಯಕ ದೀಪಕ್ ಮಿಶ್ರಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಹೀಗೆ…

‘ಉತ್ತರ ಪ್ರದೇಶ ಸರ್ಕಾರ ದಲಿತರ ಐಕಾನ್ ಆಗಿರುವ ಅಂಬೇಡ್ಕರ್ ಅವರ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟಿರುವುದು ಸ್ಪಷ್ಟವಾಗಿದೆ. ಬಿಜೆಪಿ ಅಂಬೇಡ್ಕರ್ ವಿರೋಧಿ ನೀತಿ ಅನುಸರಿಸುತ್ತಿದೆ. ಅಂಬೇಡ್ಕರ್ ಅವರ ಸಿದ್ಧಾಂತ, ಆಲೋಚನೆಗಳನ್ನು ಒಪ್ಪದ, ಗೌರವಿಸದ ಬಿಜೆಪಿ, ಒಂದು ಸಮುದಾಯದ ಮತಬ್ಯಾಂಕ್  ಅನ್ನು ಸೆಳೆಯುವ ಉದ್ದೇಶಕ್ಕಾಗಿ ಈ ಕ್ರಮಕ್ಕೆ ಮುಂದಾಗಿದೆ.’

Leave a Reply