ಜೆಡಿಎಸ್ ಕೋಟೆಗೆ ಅಮಿತ್ ಶಾ ಎಂಟ್ರಿ!

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ವಿಧಾನಸಭಾ ಚುಣಾವಣೆ ಬಿಸಿ‌ ನಿಧಾನಕ್ಕೆ ಏರುತ್ತಿದ್ದು, ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಕಾಂಗ್ರೆಸ್ ಜೊತೆ ಪ್ರಾದೇಶಿಕ ಪಕ್ಣ ಜೆಡಿಎಸ್ ಕೂಡ ನೇರ ಪೈಪೋಟಿ ನೀಡುತ್ತಿದೆ. ನಿನ್ನೆಯಷ್ಟೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ನಾಗಮಂಗಲದಲ್ಲಿ‌ ಭರ್ಜರಿಯಾಗಿ ಕುಮಾರಪರ್ವ ಯಾತ್ರೆ ಮಾಡಿದ್ದಾರೆ. ಕಳೆದ ಬಾರಿ ಜೆಡಿಎಸ್ ನಿಂದ ಗೆದ್ದಿದ್ದ ಚೆಲುವರಾಯಸ್ವಾಮಿ ಪಕ್ಷಕ್ಕೆ ದ್ರೋಹ ಮಾಡುವ ಮೂಲಕ ಕಾಂಗ್ರೆಸ್ ಅಪ್ಪಿಕೊಂಡಿದ್ದಾರೆ. ಇಂತವರಿಗೆ ಬುದ್ಧಿ ಕಲಿಸಬೇಕು ಅಂತಾ ಜನಸಾಗರದ ನಡುವೆ ನಿಂತು ಅಬ್ಬರಿಸಿದ್ದಾರೆ. ಜೆಡಿಎಸ್ ಪಕ್ಷದ ಮೇಲೆ ಹಾಸನ, ರಾಮನಗರ ಜನರಿಗಿಂತಾ ಮಿಗಿಲಾದ ಪ್ರೀತಿ ಇಟ್ಟಿರೋದು ಮಂಡ್ಯ ಜನರು ಎಂದು ಘಂಟಾಘೋಷವಾಗಿ ಹೇಳಿದ್ದಾರೆ. ಅದು ಸತ್ಯ ಕೂಡ ಹೌದು, ಕಳೆದ ಚುನಾವಣೆಗಳ ಫಲಿತಾಂಶವನ್ನೇ ನೋಡಿದರೂ ಕುಮಾರಸ್ವಾಮಿ ಹೇಳಿರುವ ಮಾತು ಸುಳ್ಳಲ್ಲ ಎನ್ನುವಂತಿದೆ. ಈ ರೀತಿ ಜೆಡಿಎಸ್ ಸ್ವರ್ಗವೇ ಆಗಿರುವ ಮಂಡ್ಯ ಜಿಲ್ಲೆಯಲ್ಲಿ ಇಂದು ಅಮಿತ್ ಶಾ ಪ್ರವಾಸ ಮಾಡಲಿದ್ದಾರೆ.

ಬೆಳಗ್ಗೆ 9 ಗಂಟೆಗೆ ಮೈಸೂರಿನಿಂದ ರಸ್ತೆ ಮಾರ್ಗವಾಗಿ ಶ್ರೀರಂಗಪಟ್ಟಣಕ್ಕೆ ಆಗಮಿಸಲಿರುವ ಅಮಿತ್ ಶಾ, ಮೊದಲಿಗೆ ಶ್ರೀ ರಂಗನಾಥಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ. ಬಳಿಕ ಬೆಳಗ್ಗೆ 9.25ಕ್ಕೆ‌ ಶ್ರೀರಂಗಪಟ್ಟಣ ತಾಲೂಕಿನ ಚಿನ್ನೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ ರೈತ ರಾಜೇಂದ್ರ ಪ್ರಸಾದ್ ಮನೆಗೆ ಭೇಟಿ ನೀಡಲಿದ್ದು, ಮೃತ ರೈತನ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ. ನಂತರ ಅದೇ ಗ್ರಾಮದಲ್ಲಿ ನಡೆಯುವ ಮುಷ್ಠಿ ಅಕ್ಕಿ ಅಭಿಯಾನಕ್ಕೆ ಚಾಲನೆ ನೀಡಲಿರುವ ಅಮಿತ್ ಶಾ, ಅಲ್ಲಂದ ತೂಬಿನಕೆರೆ ಹೆಲಿಪ್ಯಾಡ್ ಗೆ ಆಗಮಿಸಿ ಹೆಲಿಕ್ಯಾಪ್ಟರ್ ಮೂಲಕ ಮೇಲುಕೋಟೆಗೆ ಪ್ರಯಾಣ ಬೆಳೆಸಲಿದ್ದಾರೆ. ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ವಿಶೇಶ ಪೂಜೆ ಸಲ್ಲಿಸಲಿರುವ ಅಮಿತ್ ಶಾ, ಬೆಳಗ್ಗೆ 11.30ಕ್ಕೆ ಮೇಲುಕೋಟೆಯಿಂದ ವಾಪಸ್ ಆಗಲಿದ್ದು, ತೂಬಿನಕೆರೆಯಿಂದ ರಸ್ತೆ ಮಾರ್ಗವಾಗಿ ಮಂಡ್ಯ ನಗರಕ್ಕೆ ಆಗಮಿಸಲಿದ್ದಾರೆ. ಮಂಡ್ಯದ ಸರ್ ಎಂ. ವಿಶ್ವೇಶ್ವರಯ್ಯ ಸ್ಟೇಡಿಯಂನಲ್ಲಿ‌ ಆಯೋಜಿಸಲಾಗಿರುವ ಸಾವಯುವ ಕೃಷಿಕರ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ‌ ಪಾಲ್ಗೊಳ್ಳಲಿದ್ದಾರೆ. ಬಳಿಕ ಅಲ್ಲೇ ಕೃಷಿಕ ಜೊತೆ ಭೋಜನಕೂಟಕ್ಕೂ ವ್ಯವಸ್ಥೆ ಮಾಡಲಾಗಿದೆ. ಸ್ವೀಕರಿಲಿದ್ದಾರೆ.

ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ನೆಲೆಯೇ ಇಲ್ಲವಾಗಿದ್ದು, ಈ ಬಾರಿ ಮೋದಿ ಹೆಸರಿನ ಜೊತೆಯಲ್ಲಾದರೂ ನೆಲೆಯೂರಬೇಕು ಅನ್ನೋದು ಬಿಜೆಪಿ ನಾಯಕರ ಮನದಾಳ. ಅದು ಅಷ್ಟು ಸುಲಭ ಅಲ್ಲ ಅನ್ನೋದನ್ನು ಚೆನ್ನಾಗಿ ಅರಿತಿರುವ ಅಮಿತ್ ಶಾ, ಮಂಡ್ಯದಲ್ಲೇ ಮಧ್ಯಾಹ್ನ 2 ಗಂಟೆಗೆ ಹಳೇ ಮೈಸೂರು ಭಾಗದ ಮುಖಂಡರ ಸಭೆ ನಡೆಸಲಿದ್ದಾರೆ. ಶಶಿಕಿರಣ ಕನ್ವೆನ್ಷನ್ ಹಾಲ್ ನಲ್ಲಿ ಸಭೆ ನಡೆಯಲಿದ್ದು, ಯಾವ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ, ಯಾವ ಕ್ಷೇತ್ರಗಳಲ್ಲಿ ಹೆಚ್ಚು ಕೆಲಸ ಮಾಡಬೇಕು ಅನ್ನೋ ಬಗ್ಗೆ ಸಂದೇಶ ನೀಡಲಿದ್ದಾರೆ. ಒಂದು ಗಂಟೆ ಬಿಜೆಪಿ ನಾಯಕರಿಗೆ ಕ್ಲಾಸ್ ತೆಗೆದುಕೊಳ್ಳಲಿರುವ ಅಮಿತ್ ಶಾ ಮಧ್ಯಾಹ್ನ 3 ಗಂಟೆಗೆ ಮಂಡ್ಯದಿಂದ ನಿರ್ಗಮಿಸಲಿದ್ದು, ರಾಮನಗರ ಜಿಲ್ಲೆಯ ಚನ್ನಪಟ್ಟಣಕ್ಕೆ ತೆರಳಲಿದ್ದಾರೆ. ಅಲ್ಲಿ ರೇಷ್ಮೆ ಬೆಳೆಗಾರರ ಜೊತೆ ಚರ್ಚೆ ನಡೆಸಲಿದ್ದಾರೆ.

Leave a Reply