ಬಿಜೆಪಿ ದಕ್ಷಿಣ ಭಾರತಕ್ಕೆ ಪ್ರವೇಶಿಸಲು ಕರ್ನಾಟಕವೇ ಬಾಗಿಲು: ಅಮಿತ್ ಶಾ

ಡಿಜಿಟಲ್ ಕನ್ನಡ ಟೀಮ್:

ಹಳೇ ಮೈಸೂರು ಭಾಗದಲ್ಲಿ ಎರಡು ದಿನಗಳ ಪ್ರವಾಸ ಮುಗಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಭರ್ಜರಿಯಾಗಿ ಚುನಾವಣಾ ಪ್ರಚಾರ ಮುಗಿಸಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ದದಕ್ಷಿಣ ಭಾತದಲ್ಲಿ ಲಗ್ಗೆ ಇಡಲು ಕರ್ನಾಟಕದ ಮೂಲಕವೇ ಬಾಗಿಲು ತೆರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ವೇಳೆ ಅವರು ಹೇಳಿದಿಷ್ಟು…

‘ಈ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಬಲಿಷ್ಠ ಸರ್ಕಾರರಚನೆ ಮಾಡುವ ಮೂಲಕ ದಕ್ಷಿಣ ಭಾರತಕ್ಕೆ ಬಿಜೆಪಿ ಪ್ರವೇಶಿಸಲು ಕರ್ನಾಟರ ಬಾಗಿಲು ತೆರೆಯಲಿದೆ. 2014ರ ಲೋಕಸಭೆ ಚುನಾವಣೆ ನಂತರ ನಾವು 11 ರಾಜ್ಯಗಳಲ್ಲಿ ಕಾಂಗ್ರೆಸ್ ಅನ್ನು ಕಿತ್ತೊಗೆದಿದ್ದೇವೆ. ಭ್ರಷ್ಟ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದ ಸಿದ್ದರಾಮಯ್ಯ ಸರ್ಕಾರ ಹಣ ನೀಡುವ ಯಂತ್ರವಾಗಿದೆ.ಹೀಗಾಗಿ ಕರ್ನಾಟಕದ ಜನತೆ ಈ ಸರ್ಕಾರವನ್ನು ಕಿತ್ತೊಗೆಯಲು ನಿರ್ಧರಿಸಿದ್ದು, ಬಿಜೆಪಿ ಅವರ ಮುಂದಿನ ಆಯ್ಕೆಯಾಗಿದೆ. ಮೈಸೂರಿನ ಒಂದೇ ಜಿಲ್ಲೆಯಲ್ಲಿ ಬಿಜೆಪಿಯ ಯಾವುದೇ ಶಾಸಕ ಇಲ್ಲದಿರುವುದು. ಹೀಗಾಗಿ ಈ ಕ್ಷೇತ್ರದ ಮೇಲೆ ಸಾಕಷ್ಟು ಗಮನ ಹರಿಸಲಾಗುತ್ತಿದೆ.’

Leave a Reply