ಚುನಾವಣಾ ಆಯೋಗದ ವಿರುದ್ಧ ಎಚ್ಡಿಕೆ ಕಿಡಿ

    ಡಿಜಿಟಲ್ ಕನ್ನಡ ಟೀಮ್:

    ಚುನಾವಣಾ ಆಯೋಗವು ಅಕ್ರಮವಾಗಿ ದುಡ್ಡು ಸಾಗಿಸುತ್ತಿರುವವರನ್ನು ಬಿಟ್ಸ್ಟು, ದುಡ್ಡು ಇಲ್ಲದವರ ಬಳಿ ಬಂದು ಶೋಧ ಕಾರ್ಯ ನಡೆಸುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣಾ ಆಯೋಗದ ಅಧಿಕಾರಿಗಳು ಕುಮಾರಸ್ವಾಮಿ ಅವರ ಕಾರನ್ನು ಪರಿಶೀಲನೆ ನಡೆಸಿದ್ದು, ಈ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಎಚ್ಡಿಕೆ ಹೇಳಿದಿಷ್ಟು…

    ‘ಮೈಸೂರಿನಲ್ಲಿ ಪೊಲೀಸ್ ವಾಹನಗಳಲ್ಲೇ ಹಣವನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಅಂತಹವರನ್ನು ಬಿಟ್ಟು ದುಡ್ಡಿಲ್ಲದೇ ಹೋಗುತ್ತಿರುವ ನನ್ನ ಕಾರನ್ನು ತಡೆದು ಪರಿಶೀಲನೆ ನಡೆಸುತ್ತಿದೆ. ನನ್ನ ಶೇವಿಂಗ್ ಕಿಟ್ ಅನ್ನು ಬಿಡದೇ ಚುನಾವಣಾ ಆಯೋಗದ  ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಆದರೆ ಅಕ್ರಮವಾಗಿ ದುಡ್ಡು ಸಾಗಿಸುತ್ತಿರುವವರನ್ನು ಬಿಟ್ಟಿದೆ. ನಾನು ನನ್ನ ಕಾರ್ಯಕರ್ತನ ಮನೆಯಲ್ಲಿ ಊಟ ಮಾಡಿದನ್ನು ತಪ್ಪಾಗಿ ಹೇಳಲಾಗುತ್ತಿದೆ. ನನ್ನ ಕಾರ್ಯಕರ್ತನ ಮನೆಯಲ್ಲಿ ಊಟ ಮಾಡಿದ್ದರಲ್ಲೇ ತಪ್ಪೇನಿದೆ?’

    Leave a Reply