ಕಾಮನ್ ವೆಲ್ತ್ ಗೇಮ್ಸ್: ಕಾಂಗರೂ ನಾಡಲ್ಲಿ ಕನ್ನಡಿಗನಿಗೆ ಬೆಳ್ಳಿ ಪದಕ

ಡಿಜಿಟಲ್ ಕನ್ನಡ ಟೀಮ್:

ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ 21ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕರ್ನಾಟಕದ ವೇಟ್ ಲಿಫ್ಟರ್ ಪಿ.ಗುರುರಾಜ್ ಅವರು ಬೆಳ್ಳಿ ಪದಕ ಪಡೆದಿದ್ದಾರೆ.

56 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಗುರುರಾಜ್, ಸ್ನ್ಯಾಚ್ ವಿಭಾಗದಲ್ಲಿ 111 ಕೆ.ಜಿ ಹಾಗೂ ಕ್ಲೀನ್ ಅಂಡ್ ಜೆರ್ಕ್ ವಿಭಾಗದಲ್ಲಿ 138 ಕೆ.ಜಿ ಭಾರ ಎತ್ತುವ ಮೂಲಕ ಒಟ್ಟು 249 ಕೆ.ಜಿ. ಯೊಂದಿಗೆ ಬೆಳ್ಳಿ ಪದಕ ಗೆದ್ದರು.

ಅದರೊಂದಿಗೆ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಚೊಚ್ಚಲ ಪದಕ‌ ಗೆದ್ದು ಕೊಟ್ಟ ಕನ್ನಡಿಗ ಎಂಬ ಕೀರ್ತಿಗೆ ಭಾಜನರಾದರು.

ಗುರುರಾಜ್ ಭಾರತೀಯ ವಾಯುಪಡೆಯ ಉದ್ಯೋಗಿಯಾಗಿದ್ದು, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಚಿತ್ತೂರು ಗ್ರಾಮದ ಮಹಾಬಲ ಪೂಜಾರಿ ಮತ್ತು ಪದ್ದು ಪೂಜಾರಿ ದಂಪತಿಯ ಪುತ್ರರಾಗಿದ್ದಾರೆ. ಗುರುರಾಜ್ ಕೊಲ್ಲೂರಿನಲ್ಲಿ ಸುಕೇಶ್ ಶೆಟ್ಟಿ ಹಾಗು ಉಜಿರೆಯಲ್ಲಿ ರಾಜೇಂದ್ರ ಪ್ರಸಾದ್ ಅವರಿಂದ ತರಬೇತಿ ಪಡೆದಿದ್ದಾರೆ.

Leave a Reply