ದಾಖಲೆಯೊಂದಿಗೆ ಚಿನ್ನ ಗೆದ್ದ ಚಾನು!

ಡಿಜಿಟಲ್ ಕನ್ನಡ ಟೀಮ್:
ಭಾರತದ ಪ್ರಮುಖ ಮಹಿಳಾ ವೇಟ್ ಲಿಫ್ಟರ್ ಮೀರಾಭಾಯ್ ಚಾನು ಗೋಲ್ಡ್ ಕೋಸ್ಟ್ ನಲ್ಲಿ ಆರಂಭವಾದ 21ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ದಿನವೇ ಸ್ವರ್ಣ ತಂದುಕೊಟ್ಟಿದ್ದಾರೆ.
ಗುರುವಾರ ಕರ್ನಾಟಕದ ಪಿ. ಗುರುರಾಜ್ ಇದೇ ಕ್ರೀಡೆಯಲ್ಲಿ ಬೆಳ್ಳಿ ಪಡೆದು ಭಾರತದ ಪದಕ ಖಾತೆ ತೆರೆದರು. ಇದರ ಬೆನ್ನಲ್ಲೇ ಚಾನು ಮಹಿಳೆಯರ 48 ಕೆ.ಜಿ ವಿಭಾಗದ ಸ್ಪರ್ಧೆಯಲ್ಲಿ ಚಿನ್ನ ಗೆದ್ದುಕ್ರೀಡಾಭಿಮಾನಿಗಳಿಗೆ ಡಬಲ್ ಖುಷಿ ನೀಡಿದ್ದಾರೆ.
ಕ್ಲೀನ್ (80, 84 ಮತ್ತು 86 ಕೆ.ಜಿ) ಹಾಗೂ ಜೆರ್ಕ್ (103, 107 ಹಾಗೂ 110 ಕೆ.ಜಿ) ವಿಭಾಗದಲ್ಲಿ ಪ್ರತಿ ಪ್ರಯತ್ನದಲ್ಲೂ ಕ್ರೀಡಾಕೂಟ ದಾಖಲೆ ಮುರಿದ ಚಾನು ಅಗ್ರಸ್ಥಾನಿಯಾದರು. ಜೆರ್ಕ್ ವಿಭಾಗದಲ್ಲಿ ತಮಗಿಂತ ಎರಡು ಪಟ್ಟು ಹೆಚ್ಚಿನ ತೂಕವನ್ನು ಯಾವುದೇ ಫೌಲ್ ಇಲ್ಲದೆ ಎತ್ತಿದ ಚಾನು ಅಮೋಘ ಪ್ರದರ್ಶನ ನೀಡಿದರು. ಎರಡೂ ವಿಭಾಗಗಳಿಂದ ಚಾನು ಒಟ್ಟು 196 ಕೆ.ಜಿ ಎತ್ತುವ ಮೂಲಕ ಅಗ್ರಸ್ಥಾನಿಯಾದರು.

Leave a Reply