ಮೈಸೂರಿನಲ್ಲಿ ಒಕ್ಕಲಿಗರ ಮತ ಸೆಳೆಯಲು ಪ್ರಯತ್ನಿಸುತ್ತಿರೋ ಸಿದ್ರಾಮಯ್ಯಗೆ ಶಾಕ್ ಕೊಟ್ಟ ಜೆಡಿಎಸ್!

ಡಿಜಿಟಲ್ ಕನ್ನಡ ಟೀಮ್:

ರಾಜ್ಯವಿಧಾನಸಭಾ ಚುನಾವಣೆ ಹಿನ್ನೆಲೆ ಪ್ರತಿಷ್ಠೆಯ ಕಣವಾಗಿರುವ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲೊದಕ್ಕೆ ಸಿಎಂ ಸಿದ್ದರಾಮಯ್ಯರಿಂದ ಭರ್ಜರಿ ಕಸರತ್ತು ಶುರುವಾಗಿದ್ದು, ಈ ಭಾಗದ ಒಕ್ಕಲಿಗರ ಭರ್ಜರಿ ಮತಬೇಟೆಗೆ ಮುಂದಾಗಿದ್ದು, ಒಕ್ಕಲಿಗ ಸಮುದಾಯದ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ.

ಈಗಾಗಲೇ ತವರು ಜಿಲ್ಲೆಯಲ್ಲಿ 2ನೇ ಬಾರಿ ಸುತ್ತು ಹಾಕಿರುವ ಸಿಎಂ ಸಿದ್ದರಾಮಯ್ಯ ರೌಂಡ್ಸ್ ಹಾಕಲಿದ್ದು, ಚಾಮುಂಡೇಶ್ಚರಿಯಲ್ಲಿ ಒಕ್ಕಲಿಗ ಮತ ಭೇಟೆಗೆ ಸಿಎಂ ರಣತಂತ್ರ ರೂಪಿಸಿದ್ದಾರೆ. ಒಕ್ಕಲಿಗ ಸಮುದಾಯದ ಬೆಂಬಲ ಕೋರಿ ಇಂದು ಸಿಎಂ ಸಿದ್ದರಾಮಯ್ಯ ಮೈಸೂರಿನ ನಿವೇದಿತನಗರದಲ್ಲಿರೋ ಶ್ರೀರಂಗ ಭವನದಲ್ಲಿ ಸಭೆ ನಡೆಸಿ ಚರ್ಚಿಸಲಿದ್ದಾರೆ.

ಒಟ್ಟಾರೆ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ನೀಡುತ್ತಿರುವ ಜೆಡಿಎಸ್ ಹಾಲಿ ಶಾಸಕ ಜಿ.ಟಿ ದೇವೇಗೌಡರನ್ನ ಮಣಿಸಲು ಸಿಎಂ ರಣತಂತ್ರ ರೂಪಿಸುತ್ತಿದ್ದಾರೆ. ಹೀಗೆ ಒಕ್ಕಲಿಗರನ್ನು ಸೆಳೆಯುವ ಪ್ರಯತ್ನದಲ್ಲಿರುವ ಮುಖ್ಯಮಂತ್ರಿಗಳಿಗೆ ಜೆಡಿಎಸ್ ಶಾಕ್ ಕೊಟ್ಟಿದೆ. ಕಾಂಗ್ರೆಸ್ ಮುಖಂಡರನ್ನು ಹೈಜಾಕ್ ಮಾಡಿಕೊಂಡಿರುವ ಜೆಡಿಎಸ್ ಸಿದ್ದರಾಮಯ್ಯಗೆ ಸೆಡ್ಡು ಹೊಡೆದಿದೆ.

 ಚಾಮುಂಡೇಶ್ವರಿ ವಿಧಾಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಗ್ರಾಮಪಂಚಾಯತಿ ಸದ್ಯಸರಾಗಿರುವ ಗೋವಿಂದ, ಪೆದ್ದಹನುಮಯ್ಯ, ವೆಂಕಟೇಶ್ ಸೇರಿ ಹಲವು ಮುಖಂಡರು ಜಿ.ಟಿ.ದೇವೇಗೌಡ ಅವರ ಜೊತೆ ಅಧಿಕೃತವಾಗಿ ಇಂದು ಜೆಡಿಎಸ್ ಗೆ ಸೇರ್ಪಡೆಯಾಗಿದ್ದಾರೆ.

Leave a Reply