ಯಡಿಯೂರಪ್ಪ- ಕುಮಾರಸ್ವಾಮಿಯನ್ನು ಸೋಲಿಸೋಕೆ ಒಂದು ದಿನ ಸಾಕು: ಗುಡುಗಿದ ಸಿದ್ರಾಮಯ್ಯ

ಡಿಜಿಟಲ್ ಕನ್ನಡ ಟೀಮ್:

‘ನನಗೂ ಚುನಾವಣೆಯಲ್ಲಿ ಸೋಲಿಸೋದು ಗೊತ್ತಿದೆ. ಅವರಿಬ್ಬರಿಗೆ ಮಾತ್ರನಾ ಸೋಲಿಸೋದು ಗೊತ್ತಿರೋದು. ಅವರನ್ನ ಸೋಲಿಸೋದಕ್ಕೆ ವಾರಗಳು ಬೇಡ, ಕೇವಲ ಒಂದೇ ಒಂದು ಪ್ರಚಾರಕ್ಕೆ ಹೋದ್ರೆ ಸಾಕು..’ ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಸಿಎಂಗಳಾದ ಹೆಚ್.ಡಿ ಕುಮಾರಸ್ವಾಮಿ ಮತ್ತು ಬಿಎಸ್ ಯಡಿಯೂರಪ್ಪ ವಿರುದ್ಧ ಹರಿಹಾಯ್ದಿರುವ ಪರಿ.

ಮಗ ಯತೀಂದ್ರ ಜೊತೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ  ಶ್ರೀಗಳ ಆಶೀರ್ವಾದ ಪಡೆದರು. ಪುತ್ರ ಯತೀಂದ್ರ ಸಹ ಶ್ರೀಗಳಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಕಾಲಿಗೆ ಎರಗಿ ಆಶಿವಾರ್ವಾದ ಪಡೆದರು. ಇದಕ್ಕೂ ಮುನ್ನ ಮಾಧ್ಯಮದವರ ಜತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಹೇಳಿದಿಷ್ಟು..

‘ನನಗೂ ಚುನಾವಣೆಯಲ್ಲಿ ಸೋಲಿಸೋದು ಗೊತ್ತಿದೆ. ಅವರಿಬ್ಬರು ಮಾತ್ರನಾ ಸೋಲಿಸೋದು ಗೊತ್ತಿರೋದು. ಅವರನ್ನ ಸೋಲಿಸೋದಕ್ಕೆ ವಾರಗಳು ಬೇಕಾಗಿಲ್ಲ ಕೇವಲ ಒಂದೇ ಒಂದು ಪ್ರಚಾರಕ್ಕೆ ಹೋದ್ರೆ ಸಾಕು. ಉಪಚುನಾವಣೆಯಲ್ಲೂ ಇಂತಹದ್ದೇ ಹೇಳಿಕೆ ಕೊಟ್ಟಿದ್ದೆ, ಎಲ್ಲರೂ ಒಂದಾಗಿ ಪ್ರಯತ್ನ ಮಾಡಿದ್ರು. ದೇವೇಗೌಡರು ಬಂದು ಕಣ್ಣೀರು ಹಾಕಿದ್ರು.ಆದರೂ ನನ್ನನ್ನ ಯಾರು ಏನು ಮಾಡಲು ಆಗಲೇ ಇಲ್ಲ. ರಾಜಕೀಯ ಪರಿಸ್ಥಿತಿಗಳು ಬಡಲಾಗಿರಬಹುದು ಆದ್ರೆ ಗೆಲುವು ನನ್ನದೇ. ವಿಶ್ವನಾಥ್ ,ಶ್ರೀನಿವಾಸ್ ಪ್ರಸಾದ್ ನನ್ನ ಕ್ಷೇತ್ರದವರೆ ಅಲ್ಲ. ಕಾಂಗ್ರೆಸ್ ಗೂ ಅವರಿಗೂ ಸಂಬಂಧವಿಲ್ಲ. ನಾನು ಯಾರಿಗೂ ಹೆದರುವುದಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಿಂದಲೇ ನಾನು ಸ್ಪರ್ಧೆ ಮಾಡುತ್ತೇನೆ. ಚಾಮುಂಡೇಶ್ವರಿ ಬಿಟ್ಟು ಬೇರೆಲ್ಲೂ ಸ್ಪರ್ಧೆ ಮಾಡೋದಿಲ್ಲ, ಮಾಡೋದಿಲ್ಲ, ಮಾಡೋದಿಲ್ಲ. ಅವರಪ್ಪನಾಣೆ ಅವರು ಗೆಲ್ಲಲ್ಲ.

Leave a Reply