ಕಾಮನ್ವೆಲ್ತ್ ಗೇಮ್ಸ್: ಹೀನಾಗೆ ಚಿನ್ನ, ಸೆಮೀಸ್ ಗೆ ಪುರುಷರ ಹಾಕಿ, ಬಾಕ್ಸಿಂಗ್ ನಲ್ಲಿ ಪದಕ ಖಚಿತ

ಡಿಜಿಟಲ್ ಕನ್ನಡ ಟೀಮ್:

ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ನಿನ್ನೆ ಭಾರತ ಭರ್ಜರಿಯಾಗಿ ಪದಕಗಳ ಬೇಟೆಯಾಡಿತ್ತು. ಇಂದು ಶೂಟಿಂಗ್ ನಲ್ಲಿ ಪದಕದ ಭರವಸೆಯ ಶೂಟರ್ ಗಗನ್ ನಾರಂಗ್ ನಿರಾಸೆ ಮೂಡಿಸಿದ್ದರು. ಆದರೆ ಮಹಿಳೆಯರ ಶೂಟಿಂಗ್ ನಲ್ಲಿ ಹೀನಾ ಸಿಂಧು ಚಿನ್ನ ಗೆದ್ದು ಅಭಿಮಾನಿಗಳಲ್ಲಿನ ನಿರಾಸೆ ಮರೆ ಮಾಚಿದರು.

ಮಹಿಳೆಯರ 25 ಮೀ. ಪಿಸ್ತೂಲ್ ವಿಭಾಗದಲ್ಲಿ ಹೀನಾ ಸಿಧು 34 ಅಂಕಗಳನ್ನು ಪಡೆದು ಅಗ್ರಸ್ಥಾನ ಪಡೆದರು. ಅದರರೊಂದಿಗೆ ತಮ್ಮ ನಿಕಟ ಸ್ಪರ್ಧಿ ಆಸ್ಟ್ರೇಲಿಯಾದ ಎಲಿನಾ ಗಲಿಯಬೊವಿಚ್ (32) ಅವರನ್ನು ಹಿಂದಿಕ್ಕಿ ಚಿನ್ನಕ್ಕೆ ಹೀನಾ ಕೊರಳೊಡ್ಡಿದರು.

ಪುರುಷರ ಹಾಕಿ ಪಂದ್ಯದಲ್ಲಿ ಭಾರತ ಹಾಕಿ ತಂಡ ಮಲೇಷ್ಯಾ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಜಯಿಸಿದ್ದು, ಸೆಮಿಫೈನಲ್ ಸುತ್ತಿಗೆ ಲಗ್ಗೆ ಇಟ್ಟಿದೆ. ಇನ್ನು ಪುರುಷರ ಬಾಕ್ಸಿಂಗ್ ನ 46-49 ಕೆ.ಜಿ  ವಿಭಾಗದಲ್ಲಿ ಭಾರತದ ಅಮಿತ್, ಸ್ಕಾಟ್ಲೆಂಡಿನ ಅಖೀಲ್ ಅಹ್ಮದ್ ವಿರುದ್ಧ ಜಯ ಸಾಧಿಸಿ ಉಪಾಂತ್ಯಕ್ಕೆ ತಲುಪಿದ್ದಾರೆ. ಅದರೊಂದಿಗೆ ಕನಿಷ್ಠ ಕಂಚಿನ ಪದಕ ಖಚಿತವಾಗಿದೆ.

ಇನ್ನು ಇಂದು ಪದಕದ ನಿರೀಕ್ಷೆ ಇದ್ದ ಪುರುಷರ 50 ಮೀ. ರೈಫಲ್ ಪ್ರೋನ್ ವಿಭಾಗದಲ್ಲಿ ಭರವಸೆಯ ಶೂಟರ್ ಗಗನ್ ನಾರಂಗ್ ನಿರಾಸೆ ಮೂಡಿಸಿದರು. ಏಳನೇ ಸ್ಥಾನ ಪಡೆಯುವ ಮೂಲಕ ಆರಂಭದಲ್ಲೇ ನಾರಂಗ್ ಸ್ಪರ್ಧೆಯಿಂದ ಹೊರಬಿದ್ದರು. ಇದೇ ವಿಭಾಗದಲ್ಲಿ ಸ್ಪರ್ಧಿಸಿಿದ್ದ ಭಾರತದ ಮತ್ತೊಬ್ಬ ಶೂಟರ್ ಚೈನ್ ಸಿಂಗ್ ಒಂದು ಹಂತದಲ್ಲಿ ಮೊದಲ ಸ್ಥಾನದಲ್ಲಿದ್ದರು. ಆದರೆ, ಅಂತಿಮ ಹಂತದಲ್ಲಿ ಗುರಿ ಕಳೆದುಕೊಂಡ ಪರಿಣಾಮ ನಾಲ್ಕನೇ ಸ್ಥಾನಕ್ಕೆ ಕುಸಿದು ಕೂದಲೆಳೆಯ ಅಂತರದಲ್ಲಿ ಪದಕ ವಂಚಿತರಾರು.

 

Leave a Reply