ಕಾಮನ್ವೆಲ್ತ್ ಕ್ರೀಡಾಕೂಟ: ಕುಸ್ತಿಯಲ್ಲಿ ಸುಶೀಲ್- ರಾಹುಲ್ ಗೆ ಚಿನ್ನ, ಬಬಿತಾಗೆ ಬೆಳ್ಳಿ

ಡಿಜಿಟಲ್ ಕನ್ನಡ ಟೀಮ್:

ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಒಂದು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಲಭಿಸಿವೆ. ಪುರುಷರ 57 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ ಭಾರತದ ರಾಹುಲ್ ಅವಾರೆ ಅವರು ಕೆನಡಾದ ಟಕಾವಾಲೆ ವಿರುದ್ಧ 15-7 ಅಂಕಗಳಿಂದ ಗೆದ್ದು ಸ್ವರ್ಣಕ್ಕೆ ಕೊರಳೊಡ್ಡಿದರು.

ಮಹಿಳೆಯರ 76 ಕೆ.ಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಕಿರಣ್ ಕಂಚು ಪಡೆದಿದ್ದಾರೆ.

ಮಹಿಳೆಯರ 53 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ ಭಾರತದ ಬಬಿತಾ ಫೋಗಟ್ ಕೆನಡಾದ ಎದುರಾಳಿ ವಿರುದ್ಧ ಮಣಿದು ಬೆಳ್ಳಿಗೆ ತೃಪ್ತಿಪಟ್ಟರು. ಪುರುಷರ 74 ಕೆ.ಜಿ ವಿಭಾಗದಲ್ಲಿ ಸುಶೀಲ್ ಕುಮಾರ್ ಚಿನ್ನದ ಪದಕದ ಸುತ್ತಿನಲ್ಲಿ ದಕ್ಷಿಣ ಆಫ್ರಿಕಾ ಎದುರಾಳಿ ವಿರುದ್ಧ 10-0 ಅಂಕಗಳಿಂದ ಗೆದ್ದರು.

ಇನ್ನು ಮಹಿಳೆಯರ 50 ಮೀ. ರೈಫಲ್ ಪ್ರೋನ್ ಶೂಟಿಂಗ್ ನಲ್ಲಿ ತೇಜಸ್ವಿನಿ ಸಾವಂತ್ ಬೆಳ್ಳಿ ಪದಕ ಪಡೆದಿದ್ದಾರೆ.

ಇದರೊಂದಿಗೆ ಭಾರತ ಪದಕ ಪಟ್ಟಿಯಲ್ಲಿ 14 ಚಿನ್ನ, 6 ಬೆಳ್ಳಿ, 9 ಕಂಚಿನೊಂದಿಗೆ 29 ಪದಕ ಪಡೆದು 3ನೇ ಸ್ಥಾನದಲ್ಲಿದೆ.

Leave a Reply